ಬೆಳಗಾವಿ: ಪೊಲೀಸರೆಂದರೆ ನಮ್ಮ ರಕ್ಷಕರು. ಅವರಿದ್ದರೆ ಯಾವುದೇ ಭಯವಿರಲ್ಲ. ಕಳ್ಳರಿಗೂ ನಡುಕ ಇದು ಎಲ್ಲರು ನಂಬುವ ಸತ್ಯ. ನಂಬುವಂತೆಯೇ ವ್ಯವಸ್ಥೆ ಕೂಡ ಇದೆ. ಆದ್ರೆ ಆ ವ್ಯವಸ್ಥೆಯಲ್ಲಿ ಅಲ್ಲೊಬ್ಬರು ಇಲ್ಲೊಬ್ಬರೆಂಬಂತೆ ಪೊಲೀಸರೇ ಕಳ್ಳರ ಜೊತೆ ಸೇರಿ ಅಪರಾಧ ಮಾಡಲು ಶುರು ಮಾಡಿದ್ದಾರೆ. ಅಂಥ ಘಟನೆ ಇತ್ತೀಚೆಗೆ ಸಾಕಷ್ಟು ವರದಿಯಾಗಿದೆ. ಇತ್ತೀಚೆಗೆ ಸ್ಮಗ್ಲಿಂಗ್ ಮಾಲ್ ಅನ್ನ ಪೊಲೀಸರೇ ಮಾರಲು ಹೊರಟಿದ್ದು, ಮೊನ್ನೆ ಮೊನ್ನೆ ಸಿಎಂ ಭದ್ರತೆಗಿದ್ದವರೇ ಗಾಂಜಾ ಮಾರಾಟದಲ್ಲಿ ತಗಲಾಕಿಕೊಂಡಿದ್ದು ಉದಾಹರಣೆ ನೋಡಬಹುದು.
ಇದೀಗ ಮತ್ತೆ ಅಂಥದ್ದೇ ಘಟನೆ ನಡೆದಿದೆ. ಲಂಚ ಪಡೆಯಲು ಹೋಗಿ ಇಬ್ಬರು ಪೊಲೀಸ್ ಅಧಿಕಾರಿಗಳು ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಮಟಕಾ ಪ್ರಕರಣ ದಾಖಲಿಸುವುದಾಗಿ ಹೆದರಿಸಿ ಹಣ ಪಡೆಯಲು ಹೋಗಿದ್ದಾರೆ. ಈ ವೇಳೆ ಎಸಿಬಿ ಕೈಗೆ ತಗಲಾಕಿಕೊಂಡಿದ್ದಾರೆ.
ಪ್ರಕರಣ ದಾಖಲಿಸದೇ ಇರಲು ರೂ.50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ ರೂ.15,000ಕ್ಕೆ ವ್ಯವಹಾರ ಕುದುರಿಸಿದ್ದರು. ಲಂಚ ಕೇಳಿದ್ದಕ್ಕೆ ಸಂಬಂಧಪಟ್ಟಂತೆ ಪರಶುರಾಮ ಗಾಡಿವಡ್ಡರ ಸೋಮವಾರ ಎಸಿಬಿಗೆ ದೂರು ನೀಡಿದ್ದರು. ದೂರು ಸ್ವೀಕರಿಸಿ ಕಾರ್ಯಾಚರಣೆ ನಡೆಸುತ್ತಿರುವ ಎಸಿಬಿ ಅಧಿಕಾರಿಗಳು, ಲಂಚ ಪಡೆಯುವಾಗ ದಾಳಿ ನಡೆಸಿ ಇಬ್ಬರೂ ಪೊಲೀಸ್ ಪೇದೆಗಳನ್ನು ವಶಕ್ಕೆ ಪಡೆದಿದ್ದಾರೆ.