Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದರ್ಶನ್ ವಿರುದ್ಧ ಚಾರ್ಜ್ ಶೀಟ್ ಗೂ ಮುನ್ನ ವಿಜಯಲಕ್ಷ್ಮೀ ಪೋಸ್ಟ್..!

---Advertisement---

ಬೆಂಗಳೂರು: ಇಂದು ದರ್ಶನ್, ಪವಿತ್ರಾ ಗೌಡ ಸೇರಿದಂತೆ ಆರೋಪಿಗಳ ಎದೆಯಲ್ಲಿ ಢವಢವ ಎನ್ನುತ್ತಿದೆ. ಕಾರಣ ಚಾರ್ಜ್ ಶೀಟ್ ಸಲ್ಲಿಕೆಯನ್ನ ಪೊಲೀಸರು ಕೋರ್ಟ್ ಗೆ ಮಾಡಲಿದ್ದಾರೆ. ದೋಷಾರೋಪ ಪಟ್ಟಿ ಸಲ್ಲಿಕೆ ಬಳಿಕ ಶಿಕ್ಷೆಯ ಪ್ರಮಾಣವನ್ನು ವಿಧಿಸಬಹುದು. ಹೀಗಾಗಿ ಎಲ್ಲರ ಎದೆಯಲ್ಲೂ ಆತಂಕವೇ ಮನೆ ಮಾಡಿದೆ. ಇದರ ನಡುವೆ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಒಂದನ್ನ ಶೇರ್ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮೊದಲು ಜೈಲಿಗೆ ಹೋದಾಗ, ಪತ್ನಿ ವಿಜಯಲಕ್ಷ್ಮಿ ಸಾಕಷ್ಟು ಕಷ್ಟ ಪಟ್ಟಿದ್ದರು. ಸಿಕ್ಕ ಸಿಕ್ಕ ದೇವಸ್ಥಾನಗಳಿಗೆ ಹೋಗಿ ಕೈಮುಗಿದು ಬಂದಿದ್ದರು. ಶಕ್ತಿಪೀಠಗಳಿಗೆ ಭೇಟಿ ನೀಡಿ ಬೇಡಿಕೊಂಡಿದ್ದರು. ಆ ನಂತರವೇ ದರ್ಶನ್ ಅವರಿಗೆ ಜಾಮೀನು ಸಿಕ್ಕಿತ್ತು. ಆದರೆ ಮತ್ತೆ ಅರೆಸ್ಟ್ ಆಗಿದ್ದು, ವಿಜಯಲಕ್ಷ್ಮಿ ದರ್ಶನ್ ದೇವರ ಬಗ್ಗೆ ಪೋಸ್ಟ್ ಒಂದನ್ನ ಹಾಕಿದ್ದಾರೆ.

ಕಾಮಾಕ್ಯ ತಾಯಿಯ ಪೋಸ್ಟ್ ಮಾಡಿದ್ದಾರೆ. ಅದರ ಜೊತೆಗೆ ರಕ್ಷಣರಗೋಸ್ಕರ ಯಾವತ್ತಿಗೂ ನಮ್ಮ ಪ್ರಾರ್ಥನೆ ನಿರಂತರವಾಗಿರುತ್ತದೆ. ಕೈಯಲ್ಲಿ ತಾವರೆ ಹೂ ಹಿಡಿದಿದ್ದು, ವಿಜಯಲಕ್ಷ್ಮಿ ಅವರೇ ತಾವರೆ ಹೂ ಹಿಡಿದ ಫೋಟೋ ಇದಾಗಿದೆ. ಆ ತಾವರೆ ಹೂ ಹಿಂದೆ ಕಾಮಾಕ್ಯ ದೇವಸ್ಥಾನವಿದೆ. ಈ ಹಿಂದೆ ಕಾಮಾಕ್ಯ ದೇವಸ್ಥಾನಕ್ಕೆ ವಿಜಯಲಕ್ಷ್ಮೀ ಹೋಗಿದ್ದರು. ಎರಡನೇ ಬಾರಿಗೆ ದರ್ಶನ್ ಜೈಲಿಗೆ ಹೋಗುವುದಕ್ಕೆ ಮುನ್ನ ಫ್ಯಾಮಿಲಿ ಸಮೇತ ಕಾಮಾಕ್ಯ ದೇವಸ್ಥಾನಕ್ಕೆ ಹೋಗಿದ್ದರು. ಇಂದು ದರ್ಶನ್ ಅವರಿಗೆ ಬಹಳ ಮುಖ್ಯವಾದ ದಿನವಾಗಿದೆ. ಹೀಗಾಗಿಯೇ ಮತ್ತೆ ದೇವರ ಮೊರೆ ಹೋಗಿದ್ದು, ಬೇಡಿಕೊಂಡಿದ್ದಾರೆ. ದರ್ಶನ್ ಅಂಡ್ ಗ್ಯಾಂಗ್ ಅನ್ನು ಸದ್ಯಕ್ಕೆ ಕೋರ್ಟ್ ಮುಂದೆ ಹಾಜರಾಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now