Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ : ಬೇಸಿಗೆ, ದಸರಾ ರಜೆ ಬಗ್ಗೆ ಇಲ್ಲಿದೆ ಮಾಹಿತಿ

---Advertisement---

ಸುದ್ದಿಒನ್, ಬೆಂಗಳೂರು, ಮೇ.08 : ರಾಜ್ಯದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 2026-27ನೇ ಸಾಲಿನ ಶೈಕ್ಷಣಿಕ ಸಾಲಿನ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.

ಹೊಸ ಶೈಕ್ಷಣಿಕ ವರ್ಷವು 2026ರ ಮೇ 29ರಿಂದ ಆರಂಭವಾಗಲಿದೆ. ಇಲಾಖೆಯ ಪ್ರಕಟಣೆಯಂತೆ ಶೈಕ್ಷಣಿಕ ವರ್ಷವನ್ನು ಎರಡು ಅವಧಿಗಳಾಗಿ ವಿಂಗಡಿಸಲಾಗಿದೆ: ಮೊದಲನೇ ಅವಧಿ 29.05.2026 ರಿಂದ 02.10.2026 ರವರೆಗೆ. ಎರಡನೇ ಅವಧಿ 22.10.2026 ರಿಂದ 10.04.2027 ರವರೆಗೆ. ರಜಾ ದಿನಗಳ ವಿವರಗಳನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ದಸರಾ ಹಾಗೂ ಬೇಸಿಗೆ ರಜೆಯ ದಿನಾಂಕಗಳನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

ದಸರಾ ರಜೆ: 03.10.2026 ರಿಂದ 21.10.2026 ರವರೆಗೆ.

ಬೇಸಿಗೆ ರಜೆ: 11.04.2027 ರಿಂದ 28.05.2027 ರವರೆಗೆ.

ವಾರ್ಷಿಕ ಕರ್ತವ್ಯದ ದಿನಗಳ ಲೆಕ್ಕಾಚಾರ:

ಒಟ್ಟು 365 ದಿನಗಳಲ್ಲಿ ರಜೆಗಳನ್ನು ಹೊರತುಪಡಿಸಿ, ಶೈಕ್ಷಣಿಕ ಚಟುವಟಿಕೆಗಳಿಗಾಗಿ ಈ ಕೆಳಗಿನಂತೆ ದಿನಗಳನ್ನು ಮೀಸಲಿಡಲಾಗಿದೆ
ಒಟ್ಟು ಶಾಲಾ ಕರ್ತವ್ಯದ ದಿನಗಳು: 245 ದಿನಗಳು.

ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ: 26 ದಿನಗಳು.

ಪಠ್ಯೇತರ ಚಟುವಟಿಕೆಗಳು/ಸ್ಪರ್ಧೆಗಳಿಗಾಗಿ: 24 ದಿನಗಳು.

ಬೋಧನಾ-ಕಲಿಕಾ ಪ್ರಕ್ರಿಯೆಗೆ ಲಭ್ಯವಿರುವ ದಿನಗಳು: 181 ದಿನಗಳು.

ಶಾಲಾ ಮುಖ್ಯಸ್ಥರಿಗೆ ಮತ್ತು ಶಿಕ್ಷಕರಿಗೆ ಪ್ರಮುಖ ಸೂಚನೆಗಳು:

ದಾಖಲಾತಿ ಅಭಿಯಾನ: 2026ರ ಮೇ 30ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದ್ದು, ಜೂನ್ 30ರೊಳಗೆ ಪೂರ್ಣಗೊಳಿಸಬೇಕು. 6ರಿಂದ 18 ವರ್ಷದೊಳಗಿನ ಎಲ್ಲಾ ಮಕ್ಕಳನ್ನು ಶಾಲೆಗೆ ದಾಖಲಿಸಲು ವಿಶೇಷ ಅಭಿಯಾನ ನಡೆಸಲು ಸೂಚಿಸಲಾಗಿದೆ.

ಸರ್ಕಾರಿ ಶಾಲೆಯ 1ರಿಂದ 10ನೇ ತರಗತಿಯ ಮಕ್ಕಳಿಗೆ 2 ಜೊತೆ ಉಚಿತ ಸಮವಸ್ತ್ರ ಮತ್ತು ಪಠ್ಯಪುಸ್ತಕಗಳನ್ನು ಶಾಲಾ ಆರಂಭದ ದಿನವೇ ವಿತರಿಸಲು ಕ್ರಮ ವಹಿಸಬೇಕು.

ಶಾಲೆಗಳಿಗೆ ಸಂಬಂಧಿಸಿದ ಸ್ಥಳೀಯ ರಜೆಗಳನ್ನು ಆಯಾ ಕ್ಷೇತ್ರದ ಶಿಕ್ಷಣಾಧಿಕಾರಿಗಳ (BEO) ಪೂರ್ವಾನುಮತಿ ಪಡೆದು ಜೂನ್ ಮೊದಲ ವಾರದಲ್ಲೇ ಅಂತಿಮಗೊಳಿಸಬೇಕು. ಮಳೆ ಅಥವಾ ಅನಿರೀಕ್ಷಿತ ಕಾರಣಗಳಿಂದ ರಜೆ ಘೋಷಿಸಿದರೆ, ಆ ದಿನಗಳನ್ನು ಸರಿದೂಗಿಸಲು ಮುಂದಿನ ರಜಾ ದಿನಗಳಲ್ಲಿ ಪೂರ್ಣ ದಿನದ ಶಾಲೆ ನಡೆಸಿ ಪಠ್ಯಕ್ರಮ ಪೂರ್ಣಗೊಳಿಸಲು ಸೂಚಿಸಲಾಗಿದೆ.

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...