ಸವಿತಾ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೆರವು : ಮುತ್ತುರಾಜ್

3 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ನ. 09 : ಸವಿತಾ ಸಮಾಜದ ಅಭಿವೃದ್ದಿಗಾಗಿ ಸವಿತಾ ಸಮಾಜದ ಅಭೀವೃದ್ದಿ ನಿಗಮದಿಂದ ಸಾಧ್ಯವಾದಷ್ಟು ಯೋಜನೆಗಳನ್ನು ಜಾರಿ ಮಾಡುವುದರ ಮೂಲಕ ನಮ್ಮ ಸಮಾಜದ ಕಟ್ಟ ಕಡೆಯ ವ್ಯಕ್ತಿ ಅಭೀವೃದ್ದಿ ಹೊಂದಲು ನೆರವಾಗುವುದಾಗಿ ಕರ್ನಾಟಕ ರಾಜ್ಯ ಸವಿತಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುತ್ತುರಾಜ್ ತಿಳಿಸಿದರು.

ಚಿತ್ರದುರ್ಗ ನಗರದ ಸವಿತಾ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ್‌ರವರ ನಿವಾಸಕ್ಕೆ ಶನಿವಾರ ಭೇಟಿ ನೀಡಿದ ಅವರು ಸನ್ಮಾನ ಸ್ವೀಕಾರ ಮಾಡಿ ಮಾತನಾಡಿದ ಅವರು ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್‌ರವರು ನನ್ನ ಮೇಲೆ ನಂಬಿಕೆಯನ್ನು ಇಟ್ಟು ಈ ನಿಗಮಕ್ಕೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಅವರ ನಂಬಿಕೆಯನ್ನು ಹುಸಿ ಮಾಡದೇ ನಮ್ಮ ಸಮುದಾಯದ ಅಭೀವೃದ್ದಿಗೆ ನೆರವಾಗುವುದಾಗಿ ತಿಳಿಸಿ, ಇಂದಿನ ದಿನಮಾನದಲ್ಲಿ ನಮ್ಮ ಸಮಾಜದವರು ಇನ್ನೂ ಸಹಾ ಬಡತನದಲ್ಲಿ ಇದ್ದಾರೆ. ಅವರು ಮಾಡುವ ಕಾಯಕಕ್ಕೆ ಅಂಗಡಿಯನ್ನು ಇಟ್ಟುಕೊಳ್ಳಲಾಗದ ಪರಿಸ್ಥಿತಿಯಲ್ಲಿ ಇದ್ದಾರೆ, ಅಂತಹರಿಗೆ ನಮ್ಮ ನಿಗಮದಿಂದ ಸಹಾಯವನ್ನು ಮಾಡುವುದರ ಮೂಲಕ ಅವರು ಸಹಾ ಎಲ್ಲರಂತೆ ಜೀವನವನ್ನು ನಡೆಸುವಂತೆ ಮಾಡುವ ಬಯಕೆ ನನ್ನದಾಗಿದೆ ಎಂದರು.

ನಮ್ಮ ಸಮಾಜ ಹಲವಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದೇವೆ ಹಲವಾರು ಜನರ ದಬ್ಬಾಳಿಕೆಗೆ ಬಲಿಯಾಗಿದ್ದೇವೆ, ನಮ್ಮ ಜಾತಿಯನ್ನು ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿ ನಾವಿದ್ದೇವೆ, ಕಡಿಮೆ ಪ್ರಮಾಣದಲ್ಲಿ ಇರುವವರು ನಮ್ಮಗಿಂತ ಮೇಲೆ ಇದ್ದಾರೆ ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಇರುವ ನಾವುಗಳು ಹಾಗೇ ಇದ್ದೇವೆ. ಸಿದ್ದರಾಮಯ್ಯರವರು ರಾಜ್ಯದಲ್ಲಿ ಹಿಂದುಳಿದವರನ್ನು ಗುರುತಿಸಿ ಅವರನ್ನು ಮೇಲೆಕ್ಕೆ ಎತ್ತುವ ಕಾರ್ಯವನ್ನು ಮಾಡುತ್ತಿದ್ದಾರೆ. ದೇವರಾಜ್ ಆರಸುರವರ ನಂತರ ಸಿದ್ದರಾಮಯ್ಯರವರು ಕಾಣಿಸಿಕೊಂಡಿದ್ದಾರೆ. ಮಾನವಿಯತೆಯನ್ನು ಉಳ್ಳ ರಾಜಕಾರಣಿಯಾಗಿದ್ದಾರೆ. 2013 ರಿಂದ 2018ರವರೆಗೆ ಹಿಂದುಳಿದ ವರ್ಗದವರಿಗೆ ಸುವರ್ಣ ಯುಗವಾಗಿತ್ತು ಈಗ 2023 ರಿಂದ ಮತ್ತೇ ಮರುಕಳಿಸಿದೆ, ನಮ್ಮಲ್ಲಿನ ಸಣ್ಣ,ಸಣ್ಣ ಕಾಯಕ ಸಮುದಾಯಗಳ ನೋವನ್ನು ಅವರ ಬಳಿ ನಿವೇದನೆ ಮಾಡುವುದರ ಮೂಲಕ ನಮ್ಮ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದರು.

