16 ವರ್ಷದ ಬಾಲಕನ ಜೊತೆಗೆ 41 ವರ್ಷದ ಮಹಿಳೆ ಮದುವೆ : ಬಾಲಕನ ತಾಯಿಯೇ ಈ ಮದುವೆ ಮಾಡಿಸಿದ್ದು ಯಾಕೆ ಗೊತ್ತಾ..?

 

ಸೋಷಿಯಲ್ ಮೀಡಿಯಾದಲ್ಲಿ ಆ ಹುಡುಗ ಹುಡುಗಿಯದ್ದೆ ಮದುವೆ ಫೋಟೋಗಳು ಓಡಾಡುತ್ತಿವೆ. ಅದನ್ನು ನೋಡಿದವರೆಲ್ಲಾ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಆದರೆ ಆ‌ ಮದುವೆಯ ಹಿಂದಿನ ಗುಟ್ಟನ್ನೊಮ್ಮೆ ಕೇಳಿದ್ರೆ, ಇಂತೊಬ್ಬ ಸ್ನೇಹಿತೆ ನಮಗೂ ಸಿಕ್ಕಬಾರದಾ ಎನಿಸದೇ ಇರುವುದಿಲ್ಲ.

ಮದುವೆ ವಯಸ್ಸು ಸಹಜವಾಗಿ ಹುಡುಗಿಗಿಂತ ಹುಡುಗ ಎರಡ್ಮೂರು ವರ್ಷ ದೊಡ್ಡವನಾಗಿರುತ್ತಾನೆ. ಆದ್ರೆ ಇಲ್ಲೊಂದು ಮದುವೆ ನಡೆದಿದೆ. ಅದರಲ್ಲಿ ಹುಡುಗಿಗೆ 41 ವರ್ಷ ಹುಡುಗನಿಗೆ ಕೇವಲ 16 ವರ್ಷ‌. ಸುಮಾರು 25 ವರ್ಷದ ಅಂತರವಿದೆ. ಹೀಗೆ ಮದುವೆಯಾಗೋದಕ್ಕು ಒಂದು ಬಲವಾದ ಕಾರಣವಿದೆ. ಅದರಲ್ಲೂ ಹುಡುಗನ ತಾಯೊಯೇ ಮುಂದೆ‌ ನಿಂತು ಈ ಮದುವೆ ಮಾಡಿಸಿರೋದು ವಿಶೇಷವಾಗಿದೆ.

ಈ ವಿಚಿತ್ರ ಮದುವೆ ನಡೆದಿರೋದು ಇಂಡೋನೇಷ್ಯಾದಲ್ಲಿ. 41 ವರ್ಷದ ಮರಿಯಾನ ತನ್ನ ಸ್ನೇಹಿತೆಯ ಮಗನಾದ 16 ವರ್ಷ್ ಬಾಲಕ ಕೆವಿನ್ ನನ್ನು ಮದುವೆಯಾಗಿದ್ದಾಳೆ. ಮದುವೆಯಾಗಿದ್ದು, ಖುಷಿ ಖುಷಿಯಾಗಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸದ್ಯ ಕೆವಿನ್ ತಾಯಿ ಲೀಸಾ ಸೊಸೆಯೆಂದು ಸ್ವೀಕರಿಸುವ ಮರಿಯಾನ ಈ ಮುಂಚೆ ಕ್ಲೋಸ್ ಫ್ರೆಂಡ್ ಆಗಿದ್ದರು.

ಮರಿಯಾನ ಸದ್ಯ ಕಿರಾಣಿ ಅಂಗಡಿಯ ಮಾಲಕಿಯಾಗಿದ್ದಾರೆ. ಈ ಹಿಂದೆಯೇ ಒಬ್ಬರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ ಆ ನಿಶ್ಚಿತಾರ್ಥ ಮುರಿದು ಬಿದ್ದಿತ್ತು. ಹೀಗಾಗಿ ಮರಿಯಾನ ಖಿನ್ನತೆಗೆ ಒಳಗಾಗಿದ್ರು. ಸ್ನೇಹಿತೆಯನ್ನು ಕಾಪಾಡುವುದಕ್ಕೋಸ್ಕರ ತನ್ನ ಮಗನನ್ನೇ ಕೊಟ್ಟು ಮದುವೆ ಮಾಡಿದ್ದಾರೆ. ಸ್ನೇಹಿತೆಯನ್ನು ಸೊಸೆಯಾಗಿ ಮನೆಗೆ ತುಂಬಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *