Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಾನವನಿಂದ ಮಾನವನ ಶೋಷಣೆ ಕೊನೆಗಾಣಿಸಲು ಸಮಾಜವಾದಿ ಸಮಾಜದ ನಿರ್ಮಾಣವಾಗಬೇಕು : ಕಾಮ್ರೇಡ್ ಜಿ.ಎಸ್. ಕುಮಾರ್

Facebook
Twitter
Telegram
WhatsApp

 

ಚಿತ್ರದುರ್ಗ : ಮಹಾನ್ ವ್ಯಕ್ತಿಗಳಿಗೆ ವೈಯಕ್ತಿಕ ಬದುಕು ಮತ್ತು ಸಾಮಾಜಿಕ ಬದುಕು ಬೇರೆಯಾಗಿರುವುದಿಲ್ಲ ಅವರು ಸಾಮಾಜಿಕ ಬದುಕನ್ನೇ ತಮ್ಮ ಬದುಕನ್ನಾಗಿಸಿಕೊಂಡಿರುತ್ತಾರೆ. ಅವರದು ನಿಜವಾದ ನಿಸ್ವಾರ್ಥ ಜೀವನ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ನಾಯಕರುಗಳಾದ ನೇತಾಜಿ, ಭಗತ್ ಸಿಂಗ್, ಸೂರ್ಯಸೇನ್‌, ಚಿತ್ತರಂಜನ್‌ದಾಸ್‌ ಇವರೆಲ್ಲರೂ ಸಾಮಾಜಿಕ ಬದುಕನ್ನೇ ತಮ್ಮ ಬದುಕನ್ನಾಗಿಸಿಕೊಂಡ ಮಹನೀಯರಾಗಿದ್ದಾರೆ. ಶಿವದಾಸ್ ಘೋಷ್‌ರವರು ಕೂಡ ಇಂತಹ ಮಹಾನ್ ಬದುಕನ್ನು ನಡೆಸಿದರು.” ಎಂದು ಕಾಮ್ರೇಡ್ ಜಿ.ಎಸ್. ಕುಮಾರ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸ್ಥಳೀಯ ಸಮಿತಿಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ
ಎಸ್.ಯು.ಸಿ.ಐ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರಾದ ಕಾಮ್ರೇಡ್ ಶಿವದಾಸ್‌ ಘೋಷ್ ರವರ ಜನ್ಮ ಶತಮಾನೋತ್ಸವದ ಅಂಗವಾಗಿ ಸಾರ್ವಜನಿಕ ಸಭೆ ಮತ್ತು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನುದ್ದುಶಿಸಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ‌ ಮಾತನಾಡಿದರು.

