Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಕ್ಕಳಿಗೆ ಜೀವನ ಕೌಶಲ್ಯ ಶಿಕ್ಷಣಕ್ಕೆ ಆದ್ಯತೆ ನೀಡಿ : ಡಾ.ತಿಪ್ಪೇಸ್ವಾಮಿ

---Advertisement---

 

ಸುದ್ದಿಒನ್, ಚಿತ್ರದುರ್ಗ. ನಂ. 10 : ಕಿರಿಯ ವಯಸ್ಸಿನಲ್ಲಿ ಮಕ್ಕಳಿಗೆ ಜೀವನ ಕೌಶಲ್ಯದ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರಾದ ಡಾ.ತಿಪ್ಪೇಸ್ವಾಮಿ ಹೇಳಿದರು.

 

ನಗರದ ದಮ್ಮಾ ಕೇಂದ್ರದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆ, ಶಾಂತಿ ಸೌಹಾರ್ದ ವೇದಿಕೆ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕಿಶೋರಿಯರ ಸಾಂಸ್ಕøತಿಕ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಕಿಶೋರಿಯರಿಗೆ ಶಿಕ್ಷಣದ ಜೊತೆಗೆ ಕೌಶಲ್ಯ ನೀಡುವಂತಹ ಕಾರ್ಯಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಬದುಕಿನ, ಜೀವನ ಮಟ್ಟವನ್ನು ಹೆಚ್ಚಿಸುವಂತಹ ಕಾರ್ಯ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ ಎಂದರು.

ಕಿಶೋರಿಯರು ಅಂದರೆ, ತರುಣಿಯರು, ಹದಿ-ಹರೆಯದವರು, ಹದಿನೆಂಟರವರೆಗಿನ ವಯೋಮಾನದವರಿಗೆ ಕಿಶೋರಿಯರು ಮತ್ತು ಕಿಶೋರರು ಎಂದು ಕರೆಯಲಾಗುತ್ತದೆ. ತುಂಬಾ ಕ್ಲಿಷ್ಟಕರವಾದ ವಯೋಮಿತಿ ಆಗಿರುವುದರಿಂದ ಪೋಷಕರು ತಮ್ಮ ಮಕ್ಕಳ ಬಗ್ಗೆ ಅತಿಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವುದು ತುರ್ತು ಅಗತ್ಯವಾಗಿದೆ.
ಯುವ ಜನರಿಗೆ ಮಧ್ಯದ ಕಾಲಘಟ್ಟ ಹದಿಹರೆಯ ದೇಹದಲ್ಲಿ ಬದಲಾವಣೆ ಮನಸ್ಸಿನ ಬದಲಾವಣೆಗಳು ಮತ್ತು ಜೀವನದ ತಲ್ಲಣಗಳು ಏಕ ಕಾಲದಲ್ಲಿಯೇ ಉಂಟಾಗುವುದರಿಂದ ವಿಕಾಸ ರಕ್ಷಣೆಯ ಕುತೂಹಲ ಎಂದಿಗೂ ಇರುತ್ತದೆ. ಆದ್ದರಿಂದ ಪೋಷಕರು ತಮ್ಮ ಹದಿಹರೆಯದ ಮಕ್ಕಳ ಬಗ್ಗೆ ಹೆಚ್ಚು ಜವಾಬ್ದಾರಿ ಹೊಂದುವ ಅಗತ್ಯವಿದೆ ಎಂದ ಅವರು ಶಾಲಾ ಶಿಕ್ಷಣದಲ್ಲಿ ಇಂತಹ ಪಠ್ಯಗಳ ಬಗ್ಗೆ ಕಲಿಸುವ ಅಗತ್ಯವಿರುವುದರಿಂದ ಪಾಲಿಸಿಮಟ್ಟದಲ್ಲಿ ಮಕ್ಕಳ ಹಕ್ಕುಗಳ ಆಯೋಗ ಕೆಲಸ ಮಾಡಲು ಸಿದ್ಧವಿದೆ ಎಂದರು.

ಮಕ್ಕಳ ಹಕ್ಕುಗಳ ಆಯೋಗದ ಮಾಜಿ ಸದಸ್ಯ ಕೆ.ಬಿ.ರೂಪಾನಾಯ್ಕ್ ಅವರು ಮಾತನಾಡಿ, ವಿಮುಕ್ತಿ ವಿದ್ಯಾಸಂಸ್ಥೆ ಸದಾ ಹೊಸದನ್ನು ಮಾಡುವ ಮೂಲಕ ಸಮಾಜದ ಬದಲಾವಣೆಯಲ್ಲಿ ಸಕ್ರಿಯವಾಗಿರುತ್ತದೆ. ಆ ಕಾರಣಕ್ಕಾಗಿ ಸದಾ ಸ್ಮರಣೀಯರು ಎಂದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಗುರುನಾಥ್ ಮಾತನಾಡಿ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಸಂಗೀತ, ರೂಪಕ, ನಾಟಕದ ಮೂಲಕ ಪ್ರಸ್ತುತ ಪಡಿಸುವ ಮೂಲಕ ಸಂವಿಧಾನದ ಆಶಯಗಳನ್ನು ಮತ್ತು ಪೀಠಿಕೆಯನ್ನು ಜನಸಾಮಾನ್ಯರ ಮಧ್ಯೆ ಕೊಂಡೊಯ್ಯುವಂತಹ ಪ್ರಯತ್ನ ಇದಾಗಿದೆ ಎಂದು ಹೇಳಿದರು.

