ತುಮಕೂರು: ಮನುಷ್ಯನಲ್ಲಿ ನಿಜವಾಗಲೂ ಮನುಷ್ಯತ್ವ ಉಳಿದಿದೆಯಾ ಎಂಬ ಪ್ರಶ್ನೆ ಮೂಡಿ ಅದೆಷ್ಟೋ ವರ್ಷಗಳೇ ಕಳೆದೋಗಿವೆ. ಆಕ್ಸಿಡೆಂಟ್ ಆದಾಗ ವಿಡಿಯೋ ಮಾಡೋದ್ರಲ್ಲಿ ಬ್ಯುಸಿ, ಸಾಯುವ ಸ್ಥಿತಿಯಲ್ಲಿರುವವರನ್ನ ವಿಲನ್ ಗಳ ರೀತಿ ನೋಡೋದು ಹೀಗೆ ಅದೆಷ್ಟು ಬೇಕು ಉದಾಹರಣೆ. ಕೊರೊನಾ ಬಂದಾಗ ಮನುಷ್ಯರು ನಡೆದುಕೊಂಡ ರೀತಿಯೇ ಸಾಕಲ್ಲವೇ. ಅದೆಲ್ಲವನ್ನು ಮೀರಿದಂತ ಮತ್ತೊಂದು ಘಟನೆ ತುಮಕೂರಿನಲ್ಲಿ ನಡೆದಿದೆ.
ತುರುವೆಕೆರೆ ತಾಲೂಕಿನ ಯಾವರೆಕೆರೆ ಗ್ರಾಮದಲ್ಲಿ ರಾಜು ಎಂಬಾತನಿದ್ದಾರೆ. ಅವರಿಗೆ ತೆಂಗಿನಕಾಯಿ ತೋಟವಿದೆ. ಆ ತೋಟದಲ್ಲಿ ಸಾಕಷ್ಟು ಮರಗಳಿವೆ. ಆದ್ರೆ ಎರಡೇ ಎರಡು ತೆಂಗಿನಕಾಯಿಗಾಗಿ ಮನುಷ್ಯತ್ವ ಬಿಟ್ಟು ನಡೆದುಕೊಂಡಿದ್ದಾರೆ. ಹರೀಶ್ ಎಂಬಾತನನ್ನ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಅದಕ್ಕೆ ಕೊಟ್ಟ ಕಾರಣ ತೆಂಗಿನಕಾಯಿ ಕದ್ದನೆಂದು.
ಈ ಸಂಬಂಧ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಹರೀಶ್ ಎಂಬಾತ ತೆಂಗಿನ ಕಾಯಿ ಕದ್ದ ಎಂಬ ಆರೋಪದ ಮೇಲೆ, ಮಾಲೀಕ ರಾಜು ಆತನನ್ನ ಲೈಟು ಕಂಬಕ್ಕೆ ಕಟ್ಟಿ, ಹಿಗ್ಗಾಮುಗ್ಗ ಥಳಿಸಿದ್ದಾನೆ. ಈ ವಿಡಿಯೋ ನೋಡಿ ಘಟನೆ ಖಂಡಿಸಿದ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ಆ ಮಾಲೀಕನ ವಿರುದ್ಧ ತುರುವೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.