ದರ್ಶನ್ ಕೇಳಿದ್ದ ಹಾಸಿಗೆ, ತಲೆ ದಿಂಬಿಗೆ ಕೋರ್ಟ್ ನೋ ಪರ್ಮಿಷನ್..!

1 Min Read

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಬಾರಿಗೆ ಜೈಲು ಸೇರಿರುವ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಸಾಕಷ್ಟು ಕಷ್ಟಪಡ್ತಾ ಇದ್ದಾರೆ. ತಲೆ ದಿಂಬು ಇಲ್ಲದೆ, ಹಾಸಿಗೆ ಇಲ್ಲದೆ ಮೈ ಕೈ ನೋವು ಹೆಚ್ಚಾಗುತ್ತಿದೆ. ಅದರಲ್ಲೂ ಬೆನ್ನು ನೋವು ಜಾಸ್ತಿಯಾಗಿದೆ. ಹೀಗಾಗಿ ದರ್ಶನ್ ಪರ ಅವರ ವಕೀಲರು ಕೋರ್ಟ್ ಗೆ ಈ ಸಂಬಂಧ ಅರ್ಜಿ ಸಲ್ಲಿಕೆ ಮಾಡಿದ್ದರು. ಆದ್ರೆ ಈಗ ಕೋರ್ಟ್ ಆ ಬೇಡಿಕೆಗೆ ಮನ್ನಣೆ ನೀಡಿಲ್ಲ.

ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಈ ಆದೇಶವನ್ನು ನೀಡಿದೆ. ತಿಂಗಳಿಗೊಮ್ಮೆ ಚಾದರ್, ಬಟ್ಟೆ ಒದಗಿಸಲು ಕೋರ್ಟ್ ಸೂಚನೆ ನೀಡಿದೆ. ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡುವ ಆಯ್ಕೆ ಜೈಲು ಅಧಿಕಾರಿಗಳಿಗೆ ನೀಡಿದೆ. ಸಾಧ್ಯವಾದರೆ ಬೇರೆ ಬ್ಯಾರಕ್ ಗೆ ಶಿಫ್ಟ್ ಮಾಡಲು ಸೂಚನೆ ನೀಡಿದ್ದು, ಅಕ್ಟೋಬರ್ 31ರಂದು ದೋಷಾರೋಪ ನಿಗದಿಪಡಿಸಲು ಕೋರ್ಟ್ ನಿರ್ಧಾರ ತೆಗೆದುಕೊಂಡಿದೆ.

ಇನ್ನು ಆರೋಪಿಗಳ ಮೇಲೆ ದೋಷಾರೋಪ ಹೊರಿಸಲು ಸಿದ್ಧತೆ ನಡೆಸಿದೆ. ಅಕ್ಟೋಬರ್ 31ರಂದು ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಉಳಿದ ಆರೋಪಿಗಳ ವಿರುದ್ಧವೂ ಯಾವ್ಯಾವ ಸೆಕ್ಷನ್ ಗಳ ಅಡಿ ಆರೋಪ ಹೊರಿಸಲಾಗುತ್ತೆ ಎನ್ನುವು್ಉ ಕೋರ್ಟ್ ತಿಳಿಸಲಿದೆ. ಅದರ ಆಧಾರದ ಮೇಲೆ ಮುಂದೆ ಕೋರ್ಟ್ ನಲ್ಲಿ ವಾದ ಪ್ರತಿವಾದ ನಡೆಯಲಿದೆ. ನಟ ದರ್ಶನ್ ವಿರುದ್ಧ ಕೊಲೆ, ಹಲ್ಲೆ, ಕಿಡ್ನ್ಯಾಪ್, ಸಾಜ್ಷಿ ನಾಶ ಸೇರಿದಮನತೆ ವಿವಿಧ ಆರೋಪಗಳನ್ನು ವಿವಿಧ ಸೆಕ್ಷನ್ ಗಳಡು ಹೊರಿಸುವ ಸಾಧ್ಯತೆ ಇದೆ. ಜೊತೆಗೆ ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಎ5 ನಂದೀಶ್ ಅರ್ಜಿಯನ್ನು ಕೂಡ ಕೋರ್ಟ್ ವಜಾಗೊಳಿಸಿದೆ.

Share This Article
Enable Notifications OK No thanks