Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಕಮಲ್ ಹಾಸನ್ ಹೇಳಿದ ಸುಳ್ಳೊಂದು ಪಠ್ಯ ಪುಸ್ತಕದಲ್ಲಿ ಪ್ರಕಟ : ತಮಿಳು ಕನ್ನಡದ ತಾಯಿ ಎಂದು ಮುದ್ರಿಸಿದವರು ಯಾರು..?

---Advertisement---

ಬೆಂಗಳೂರು; ತಮಿಳು ನಟ ಕಮಲ್ ಹಾಸನ್ ಸುಳ್ಳೊಂದನ್ನ ಹೇಳಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದು ಅವರ ಸಿನಿಮಾ ಮಕಾಡೆ ಮಲಗೋದಕ್ಕೆ ಆ ಹೇಳಿಕೆ ಕೂಡ ಕಾರಣವಾಗಿದೆ. ತಮಿಳು ಕನ್ನಡದ ತಾಯಿ ಎಂದು ಹೇಳಿಕೆ ನೀಡಿ ವಿವಾದವನ್ನ ಹುಟ್ಟು ಹಾಕಿದ್ದರು. ಆದರೆ ಕನ್ನಡಿಗರು ಇತಿಹಾಸವನ್ನೇ ಕೆದಕಿ ತಮಿಳಿಗರಿಗೆ ತಿರುಗೇಟು ನೀಡಿದ್ದರು. ಇದೀಗ ಶಾಕಿಂಗ್ ವಿಚಾರವೊಂದು ಬಯಲಾಗಿದ್ದು, ತಮಿಳುನಾಡಿನ ಪಠ್ಯ ಪುಸ್ತಕದಲ್ಲಿಯೇ ಆ ಸುಳ್ಳು ಮಾಹಿತಿಯನ್ನ ಮುದ್ರಿಸಲಾಗಿದೆ.

ಕನ್ನಡಿಗರಿಗೆ ಹಾಗೂ ದಕ್ಷಿಣ ಭಾರತೀಯರಿಗೆ ಹಲವು ದಶಕಗಳಿಂದ ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿಕೊಂಡು ಬರಲಾಗಿತ್ತು. ಇದು ಸುಳ್ಳು ಅಂತ ಸಾಬೀತು ಮಾಡುವುದಕ್ಕೆ ದಶಕಗಳೇ ಆಗಿವೆ. ಅಂದಿನಿಂದಲೂ ಭಾರತದಲ್ಲಿ ಹಿಂಡಿ ರಾಷ್ಟ್ರೀಯ ಭಾಷೆ ಎನ್ನುವ ಸುಳ್ಳನ್ನು ಹೇಳಿಕೊಂಡೇ ಬರಲಾಗುತ್ತಿದೆ. ಅಲ್ಲದೆ ಇದೀಗ ತಮಿಳುನಾಡಿನಲ್ಲಿ ಕನ್ನಡ ಹಾಗೂ ದಕ್ಷಿಣ ಭಾರತೀಯ ಭಟಷೆಗಳ ಬಗ್ಗೆ ಸುಳ್ಳು ಹೇಳಿಕೊಂಡು ಬರುತ್ತಿರುವುದು ಬಹಿರಂಗವಾಗಿದೆ. ಉತ್ತರ ಭಾರತೀಯರು ಹೇಳಿಕೊಂಡು ಬಂದಂತ ಸುಳ್ಳು ಬಹಿರಂಗವಾಗಿದೆ.

ತಮಿಳುನಾಡಿನ 7ನೇ ತರಗತಿಯ ಪಠ್ಯದಲ್ಲೇ ತಮಿಳು ಭಾಷೆಯಿಂದಲೇ ದಕ್ಷಿಣ ಭಾರತದ ವಿವಿಧ ಭಾಷೆಗಳ ಉದಯವಾಯಿತು ಎನ್ನುವ ಬಗ್ಗೆ ಉಲ್ಲೇಖವಿದೆ ಎನ್ನುವುದು ವೈರಲ್ ಆಗ್ತಾ ಇದೆ. ಇದು ಕನ್ನಡಿಗೆ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಫೇಸ್ಬುಕ್ ನಲ್ಲಿ ಸಿದ್ದೇಗೌಡ ಶ್ಯಾಮ್ ಪ್ರಸಾದ್ ಎಂಬುವವರು ಪೋಸ್ಟ್ ಒಂದನ್ನ ಹಾಕಿದ್ದು, ತಮಿಳುನಾಡಿನ ಪಠ್ಯದಲ್ಲಿ ಕನ್ನಡ, ತೆಲಗು, ಮಲಯಾಳಂಗಳ ತಾಯಿ ತಮಿಳು ಎಂಬ ಸುಳ್ಳು ದ್ರಾವಿಡ ಪ್ರಪಗಾಂಡ ಇದೆ (ಪಾಕಿಸ್ತಾನದ ಪಠ್ಯದಲ್ಲಿ 5,000 ವರ್ಶಗಳ ಇತಿಹಾಸ ಇದ್ದಂತೆ). ಕರ್ನಾಟಕ ರಾಜ್ಯ ಪಠ್ಯದ ಪ್ರತಿ ತರಗತಿಯಲ್ಲೂ ಶಿವಾಜಿಯ ಕಥೆಗಳಿವೆ (ಶಾಖೆಗಳಲ್ಲಿ ಹೇಳಿಕೊಡುವಂತೆ). ಕನ್ನಡಿಗರು ಕನ್ನಡಿಗರಾಗಿರದೆ “ನಾವು ದ್ರಾವಿಡರು,” “ನಾವು ಹಿಂದಿ ದೇಶದ ರಕ್ಷಕರು,” ಆಗುತಿದ್ದಾರೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...