Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗರುಡ ಪುರಾಣದ ಪ್ರಕಾರ  ಯಾವ ತಪ್ಪು ಮಾಡಿದರೆ ನರಕದಲ್ಲಿ ಯಾವ ಶಿಕ್ಷೆ?

---Advertisement---

ಮಹಾಪುರಾಣಗಳಲ್ಲಿ ಒಂದಾದ ಗರುಡ ಪುರಾಣವು ಜೀವನ ಮತ್ತು ಮರಣದ ನಂತರದ ರಹಸ್ಯಗಳನ್ನು ಬಿಚ್ಚಿಡುತ್ತದೆ. ಒಳ್ಳೆಯ ಕೆಲಸ ಮಾಡಿದವರು ಸ್ವರ್ಗ ಸುಖ ಅನುಭವಿಸಿದರೆ, ಪಾಪ ಮಾಡಿದವರು ನರಕದ ಯಾತನೆ ಅನುಭವಿಸಬೇಕಾಗುತ್ತದೆ ಎಂದು ವಿಷ್ಣುವು ಗರುಡನಿಗೆ ವಿವರಿಸಿದ್ದಾನೆ.

ಗರುಡ ಪುರಾಣದ ಪ್ರಕಾರ ಸುಮಾರು 36 ರೀತಿಯ ನರಕಗಳಿದ್ದು, ಪ್ರತಿಯೊಂದು ಪಾಪಕ್ಕೂ ಬೆರೆ ಬೇರೆ ರೀತಿಯ ಕಠಿಣ ಶಿಕ್ಷೆಗಳನ್ನು ನಿಗದಿಪಡಿಸಲಾಗಿದೆ. ಗರುಡ ಪುರಾಣವು ಕೇವಲ ಭಯ ಹುಟ್ಟಿಸುವ ಗ್ರಂಥವಲ್ಲ, ಬದಲಾಗಿ ಮನುಷ್ಯನು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವ ಕೈಗನ್ನಡಿಯಾಗಿದೆ. ದೇವರನ್ನು ಮತ್ತು ಹಿರಿಯರನ್ನು ಗೌರವಿಸುವುದು ಹಾಗೂ ಅಧರ್ಮದಿಂದ ದೂರವಿರುವುದು ಮೋಕ್ಷಕ್ಕೆ ದಾರಿ ಎಂದು ಈ ಪುರಾಣ ಬೋಧಿಸುತ್ತದೆ.

ಮುಗ್ಧ ಜನರಿಗೆ ತೊಂದರೆ ಕೊಡುವವರು ಮಂಜುಸ ಎಂಬ ನರಕಕ್ಕೆ ತಲುಪುತ್ತಾರೆ. ಇಲ್ಲಿ ಸುಡುವ ಕಬ್ಬಿಣದ ಕೋಲುಗಳಿಂದ ಕೂಡಿದ್ದು, ಪಾಪಿಗಳನ್ನು ಅದರಲ್ಲಿ ಸುಡಲಾಗುತ್ತದೆ.

ಬೇರೆಯವರ ಆಸ್ತಿ ಅಥವಾ ಭೂಮಿಯನ್ನು ಅಕ್ರಮವಾಗಿ ಕಸಿದುಕೊಂಡವರಿಗೆ ಕುಂಹಿಪಕ ನರಕಕ್ಕೆ ಕಳುಹಿಸಲಾಗುತ್ತದೆ. ಇಲ್ಲಿ ಬಿಸಿ ಮರಳು ಮತ್ತು ಬೆಂಕಿಯಲ್ಲಿ ಶಿಕ್ಷೆ ನೀಡಲಾಗುತ್ತದೆ.

ಜೀವನದುದ್ದಕ್ಕೂ ಸುಳ್ಳು ಹೇಳುವವರು ಮತ್ತು ಸುಳ್ಳು ಸಾಕ್ಷಿ ನುಡಿಯುವವರನ್ನು ರೌರವ ಈ ನರಕದಲ್ಲಿ ಮೊಳೆಗಳಿಂದ ಹೊಡೆಯಲಾಗುತ್ತದೆ.

ಗಂಡ-ಹೆಂಡತಿಯರ ನಡುವೆ ಅನುಮಾನದ ಬೀಜ ಬಿತ್ತಿ ಅವರನ್ನು ಬೇರ್ಪಡಿಸುವವರಿಗೆ ಮಹಾಪ್ರಭಾ ಎಂಬ ಈ ನರಕದಲ್ಲಿ ಎತ್ತರದ ಮುಳ್ಳುಗಳಿಂದ ಚುಚ್ಚಲಾಗುತ್ತದೆ.

ಹೊಲ, ಮನೆ ಅಥವಾ ಹಳ್ಳಿಗಳಿಗೆ ಬೆಂಕಿ ಹಚ್ಚುವ ಕ್ರೂರ ಮನಸ್ಸಿನವರು ಮಹಾರೌರವ ಎಂಬ ಈ ನರಕದ ಜ್ವಾಲೆಯಲ್ಲಿ ನಿರಂತರವಾಗಿ ಸುಡುತ್ತಿರುತ್ತಾರೆ.

ಗೋಹತ್ಯೆ ಮಾಡುವವರಿಗೆ, ಮಹಾವಿಚಿ ಈ ನರಕದಲ್ಲಿ ಶಿಕ್ಷೆ ಕಾಯ್ದಿರಿಸಲಾಗಿದೆ. ಇದು ರಕ್ತ ಮತ್ತು ದೊಡ್ಡ ಮುಳ್ಳುಗಳಿಂದ ತುಂಬಿದ್ದು, ಪಾಪಿಗಳನ್ನು ಮುಳ್ಳುಗಳಿಂದ ಚುಚ್ಚಿ ಹಿಂಸಿಸಲಾಗುತ್ತದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now