“ಸ್ವತಃ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಶಿವದಾಸ್‌ ಘೋಷ್‌ರವರು ಸ್ವಾತಂತ್ರ್ಯ ನಂತರ ಗಮನಿಸಿದ ಅಂಶವೆಂದರೆ, 1947ರಲ್ಲಿ ನಮ್ಮ ದೇಶ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದರೂ ಶೋಷಣೆಯಿಂದ ವಿಮುಕ್ತಿ ಹೊಂದಲಿಲ್ಲ, ಬ್ರಿಟಿಷರ ಜಾಗದಲ್ಲಿ ದೇಶೀಯ ಬಂಡವಾಳಗಾರರು ಶೋಷಕ ಬಂಡವಾಳಶಾಹಿ ವ್ಯವಸ್ಥೆಯನ್ನು ಅಸ್ಥಿತ್ವಕ್ಕೆ ತಂದರು. ಆದರೆ ಮಾನವನಿಂದ ಮಾನವನ ಶೋಷಣೆಗೆ ಕೊನೆ ಹಾಡಲು ಸಮಾಜವಾದಿ ಸಮಾಜದ ನಿರ್ಮಾಣವಾಗಬೇಕು.  ಈ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೊಗೆದು ಕಾರ್ಮಿಕ ವರ್ಗದ ಕ್ರಾಂತಿ ಆಗಬೇಕು. ಅದನ್ನು ನೆರವೇರಿಸಲು ಒಂದು ನೈಜ ಕಮ್ಯುನಿಸ್ಟ್ ಪಕ್ಷದ ಸ್ಥಾಪನೆ ಅನಿವಾರ್ಯ ಎಂಬುದನ್ನು ಮನಗಂಡ ಶಿವದಾಸ್ ಘೋಷ್‌ರವರು ಎಸ್.ಯು.ಸಿ.ಐ. ಕಮ್ಯೂನಿಸ್ಟ್‌ ಪಕ್ಷವನ್ನು ಸ್ಥಾಪಿಸಿದರು. ಓರ್ವ ಕಮ್ಯೂನಿಸ್ಟ್‌ನಲ್ಲಿ ಇರಬೇಕಾದ ಜೀವನ ಮೌಲ್ಯಗಳು ಕೇವಲ ಮಾತಿಗಷ್ಟೇ ಸೀಮಿತವಾಗದೆ ನಿಜ ಜೀವನದಲ್ಲಿ ಅವುಗಳ ಅಳವಡಿಕೆಯಾಗುವುದು ಬಹಳ ಮುಖ್ಯ. ಅಲ್ಲದೆ ಇವು ಎಲ್ಲ ಹೋರಾಟಗಳ ಬುನಾದಿ ಎಂಬುದನ್ನು ತಮ್ಮ ಸ್ವಂತ ಜೀವನದ ಮೂಲಕ ಕಾಮ್ರೆಡ್ ಶಿವದಾಸ್ ಘೋಷ್ ತೋರಿಸಿಕೊಟ್ಟರು. ಒಂದು ಕಮ್ಯುನಿಸ್ಟ್ ಪಕ್ಷಕ್ಕೆ ಬೇಕಾದ ವೈಚಾರಿಕ ನೆಲೆಗಟ್ಟನ್ನು ಅವರು ಒದಗಿಸಿಕೊಟ್ಟರು. ತಮ್ಮ ಜೀವಿತಾವಧಿಯಲ್ಲಿ ಸಮಕಾಲೀನ ಸಮಾಜವು ಮುಂದೊಡ್ಡಿದ ಜೀವನದ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಮಾರ್ಕ್ಸ್‌ವಾದಿ ವೈಚಾರಿಕತೆಯನ್ನಾಧರಿಸಿ ಉತ್ತರಿಸಿದರು. ತನ್ಮೂಲಕ ಈ ಯುಗದ ಓರ್ವ ಅಪ್ರತಿಮ ಮಾರ್ಕ್ಸ್‌ವಾದಿ ಚಿಂತಕರಾಗಿ ಹೊರಹೊಮ್ಮಿದರು” ಎಂದರು.

“ಕಮ್ಯುನಿಸ್ಟ್ ಚಳುವಳಿಗೆ ಬುನಾದಿಯಾಗಿರುವ ಕಾರ್ಮಿಕ ವರ್ಗ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ವ್ಯಕ್ತಿವಾದವನ್ನು ಹಿಮ್ಮೆಟ್ಟಿಸಿ ನಾವು ಹೊಸ ಮನುಷ್ಯರಾಗಬೇಕು. ಇದೇ ನಿಜವಾದ ಮನುಷ್ಯನ ಬದಲಾವಣೆ. ಮಾರ್ಕ್ಸ್‌ವಾದವನ್ನು ಭಾರತದ ನೆಲದಲ್ಲಿ ಸರಿಯಾಗಿ ಅಳವಡಿಸಿದವರು ಕಾಮ್ರೆಡ್ ಶಿವದಾಸ್ ಘೋಷ್. ಮಾರ್ಕ್ಸ್‌ವಾದ, ಲೆನಿನ್‌ವಾದ ಮತ್ತು ಶಿವದಾಸ್ ಘೋಷ್ ಚಿಂತನೆಗಳ ಒಟ್ಟು ಸಾರವನ್ನು ಅವರು ಬಿಟ್ಟು ಹೋಗಿದ್ದಾರೆ. ಶಿವದಾಸ್ ಘೋಷ್ ರವರ ಜನ್ಮ ಶತಾಬ್ದಿಯ ಸಂದರ್ಭದಲ್ಲಿ ಅವರ ಚಿಂತನೆಗಳನ್ನು ಕಾರ್ಮಿಕ ವರ್ಗ ಮೈಗೂಡಿಸಿಕೊಳ್ಳಬೇಕು, ಅದನ್ನು ಸಮಾಜದಲ್ಲಿ ಹರಡಬೇಕು ಮತ್ತು ನಮ್ಮ ದೇಶದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ಸನ್ನದ್ಧರಾಗಬೇಕು.”