 

ಬೇರೆ ಸಮುದಾಯಗಳಂತೆ ನಾವುಗಳು ಸಹಾ ಒಗ್ಗಟ್ಟನ್ನು ಪ್ರದರ್ಶನ ಮಾಡಬೇಕಿದೆ, ಮುಂದಿನ ದಿನದಲ್ಲಿ ಏನನ್ನಾದರು ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ನಾವುಗಳು ಅವಕಾಶ ವಂಚಿತರಾಗಿದ್ದೇವೆ ಸಮಾಜದ ಮುಖ್ಯವಾಹಿನಿಗೆ ಬರಲು ಅವಕಾಶ ಈಗ ಬಂದಿದೆ ಅದರ ಸದುಪಯೋಗವಾಗಬೇಕಿದೆ ಎಂದ ಅವರು, ಸರ್ಕಾರ ನೀಡಿದ ಐದು ಗ್ಯಾರೆಂಟಿಗಳಿಂದ ರಾಜ್ಯದ ಜನತೆ ಅರ್ಥಿಕ ಮಟ್ಟ ಸುಧಾರಣೆಯಾಗಿದೆ, ಒಂದು ಮನೆಗೆ ಸುಮಾರು 5 ರಿಂದ 6 ಸಾವಿರದವರೆಗೂ ಆದಾಯ ಬರುತ್ತಿದೆ, ಉಚಿತ ಪ್ರಯಾಣದಿಂದ ಮಹಿಳೆಯರು ರಾಜ್ಯದ ವಿವಿಧ ದೇವಾಲಯಗಳ ದರ್ಶನವನ್ನು ಮಾಡುತ್ತಿದ್ದಾರೆ. ಇದರಿಂದ ಅವರ ಅಸೆಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರಿಗೆ ಒಂದು ದಿನ ರಜೆಯನ್ನು ನೀಡುವುದರ ಮೂಲಕ ಸಿದ್ದರಾಮಯ್ಯ ಮಾನವೀಯತೆಯನ್ನು ಮೆರೆದಿದ್ದಾರೆ. ಇದುವರೆವಿಗೂ ಸಣ್ಣ ಸಣ್ಣ ಸಮುದಾಯಗಳಿಗೆ ಇದುವರೆವಿಗೂ ನ್ಯಾಯ ಸಿಕ್ಕಲ್ಲ ಅಂತ ಸಮುದಾಯಗಳನ್ನು ಒಗ್ಗೂಡಿಸಿ ಮುಖ್ಯಮಂತ್ರಿ ಬಳಿ ಹೋಗಿ ನ್ಯಾಯವನ್ನು ಕೇಳೋಣ ಎಂದು ಮುತ್ತುರಾಜ್ ತಿಳಿಸಿದರು.

