ಇದೀಗ ಯುವತಿಯೊಬ್ಬಳು ಮಹಿಳಾ ದಿನದಂದೇ ಈ ಒಂದು ವಿಚಾರಕ್ಕೆ ಬೇಸೆತ್ತು ತಲೆ ಬೊಳಿಸಿಕೊಂಡಿರುವ ಘಟನೆಯೊಂದು ವರದಿಯಾಗಿದೆ. ಯಾವ ಕಾರಣ ಎಂದು ಕೇಳಿದರೆ ಆಶ್ಚರ್ಯ ಪಡುತ್ತಿರಾ.ಮದುವೆ ವಿಚಾರಕ್ಕೆ ಬೇಸೆತ್ತು ಈ ಯುವತಿ ತಲೆ ಬೊಳಿಸಿಕೊಂಡಿರುವ ಘಟನೆಯೊಂದು ವರದಿಯಾಗಿದೆ.
ತನ್ನ ಕುಟುಂಬದಿಂದ ಹೆಚ್ಚುತ್ತಿರುವ ವಿವಾಹದ ಒತ್ತಡದಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ತಲೆ ಬೋಳಿಸಿಕೊಂಡಿದ್ದಾರೆ. ಮನೆಯವರ ನಿರಂತರ ಮದುವೆ ಒತ್ತಡದಿಂದ ಪಾರಾಗಲು ಈ ಹೆಜ್ಜೆ ಇಟ್ಟಿದ್ದೇನೆ ಎಂದು ಆಕೆ ಹೇಳಿದ್ದಾಳೆ.
https://www.instagram.com/reel/DVghc5aD4ie/?igsh=MWw5Y2NmbmliOW04Nw==
ವೀಡಿಯೊದಲ್ಲಿ, ಮಹಿಳೆ ತನ್ನ ಕೂದಲನ್ನು ಕತ್ತರಿಸುವುದು ತನಗೆ ನಿಜವಾಗಿಯೂ ಇಷ್ಟಿರಲಿಲ್ಲ ಎಂದು ವಿವರಿಸುತ್ತಾಳೆ. ಇತರ ಅನೇಕ ಮಹಿಳೆಯರಂತೆ ತಾನು ತನ್ನ ಕೂದಲನ್ನು ಅತೀಯಾಗಿ ಪ್ರೀತಿಸುತ್ತಿದ್ದೆ, ಆದರೆ ಮದುವೆಯಾಗಲು ತನ್ನ ಕುಟುಂಬದಿಂದ ನಿರಂತರ ಒತ್ತಡದಿಂದಾಗಿ ಮಣಿದು ನಾನು ಈ ನಿರ್ಧಾರ ಕೈಗೊಂಡಿದ್ದೇನೆ ಎಂದಿದ್ದಾರೆ.
ಯುವತಿ ತನ್ನ ವಿಡಿಯೋದಲ್ಲಿ ಸಮಾಜದ ನಡವಳಿಕೆ, ವರ್ತನೆಯ ಬಗ್ಗೆ ಕಿಡಿಕಾರಿದ್ದಾರೆ.ಮದುವೆಯ ವಿಚಾರದಲ್ಲಿ ಹೆಣ್ಣಿನ ಭಾವನೆಗಳಿಗೆ ಬೆಲೆ ಇಲ್ಲವೆ? ಮಹಿಳೆಯರು ತಮ್ಮ ನೋಟ ಅಥವಾ ಜೀವನ ನಿರ್ಧಾರಗಳ ಬಗ್ಗೆ ಅವರೇ ಆಯ್ಕೆಗಳನ್ನು ಮಾಡಿದಾಗ ಸಮಾಜ ಏಕೆ ಈ ರೀತಿಯಾಗಿ ಪ್ರತಿಕ್ರಿಯಿಸುತ್ತದೆ ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















