ನವದೆಹಲಿ: ಪಂಜಾಬ್ ರಾಜ್ಯದ ವಿಧಾನಸಭಾ ಚುನಾವಣಾ ದಿನಾಂಕ ಅನೌನ್ಸ್ ಆಗಿದೆ. ಗೆಲ್ಲಬೇಕೆಂಬ ಹಂಬಲ ಎಲ್ಲಾ ಪಕ್ಷಗಳಿಗೂ ಇದ್ದೇ ಇದೆ. ಈ ಮಧ್ಯೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೊಸ ಅವಕಾಶವೊಂದನ್ನ ಜನತೆಗೆ ನೀಡಿದ್ದಾರೆ.
ಪಂಜಾಬ್ ಚುನಾವಣೆಗೆ ಎಎಪಿ ಸಿಎಂ ಅಭ್ಯರ್ಥಿ ಬಗ್ಗೆ ಮಾತನಾಡಿದ್ದು, ಪಂಜಾಬ್ ಎಎಪಿ ಮುಂದಿನ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡುತ್ತಾರೆ. ಈ ಬಗ್ಗೆ ಜನರು ಯಾವುದೇ ಗೊಂದಲವಿಲ್ಲದೆ ಮುಕ್ತವಾಗಿ ತಿಳಿಸಬಹುದು. ಅದಕ್ಕಾಗಿಯೇ ನಂಬರ್ ಅನ್ನು ನೀಡಲಾಗಿದೆ. ಆ ನಂಬರ್ ಗೆ ಕರೆ ಮಾಡಿ ಅಭ್ಯರ್ಥಿ ಯಾರೆಂದು ತಿಳಿಸಬಹುದು.
ಜನವರಿ 17 ಸಂಜೆ 5ರ ವೇಳೆಗೆ ಸಿಎಂ ಅಭ್ಯರ್ಥಿ ಹೆಸರು ತಿಳಿಸಲು ಸೂಚನೆ ನೀಡಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಕ್ಷವೊಂದು ಸಿಎಂ ಅಭ್ಯರ್ಥಿ ಆಯ್ಕೆಗೆ ಜನರಿಗೆ ಬಿಟ್ಟಿದೆ. ಈ ಬಾರಿ ರೈತರು ಕೂಡ ಚುನಾವಣೆಗೆ ನಿಲ್ಲುವ ನಿರ್ಧಾರ ಮಾಡಿದ್ದಾರೆ. ವರ್ಷಾನುಗಟ್ಟಲೇ ಮಳೆ, ಗಾಳಿ, ಚಳಿ ಎನ್ನದೆ ದೆಹಲಿಯ ರಸ್ತೆಯಲ್ಲಿ ಕೂತು, ಮಲಗಿ ಕೃಷಿ ಕಾಯ್ದೆಗಳನ್ನ ಹಿಂಪಡೆಯುವಂತೆ ಮಾಡಿದ್ದಾರೆ. ಇದೀಗ ಚುನಾವಣೆಗೆ ಅವರೇ ನಿಲ್ಲುತ್ತಿರುವುದು ಅದೆಷ್ಟು ಪಕ್ಷಗಳಿಗೆ ಹಿನ್ನಡೆಯಾಗುತ್ತೋ ನೋಡಬೇಕಿದೆ.