ಬೆಂಗಳೂರು: ವಿಜಯಲಕ್ಷ್ಮೀ ದರ್ಶನ್ ಇತ್ತೀಚೆಗೆ ಪೊಲೀಸ್ ಕಮಿಷನರ್ ಗೆ ದೂರೊಂದನ್ನ ನೀಡಿದ್ದರು. ಕೆಟ್ಟ ಕೆಟ್ಟ, ಅಶ್ಲೀಲ ಕಮೆಂಟ್ ಗಳಿಂದ ಬೇಸತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ದೂರು ನೀಡಿದ್ದರು. ಆ ಸಂಬಂಧ ಇಂದು ಕೂಡ ಕಮಿಷನರ್ ಕಚೇರಿಗೆ ವಿಜಯಲಕ್ಷ್ಮೀ ದರ್ಶನ್ ಭೇಟಿ ನೀಡಿದ್ದಾರೆ.
ಈ ಸಂಬಂಧ ಮಾತನಾಡಿರುವ ವಿಜಯಲಕ್ಷ್ಮೀ, ನಾನು ಸಲ್ಲಿಸಿದ್ದ ದೂರನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ನಮ್ಮ ದೇಶದಲ್ಲಿ ವ್ಯವಸ್ಥೆ ಮತ್ತು ಕಾನೂನು ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೇನೆ. ಪ್ರಾಮಾಣಿಕವಾಗಿ ಹೇಳಬೇಕು ಎಂದರೆ ಈ ನಂಬಿಕೆಯನ್ನೇ ಪ್ರಶ್ನೆ ಮಾಡಬೇಕಾಗಿ ಬಂದಿದೆ. ಬೇರೆ ಮಹಿಳೆ ನೀಡಿದ ದೂರಿಗೆ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದು ನಿಜವಾಗಿಯೂ ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಹಾಗಾದರೆ ನನ್ನ ದೂರು ಮುಖ್ಯವಲ್ಲವೇ..?
ನನ್ನ ವಕೀಲರ ನಿರಂತರ ಫಾಲೋವಪ್ ಗಳ ನಂತರವೂ ಯಾವುದೇ ಕ್ರಮವಿಲ್ಲ. ಇಂದು ವೈಯಕ್ತಿಕವಾಗಿಯೇ ಹೋಗಿ ಅವರಿಗೆ ನೆನಪಿಸಬೇಕಾಯ್ತು. ಯಾವುದೇ ಬಾಹ್ಯ ಒತ್ತಡ ಅಥವಾ ಪ್ರಭಾವ ಇದಕ್ಕೆ ಕಾರಣವಾಗದಿರಲಿ. ನಾನು ಇದನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ತಮ್ಮ ಬೇಸರವನ್ನು ಹೊರ ಹಾಕಿದ್ದಾರೆ. ಅಶ್ಲೀಲ ಮೆಸೇಜ್ ಗಳು, ಕೆಟ್ಟ ಕಮೆಂಟ್ ಗಳ ವಿರುದ್ಧ ದೂರು ನೀಡಿದ ಮೇಲೆ ತಮ್ಮ ಸೋಷಿಯಲ್ ಮೀಡಿಯಾ ಸ್ಟೋರಿಯಲ್ಲೂ ಅದನ್ನ ಹಂಚಿಕೊಂಡಿದ್ದರು. ಆಗಲೇ ತಿಳಿದದ್ದು ಎಷ್ಟು ಕೆಟ್ಟ ಕೆಟ್ಟ ಕಮೆಂಟ್ ಗಳನ್ನ ಕಿಡಿಗೇಡಿಗಳು ಹಾಕಿದ್ದಾರೆ ಎಂಬುದು. ಅದರ ವಿರುದ್ಧ ವಿಜಯಲಕ್ಷ್ಮೀ ಹೋರಾಟ ಮುಂದುವರೆದಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















