ಬೆಂಗಳೂರು: ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟದ ವ್ಯವಸ್ಥೆ ಇದೆ. ಇದರಿಂದ ಪೋಷಕರಿಗೂ ಅನುಕೂಲ ಮಕ್ಕಳಿಗೂ ಅನುಕೂಲವಿದೆ. ಇದು ಪ್ರೌಢಶಾಲೆವರೆಗೆ ಮಾತ್ರ ಇರುವ ವ್ಯವಸ್ಥೆ. ಆದ್ರೆ ಕಾಲೇಜು ಮಕ್ಕಳಿಗೆ ಆ ವ್ಯವಸ್ಥೆ ಇಲ್ಲ. ಪಿಯುಸಿ ಮಕ್ಕಳಿಗೂ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಚನೆ ಈಗ ಸರ್ಕಾರದಲ್ಲಿ ಚರ್ಚೆಯಾಗ್ತಿದೆ. ಸಿದ್ದರಾಮಯ್ಯ ಅವರಿಂದ ಈ ಮಹತ್ವದ ಯೋಜನೆ ಜಾರಿಗೆ ಬರುವ ಸಾದ್ಯತೆ ಇದೆ.
ಸದ್ಯ 1ರಿಂದ 10ನೇ ತರಗತಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಭಾಗ್ಯ ಲಭಿಸಿದೆ. ಈಗ ಹೊಸದಾಗಿ ಪಿಯು ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಊಟ ನೀಡಲು ಚಿಂತನೆ ಇದೆ. ರಾಜ್ಯದಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಸರ್ಕಾರಿ ಪಿಯು ವಿದ್ಯಾರ್ಥಿಗಳಿದ್ದಾರೆ. ಗ್ರಾಮೀಣ ಭಾಗದಲ್ಲಿಯೇ ಅತಿ ಹೆಚ್ಚು ಮಕ್ಕಳು ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಪಿಯು ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ಬಂದ್ರೆ ಬಹಳಷ್ಟು ಸಹಾಯಕ ಆಗಲಿದೆ. ಇಂಥದ್ದೊಂದು ಯೋಜನೆ ಜಾರಿಗೆ ಬಂದರೆ ವಿದ್ಯಾರ್ಥಿಗಳು ಕೂಡ ತುಂಬಾನೇ ಖುಷಿ ಪಡ್ತಾರೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಯೋಜನೆ ಬಹಳ ಮುಖ್ಯವಾಗಿ ಬೇಕಾಗಿರುವುದಾಗಿದೆ. ಗ್ರಾಮೀಣ ಭಾಗದಿಂದ ಓದುವುದಕ್ಕೆ ನಗರಕ್ಕೆ ಬರುವ ಅದೆಷ್ಟೋ ಮಕ್ಕಳು ಈಗ ಬಡ ಕುಟುಂಬದಿಂದಾನು ಬರ್ತಾರೆ. ಕಾಲೇಜು ಮುಗಿಸಿ ಮನೆಗೆ ಹೋಗಿ ತಿನ್ನುವುದರೊಳಗೆ ಅವರ ಪರಿಸ್ಥಿತಿ ಏನಾಗಿರುತ್ತೆ ಹೇಳಿ. ಹೊರಗೆ ಹೊಟೇಲ್ ಗಳಲ್ಲಿ ತಿನ್ಬೇಕು ಅಂದ್ರೆ ಕಡಿಮೆ ದರವೇನು ಇಲ್ಲ. ಅಷ್ಟೊಂದು ರೇಟ್ ಕೊಟ್ಟು ಊಟ ಮಾಡುವಷ್ಟು ಎಷ್ಟೋ ಮಕ್ಕಳು ಅನುಕೂಲಸ್ಥರಾಗಿರುವುದಿಲ್ಲ. ಹೀಗಾಗಿ ಈ ರೀತಿಯ ಯೋಜನೆ ಗ್ರಾಮೀಣ ಭಾಗದ ಮಕ್ಕಳಿಗೆ ಬಹಳ ಉತ್ತಮವಾಗಿರಲಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