“ಆದ್ದರಿಂದ ನಮ್ಮ ಪಕ್ಷ ಎಸ್.ಯು.ಸಿ.ಐ. ಕಮ್ಯೂನಿಸ್ಟ್‌ ಕಾಮ್ರೇಡ್‌ ಶಿವದಾಸ್‌ ಘೋಷ್‌ರವರ ವಿಚಾರಗಳನ್ನಾಧರಿಸಿ ಪ್ರಸಕ್ತ ಸಮಾಜದ ಸಮಸ್ಯೆಗಳ ವಿರುದ್ಧ ಹೋರಾಟಗಳನ್ನು ಕಟ್ಟುತ್ತಿದೆ. ಕಾರ್ಮಿಕ ವರ್ಗದ ವಿಮೋಚನೆಗಾಗಿ ಸಮಾಜವಾದಿ ಕ್ರಾಂತಿಯನ್ನು ನೆರವೇರಿಸಲು ರೈತ-ಕಾರ್ಮಿಕರನ್ನು ಸಂಘಟಿಸುತ್ತಿದೆ. ಪ್ರಸ್ತುತ ಜನವಿರೋಧಿ ಆಡಳಿತದಿಂದ ಬೇಸತ್ತಿರುವ ಜನತೆ ನಮ್ಮ ಈ ಹೋರಾಟವನ್ನು ಬೆಂಬಲಿಸಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಾಮ್ರೇಡ್‌ ಶಿವದಾಸ್‌ ಘೋಷ್‌ರವರ ಭಾಷಣಗಳನ್ನಾಧರಿಸಿದ ಮೂರು ಕನ್ನಡ ಪುಸ್ತಕಗಳಾದ ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಮತ್ತು ನಮ್ಮ ಕರ್ತವ್ಯಗಳು, ಆಗಸ್ಟ್‌ 15ರ ಸ್ವಾತಂತ್ರ್ಯ ಮತ್ತು ಜನತೆಯ ವಿಮುಕ್ತಿ, ಚೀನಾದ ಸಾಂಸ್ಕೃತಿಕ ಕ್ರಾಂತಿ – ಈ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಕಾಮ್ರೇಡ್‌ ಶಿವದಾಸ್‌ ಘೋಷ್‌ರವರ ಸೂಕ್ತಿ ಮತ್ತು ಛಾಯಚಿತ್ರ ಪ್ರದರ್ಶನ ಹಾಗೂ ಪುಸ್ತಕ ಮಾರಾಟ ಹಮ್ಮಿಕೊಳ್ಳಲಾಗಿತ್ತು.

ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಕಾ|| ವಿಜಯ್‌ಕುಮಾರ್‌ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಥಳೀಯ ಸಮಿತಿ ಸದಸ್ಯರಾದ ಕಾ|| ರವಿಕುಮಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಥಳೀಯ ಸಮಿತಿಯ ಇತರೆ ಸದಸ್ಯರಾದ ಕಾ|| ಸುಜಾತ, ಕಾ|| ವಿನಯ್‌, ಕಾ|| ಕುಮಾರ್‌ ಉಪಸ್ಥಿತರಿದ್ದರು. ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!