ನನ್ನ ಸಮುದಾಯಕ್ಕೆ ನನ್ನ ಅಭೀವೃದ್ದಿ ನಿಗಮದಿಂದ ಗಂಗಕಲ್ಯಾಣ ವ್ಯವಹಾರ ಮಾಡಲು ಸಹಾಯಧನ ಮೂಲಕ ಸಾಲವನ್ನು ನೀಡಿ ಸ್ವಾವಲಂಬಿ ಬದುಕನ್ನು ನಿರ್ಮಾಣ ಮಾಡಲಾಗುವುದು, ಸರ್ಕಾರದ ಐದು ಗ್ಯಾರೆಂಟಿಯ ಜೊತೆಗೆ ನಿಗಮದ ಸಹಾಯವನ್ನು ಪಡೆಯುವುದರ ಮೂಲಕ ಜೀವನದಲ್ಲಿ ಅಭೀವೃದ್ದಿಯನ್ನು ಸಾಧಿಸೋಣ ಎಂದರು.

ಸವಿತಾ ಸಮಾಜದ ಮುಖಂಡರು ಅತಿ ಹಿಂದುಳಿದ ವರ್ಗಗಳ ಹಾಗೂ ಕಾಂಗ್ರೆಸ್ ಹಿಂದುಳಿದ ವರ್ಗದ ಅಧ್ಯಕ್ಷರಾದ ಎನ್.ಡಿ. ಕುಮಾರ್ ಮಾತನಾಡಿ ಸವಿತಾ ಸಮಾಜವನ್ನು ಸರ್ಕಾರ ಎಸ್.ಸಿ.ಪಟ್ಟಿಗೆ ಸೇರಿಸಬೇಕಿದೆ, ಇದರ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು, ನಮ್ಮವರು ತುಳಿತಕ್ಕೆ ಒಳಗಾಗಿದ್ದಾರೆ, ಅವರಿಗೆ ಸಂವಿಧಾನಡಿಯಲ್ಲಿ ರಕ್ಷಣೆ ಸಿಗಬೇಕಿದೆ ಅವರನ್ನು ಮೇಲೆತ್ತಲು ನಮ್ಮ ಸಮಾಜವನ್ನು ಎಸ್.ಸಿ.ಗೆ ಸೇರಿಸುವುದರ ಮೂಲಕ ನಮ್ಮ ಸಮುದಾಯವನ್ನು ಮೇಲೆತ್ತಬೇಕಿದೆ, ನಮ್ಮಲ್ಲಿ ಶ್ರೀಮಂತ ಕುಟುಂಬ ಕಡಿಮೆ ಇದ್ದು ಬಡವರ ಸಂಖ್ಯೆ ಹೆಚ್ಚಿದೆ ಇದರಿಂದ ನಮ್ಮ ಸಮುದಾಯವನ್ನು ಎಸ್.ಸಿ.ಗೆ ಸೇರಿಸುವುದರಿಂದ ತುಂಬಾ ಅನುಕೂಲವಾಗಲಿದೆ ಎಂದರು.

ಸವಿತಾ ಸಮಾಜದ ಅಧ್ಯಕ್ಷರಾದ ಚಂದ್ರಶೇಖರ್, ತಾಲೂಕ ಅಧ್ಯಕ್ಷರಾದ ಆರ್ ಶ್ರೀನಿವಾಸ್. ಹಿರಿಯೂರು ಅಧ್ಯಕ್ಷರಾದ .ಬಸವರಾಜ್. ಅಲೆಮಾರಿ ಸಮಾಜದ ಅಧ್ಯಕ್ಷರಾದ ಲಕ್ಷ್ಮೀಕಾಂತ, ಮಡಿವಾಳ ಸಮಾಜದ ಅಧ್ಯಕ್ಷರಾದ ರಾಮಜ್ಜ, ನಗರಸಭಾ ಮಾಜಿ ಸದಸ್ಯರುಗಳಾದ ಸಿ.ಎಂ. ಲಿಂಗರಾಜ್. ಆರ್.ನಾಗರಾಜ್. ಗೌರವಾಧ್ಯಕ್ಷರಾದ ಮಾರಣ್ಣ. ಯುವ ಘಟಕದ ಅಧ್ಯಕ್ಷರಾದ ರಂಜಿತ್ ಮುಂತಾದವರು ಭಾಗವಹಿಸಿದ್ದರು.

Share This Article
Enable Notifications OK No thanks