Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತುಮಕೂರಿನಲ್ಲಿ ಇದೆಂಥಾ ಮಾನವೀಯತೆ ಬಿಟ್ಟ ಮನುಷ್ಯ : ತೆಂಗಿನಕಾಯಿಗಾಗಿ ಈ ರೀತಿ ನಡೆದುಕೊಳ್ಳೋದಾ..?

Facebook
Twitter
Telegram
WhatsApp

 

ತುಮಕೂರು: ಮನುಷ್ಯನಲ್ಲಿ ನಿಜವಾಗಲೂ ಮನುಷ್ಯತ್ವ ಉಳಿದಿದೆಯಾ ಎಂಬ ಪ್ರಶ್ನೆ ಮೂಡಿ ಅದೆಷ್ಟೋ ವರ್ಷಗಳೇ ಕಳೆದೋಗಿವೆ. ಆಕ್ಸಿಡೆಂಟ್ ಆದಾಗ ವಿಡಿಯೋ ಮಾಡೋದ್ರಲ್ಲಿ ಬ್ಯುಸಿ, ಸಾಯುವ ಸ್ಥಿತಿಯಲ್ಲಿರುವವರನ್ನ ವಿಲನ್ ಗಳ ರೀತಿ ನೋಡೋದು ಹೀಗೆ ಅದೆಷ್ಟು ಬೇಕು ಉದಾಹರಣೆ. ಕೊರೊನಾ ಬಂದಾಗ ಮನುಷ್ಯರು ನಡೆದುಕೊಂಡ ರೀತಿಯೇ ಸಾಕಲ್ಲವೇ‌. ಅದೆಲ್ಲವನ್ನು ಮೀರಿದಂತ ಮತ್ತೊಂದು ಘಟನೆ ತುಮಕೂರಿನಲ್ಲಿ ನಡೆದಿದೆ.

ತುರುವೆಕೆರೆ ತಾಲೂಕಿನ ಯಾವರೆಕೆರೆ ಗ್ರಾಮದಲ್ಲಿ ರಾಜು ಎಂಬಾತನಿದ್ದಾರೆ. ಅವರಿಗೆ ತೆಂಗಿನಕಾಯಿ ತೋಟವಿದೆ. ಆ ತೋಟದಲ್ಲಿ ಸಾಕಷ್ಟು ಮರಗಳಿವೆ. ಆದ್ರೆ ಎರಡೇ ಎರಡು ತೆಂಗಿನಕಾಯಿಗಾಗಿ ಮನುಷ್ಯತ್ವ ಬಿಟ್ಟು ನಡೆದುಕೊಂಡಿದ್ದಾರೆ. ಹರೀಶ್ ಎಂಬಾತನನ್ನ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಅದಕ್ಕೆ ಕೊಟ್ಟ ಕಾರಣ ತೆಂಗಿನಕಾಯಿ ಕದ್ದನೆಂದು.

ಈ ಸಂಬಂಧ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಹರೀಶ್ ಎಂಬಾತ ತೆಂಗಿನ ಕಾಯಿ ಕದ್ದ ಎಂಬ ಆರೋಪದ ಮೇಲೆ, ಮಾಲೀಕ ರಾಜು ಆತನನ್ನ ಲೈಟು ಕಂಬಕ್ಕೆ ಕಟ್ಟಿ, ಹಿಗ್ಗಾಮುಗ್ಗ ಥಳಿಸಿದ್ದಾನೆ. ಈ ವಿಡಿಯೋ ನೋಡಿ‌ ಘಟನೆ ಖಂಡಿಸಿದ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರ ಆ ಮಾಲೀಕನ ವಿರುದ್ಧ ತುರುವೆಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ಚಿನ ಶುಲ್ಕ ವಸೂಲಿ – ಶಿಕ್ಷಣ ಸಂಸ್ಥೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21: ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಹಲವು ಶಿಕ್ಷಣ ಸಂಸ್ಥೆಗಳು ಮಕ್ಕಳ ದಾಖಲಾತಿಗಾಗಿ ಮಾನವೀಯತೆ ಮರೆತು ಸರ್ಕಾರ ನಿಗಧಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು

ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಮತ ಎಣಿಕೆಕಾರ್ಯ ನಿರ್ವಹಿಸಲು ಸೂಚನೆ : ಟಿ.ವೆಂಕಟೇಶ್

ಚಿತ್ರದುರ್ಗ : ಮೇ 21 : ಏಪ್ರಿಲ್ 26ರಂದು ನಡೆದ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯವು ಜೂನ್ 04ರಂದು ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದ್ದು, ಚುನಾವಣೆಯ

ಬರ್ತ್ ಡೇ ಮುಗಿದು ವಾರವಾದರೂ ಬರ್ತಿವೆ ಗಿಫ್ಟ್ : ಅಷ್ಟೊಂದು ಸೀರೆಗಳನ್ನು ಸಂಗೀತಾಗೆ ಗಿಫ್ಟ್ ಮಾಡಿದ್ದು ಯಾರು..?

ಸಂಗೀತಾ ಶೃಂಗೇರಿ ಈಗ ಯಾರನ್ನೇ ಕೇಳಿದರೂ ಹೇಳುತ್ತಾರೆ. ಬಿಗ್ ಬಾಸ್ ನಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡವರು. ಎದುರಾಳಿಗಳಿಗೆ ತಿರುಗೇಟು ಕೊಟ್ಟವರು. ಗೆದ್ದೆ ಗೆಲ್ಲುತ್ತಾರೆ ಎಂದುಕೊಂಡಿದ್ದಾಗಲೇ ಕೊನೆಯ ಮೆಟ್ಟಿಲಿನ ತನಕ ಹೋಗಿ ವಾಪಾಸ್ ಬಂದವರು.

error: Content is protected !!