60ನೇ ವರ್ಷಕ್ಕೆ ಎರಡನೇ ಮದುವೆಯಾದ ನಟ ಆಶಿಶ್ ವಿದ್ಯಾರ್ಥಿ..!

ಇತ್ತಿಚೆಗೆ ಕೆಲ ಸೆಲೆಬ್ರೆಟಿಗಳು ಮದುವೆ ವಿಚಾರಕ್ಕೇನೆ ಸುದ್ದಿಯಾಗುತ್ತಿದ್ದಾರೆ. ನಟ ಆಶಿಶ್ ವಿದ್ಯಾರ್ಥಿ ಎರಡನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಸದ್ಯಕ್ಕೆ ಅವರ ವಯಸ್ಸು 60. ಈ ವಯಸ್ಸಿನಲ್ಲಿ ಮದುವೆಯಾಗಿರುವುದು ಅಭಿಮಾನಿಗಳಿಗೆ ಆಶ್ಚರ್ಯವನ್ನುಂಟು ಮಾಡಿದೆ.

ಆಶಿಶ್ ವಿದ್ಯಾರ್ಥಿ ಎರಡನೇ ಮದುವೆಯಾಗಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಈ ಮೊದಲು ಶಕುಂತಲಾ ಬರುವಾ ಅವರ ಮಗಳು ರಾಜೋಶಿ ಬರುವಾ ಅವರ ಜೊತೆಗೆ ಮೊದಲ ಮದುವೆಯಾಗಿದ್ದರು. ಇದೀಗ ಎರಡನೇ ಮದುವೆಯಾಗಿದ್ದಾರೆ. ಆದರೆ ಎರಡನೇ ಮದುವೆಯಾಗಿರುವ ವಧು ಬಗ್ಗೆ ಯಾವುದೇ ಮಾಹಿತಿ ಇಲ್ಲ.

ನಟ ಆಶಿಶ್ ವಿದ್ಯಾರ್ಥಿ ಬಹುಭಾಷಾ ನಟ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಭಾಷೆಯಲ್ಲೂ ಅಭಿನಯಿಸಿದ್ದಾರೆ‌. ಖಳನಾಯಕನ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. ಅವರದ್ದೇ ಯೂಟ್ಯೂಬ್ ಚಾನೆಲ್ ಹೊಂದಿರುವ ಆಶಿಶ್ ವಿದ್ಯಾರ್ಥಿ, ದೇಶ – ವಿದೇಶ ಸುತ್ತುತ್ತಾ ಅಡುಗೆ, ಟ್ರಾವೆಲ್ ಅಂತ ಎಲ್ಲವನ್ನು ತೋರಿಸುತ್ತಿದ್ದಾರೆ. ಈಗ ಎರಡನೇ ಮದುವೆಯಾಗಿ ಆಶ್ಚರ್ಯ ಮೂಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks