Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೋರ್ಟ್ ನಲ್ಲಿ ದರ್ಶನ್ ಕೇಸ್ ವಿಚಾರಣೆ : ವಾದ – ಪ್ರತಿವಾದ ಹೇಗಿತ್ತು..?

---Advertisement---

 

ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿ ನಟ ದರ್ಶನ್ ಬೆನ್ನು, ಮೊಣಕೈ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿಯೇ ಹಾಸಿಗೆ, ದಿಂಬಿಗಾಗಿ ಸಾಕಷ್ಟು ಸಲ ಮನವಿ ಮಾಡಿದ್ರು ಕೂಡ ಜೈಲಧಿಕಾರಿಗಳು ನೀಡುತ್ತಿಲ್ಲ. ವಿಚಾರಣಾಧೀನ ಕೈದಿಗೆ ಇದೆಲ್ಲವನ್ನು ನೀಡುವ ನಿಯಮವಿಲ್ಲ ಎಂಬ ಕಾರಣಕ್ಕೆ ಕೋರ್ಟ್ ನಿಂದ ಅನುಮತಿ ಸಿಕ್ಕರು ಕೊಟ್ಟಿಲ್ಲ. ಕೋರ್ಟ್ ಅಧಿಕಾರಿಗಳು ಪರಿಶೀಲನೆ ಮಾಡಿದಾಗಲೂ ಇದು ಬೆಳಕಿಗೆ ಬಂದಿದೆ. ಇದೀಗ ಇಂದು ಕೂಡ ಆ ಅರ್ಜಿ ಸಂಬಂಧ ವಿಚಾರಣೆ ನಡೆದಿದೆ‌. ಅಕ್ಟೋಬರ್ 29ಕ್ಕೆ ಕೋರ್ಟ್ ವಿಚಾರಣೆಯನ್ನ ಮುಂದೂಡಿದೆ.

ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಮೊದಲಿಗೆ ನಟ ದರ್ಶನ್ ಪರ ವಕೀಲರಾದಂತ ಸುನೀಲ್ ವಾದ ಮಂಡನೆ ಮಾಡಿದ್ದರು. ಜೈಲಿನಲ್ಲಿ ಬೇರೆ ಕೈದಿಗಳು ರಾಜಾರೋಷವಾಗಿ ಇದ್ದಾರೆ. ಗುಬ್ಬಚ್ಚಿ ಸೀನಾ ತನ್ನ ಸಹಚರರೊಂದಿಗೆ ಬರ್ತ್ ಡೇ ಮಾಡಿಕೊಂಡಿದ್ದಾನೆ. ಅದನ್ನ ಸೋಷಿಯಲ್ ಮೀಡಿಯಾದಲ್ಲಿಯೂ ಹರಿ ಬಿಟ್ಟಿದ್ದಾರೆ. ಅವರಿಗೆ ಸೌಲಭ್ಯ ಕೊಡುತ್ತಿದ್ದಾರೆ. ನಮಗೆ ಕೊಡುತ್ತಿಲ್ಲ ಎಂದು ಹೇಳುತ್ತಿಲ್ಲ. ಎಲ್ಲರಿಗೂ ಒಂದೇ ಸೌಲಭ್ಯ ಕೊಡಿ ಎಂದು ಕೇಳುತ್ತಿದ್ದೇವೆ. ಒಬ್ಬರಿಗೊಂದು ಕಾನೂನು, ಮತ್ತೊಬ್ಬರಿಗೊಂದು ರೀತಿ ಏಕೆ ಮಾಡುತ್ತೀರಾ ಎಂದು ನಟ ದರ್ಶನ್ ಪರ ವಕೀಲರಾದ ಸುನೀಲ್ ಅವರು ವಾದ ಮಂಡಿಸಿದ್ದಾರೆ.

ಇದೆ ವೇಳೆ ಸರ್ಕಾರಿ ಪರ ವಕೀಲ ಸಚಿನ್ ವಾದ‌ ಮಂಡಿಸಿದ್ದು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಗಳು ಭೇಟಿ ನೀಡಿದ್ರು. ಅವರು ಅಲ್ಲಿ ನೋಡಿದ್ದನ್ನ, ಜೈಲಾಧಿಕಾರಿಗಳ ಅಭಿಪ್ರಾಯ ಹೇಳಿದ್ದಾರೆ. ಅಧಿಕಾರಿಗಳು ಎರಡು ಕಡೆ ಪ್ರಶ್ನೆ ಮಾಡಿದ್ದಾರೆ.  ದರ್ಶನ್ ನನ್ನ ಕೇಳಿದ್ದಾರೆ. ಜೈಲಾಧಿಕಾರಿಗಳನ್ನು ಕೇಳಿದ್ದಾರೆ. ಅದನ್ನ ವರದಿಯಲ್ಲಿ  ನೀಡಿದ್ದಾರೆ.   ಅಷ್ಟಕ್ಕೇ ದಿಕ್ಕು ತಪ್ಪಿಸಿದ್ದಾರೆ, ಮಿಸ್ ಲೀಡ್ ಮಾಡಿದ್ದಾರೆ ಅಂದ್ರೆ ಹೇಗೆ?  ನಟ ದರ್ಶನ್ ಗೆ ಫಂಗಸ್ ಇನ್ಪೆಕ್ಷನ್ ಆಗಿಲ್ಲ. ಕಾಲು ಹೊಡೆದಿದೆ.  ಅದನ್ನೇ ವರದಿಯಲ್ಲಿ ಉಲ್ಲೇಖ ಮಾಡಿದ್ದಾರೆ.  ಭದ್ರತೆ ವಿಚಾರಕ್ಕೆ ಬಂದ್ರೆ ಮೊನ್ನೆ ಕೋರ್ಟ್ ಆವರಣದಲ್ಲೆ ಆರೋಪಿಯೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.    ಹೀಗಾಗಿ ದರ್ಶನ್ ಒಬ್ಬ ನಟ. ಹೀಗಾಗಿ ಸರ್ವೇ ಸಾಮಾನ್ಯವಾಗಿ ಹೈಪ್ರೋಫೈಲ್ ಕೇಸ್ ಅನ್ನೋ ಅರ್ಥ ಬರುತ್ತೆ.   ನಾವು ದರ್ಶನ್ ನ ಹೈಪ್ರೊಫೈಲ್  ಕೇಸ್ ಅಂತ ಭಾವಿಸಿಲ್ಲ ಎಂದು ಸರ್ಕಾರಿ ವಕೀಲ ಸಚಿನ್ ವಾದ ಮಂಡನೆ ಮಾಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now