ಪ್ರಗತಿಪರ ಚಿಂತಕರಾದ ಪ್ರೋ.ಜೆ.ಯಾದವರೆಡ್ಡಿಯವರು ಮಾತನಾಡಿ, ಕಿಶೋರಿಯರಿಗಾಗಿಯೇ ಸಾಂಸ್ಕøತಿಕ ಮೇಳ ಹಮ್ಮಿಕೊಂಡಿರುವುದು ನಿಜಕ್ಕೂ ಅತ್ಯುತ್ತಮ ಬೆಳವಣಿಗೆ ಎಂದು ಹೇಳಿದರು. ವಿಮುಕ್ತಿ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಅನ್ನಪೂರ್ಣ ಅವರು ಮಾತನಾಡಿ, ವಿಮುಕ್ತಿ ವಿದ್ಯಾಸಂಸ್ಥೆಯು ಸುಧೀರ್ಘ ಮೂವತ್ನಾಲ್ಕು ವರ್ಷಗಳ ಸಾಮಾಜಿಕ ಪಯಣವು ಸುಲಭ ಸಾಧ್ಯವಾಗಿರಲಿಲ್ಲ. ಹತ್ತು ಹಲವು ಸಂಕಷ್ಟಗಳನ್ನು ಎದುರಿಸಿ, ವಿಮುಕ್ತಿ ಸಂಸ್ಥೆ ಮೂವತ್ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಎಂದು ಹೇಳಿದರು.

ಕರ್ನಾಟಕ ಶಾಂತಿ * ಸೌಹಾರ್ದ ವೇದಿಕೆಯ ಅಧ್ಯಕ್ಷರಾದ ನರೇನಹಳ್ಳಿ ಅರುಣ್‍ಕುಮಾರ್ ಅವರು ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಮತೀಯವಾದ, ಕೋಮುವಾದ ಮತ್ತು ಜಾತಿವಾದಗಳ ಮಧ್ಯೆ ಜಾತ್ಯಾತೀತ ವಾದವನ್ನು ಪ್ರಚುರ ಪಡಿಸುವುದು ಮತ್ತು ಬುದ್ಧ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನರ ಮಟ್ಟಕ್ಕೆ ಕೊಂಡೊಯ್ಯುವುದು ಸುಲಭ ಸಾಧ್ಯವಲ್ಲ. ಅಂತಹ ಕಾಲಘಟ್ಟದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆ ಪ್ರಗತಿಪರ ವಿಚಾರಧಾರೆಗಳನ್ನು ಜನಸಾಮಾನ್ಯರ ಹಂತಕ್ಕೆ ತಲುಪಿಸುವಂತಹ ಕೆಲಸ ಮಾಡುತ್ತಿರುವುದು ನಿಜಕ್ಕೂ ಪ್ರಶಂಸನೀಯ ಎಂದು ಹೇಳಿದರು.

ವಿಮುಕ್ತಿ ವಿದ್ಯಾಸಂಸ್ಥೆಯ ನಿರ್ದೇಶಕರಾದ ಆರ್.ವಿಶ್ವಸಾಗರ್ ಅವರು ಮಾತನಾಡಿ, ವಿಮುಕ್ತಿ ಸಂಸ್ಥೆ ಬಾಲಕೀಯರ, ಹದಿಹರೆಯದವರ ಸಮಸ್ಯೆಗಳನ್ನು ಚರ್ಚಿಸಿ, ಪರಿಹರಿಸುವಂತಹ ಪ್ರಮುಖ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಚಿತ್ರದುರ್ಗ ತಾಲ್ಲೂಕಿನ ಸುಮಾರು ನಲವತ್ತಕ್ಕೂ ಹೆಚ್ಚು ಹಳ್ಳಿಗಳಿಂದ ಬಾಲಕೀಯರನ್ನು ಆಹ್ವಾನಿಸಿ ಸಾಂಸ್ಕøತಿಕ ಮೇಳದಲ್ಲಿ ಭಾಗವಹಿಸುವಂತೆ ಮಾಡಲಾಗಿದೆ ಎಂದು ಹೇಳಿದರು.

 

ಸಾಂಸ್ಕøತಿಕ ಮೇಳ ಕಾರ್ಯಕ್ರಮದಲ್ಲಿ ವಿಮುಕ್ತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ತಿಪ್ಪೇಸ್ವಾಮಿ, ತುಮಕೂರು ನರಸಿಂಹ ಮೂರ್ತಿ, ಹನುಮಂತಪ್ಪ ತಮಟಕಲ್ಲು, ಬೈಲಮ್ಮ, ಪ್ರಭಾವತಿ, ಬಸವರಾಜು, ಹೊಳೆಯಪ್ಪ, ಡಾ.ರಹಮತ್ತುಲ್ಲಾ, ಸರೋವರ ಬೆಂಕಿಕೆರೆ, ಕಲಾವಿದರಾದ ಗುರುಬಸವ, ಸಂಸ್ಥೆಯ ಸಿಬ್ಬಂಧಿಗಳಾದ ಶ್ರೀಮತಿ ನಾಗರತ್ನ, ಶ್ರೀಮತಿ ಬಿಬಿಜಾನ್, ಅರಣ್ಯಸಾಗರ್ ಮತ್ತು ನೂರಾರು ಜನ ಕಿಶೋರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...