ಹಿರಿಯೂರು | ವಿವಿಧ ಕಾಮಗಾರಿಗಳಿಗೆ ಸಚಿವರಿಂದ ಶಂಕುಸ್ಥಾಪನೆ

3 Min Read

ಸುದ್ದಿಒನ್, ಹಿರಿಯೂರು, ಅಕ್ಟೋಬರ್. 11 : ನಗರದಲ್ಲಿ ಸಿಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಕಾರ್ಯ ಮುಂದುವರೆದಿದ್ದು ಅದರಂತೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು ವೆಚ್ಚದಲ್ಲಿ ವಿವಿಧ ಸಿಸಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೇರಿಸಿದರು.

ನಗರದ ವಾರ್ಡ್ ನ.6ರಲ್ಲಿ ಸಿಗಬತ್ ಹೋಟೆಲ್ ಹಿಂಭಾಗದ ರಸ್ತೆ ಸಿದ್ದಕ್ಕ ಮನೆಯಿಂದ ಆಸೀನ ಮನೆಯವರಿಗೆ, ಮಂಡಕ್ಕಿ ಪಟ್ಟಿ ಆರಿಫ್ ಮನೆ ಪಕ್ಕದ ರಸ್ತೆ ವೆಂಕಟೇಶ್ವರ ದೇವಸ್ಥಾನ ಹಿಂಬಾಗ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನ ಮುಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.07ರಲ್ಲಿ ಆಜಾದ್ ನಗರ ಕೊಬ್ಬರಿ ಜಬೀ ಮನೆಯಿಂದ ಬಾಷಾ ಮನೆವರೆಗೆ, ಅಕ್ಟರ್ ಮನೆಯಿಂದ ಗುತ್ತಿಗೆದಾರರು ಸನಾವುಲ್ಲಾ ಮನೆವರೆಗೆ, ಮಂಡಕ್ಕಿ ಪಟ್ಟಿ ಆರೀಫ್ ಮನೆ ಪಕ್ಕದ ರಸ್ತೆ ವೆಂಕಟೇಶ್ವರ ದೇವಸ್ಥಾನ ಮುಂಭಾಗ ಮತ್ತು ರಾಘವೇಂದ್ರ ಸ್ವಾಮಿ ದೇವಸ್ಥಾನ ಮುಂಬಾಗ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ವಾರ್ಡ್ ನಂ.07ರಲ್ಲಿ ಆಜಾದ್ ನಗರ ವೆಂಕಟೇಶ್ವರ ದೇವಸ್ಥಾನದ ರಸ್ತೆ ಬರ್ಕತ್ ಅಲಿ ಮನೆ ಹತ್ತಿರ ಡೆಕ್ ಸ್ಟ್ರಾಬ್ ನಿರ್ಮಾಣ, ಆಜಾದ್ ನಗರ ಬಾಷಣ್ಣ ಮನೆಯಿಂದ ಲಕ್ಷ್ಮೀ ಮನೆವರೆಗೆ ಎರಡು ಕಡೆ, ಗುತ್ತಿಗೆದಾರರು ಸನಾವುಲ್ಲ ಮನೆಯಿಂದ ಮಾಜರಿ ಮನೆವರೆಗೆ ಜಾಕಿರ್ ಮನೆಯಿಂದ ನೇಮತ್ ಮನೆವರೆಗೆ, ಅಬೀಬ್ ಸಾಬ್ ಮನೆಯಿಂದ ನಗರಸಭೆ ಶೌಚಾಲಯದವರೆಗೆ, ಗುತ್ತಿಗೆದಾರರು ಮುನಾವರ್ ಮನೆಯಿಂದ ಆಟೋ ಡ್ರೈವರ್ ಜಬೀ ಮನೆವರೆಗೆ, ಸುಭಾನ್ ಸಾಬ್ ಮನೆಯಿಂದ ದಸ್ತಗಿರಿ ಸಾಬ್ ಮನೆವರೆಗೆ, ಬಾಳೆಕಾಯಿ ಹಬೀಬ್ ಮನೆಯಿಂದ ಅಬ್ಬಾಸ್ ಸಾಬ್. ಮನೆಯವರೆಗೆ ಕರೀಂಗ್ ಸ್ಟ್ರಾಬ್ ಆಳವಡಿಸುವ ಕಾಮಗಾರಿ, ಆಜಾದ್ ನಗರ ಮಂಡಕ್ಕಿ ಬಟ್ಟಿ ಆರೀಪ್ ಮನೆ ಹತ್ತಿರ ಡೆಕ್ ಸ್ಲಾಬ್ ನಿರ್ಮಾಣ, ಆಜಾದ್ ನಗರ ಚಿಕ್ಕಪೇಟೆ ರಸ್ತೆ ನೂರ್‌ಜಾನ್ ಮನೆಯಿಂದ ಅನ್ವರ್‌ಬಾಷಾ ಮನೆವರೆಗೆ ಇಂಟರ್, ವಾರ್ಡ್ ನಂ.08 ಮಿರ್ಜಾ ಬಡಾವಣೆ ಎಲ್.ಐ.ಸಿ ಗಂಗಾಧರ್ ಮನೆ ಮುಂಭಾಗದಿಂದ ಟೀ ಹೋಟೆಲ್ ಅಬ್ಬಾಸ್ ಮನೆಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.09ರಲ್ಲಿ ನಿತ್ಯಾನಂದ ನಗರ ಪೊಲೀಸ್ ರಾಘವೇಂದ್ರ ಮನೆ ಹತ್ತಿರ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಆರ್.ಎಸ್.ಎನ್. ಲೇಔಟ್ ಬೋರ್ಡ್ ಹತ್ತಿರ ಇರುವ ಮೈಲಾರಲಿಂಗೇಶ್ವರ ಸ್ವಾಮಿ ಪ್ರಸನ್ನ (ಇಂಜಿನಿಯರ್ ಕಾಂತರಾಜ ಮನೆ) ಹತ್ತಿರ, ಕಲ್ಪವೃಕ್ಷ ಲಾಡ್ಜ್ ಹತ್ತಿರ ರಸ್ತೆ ಮತ್ತು ಚರಂಡಿ ಕಾಮಗಾರಿ, ವಾರ್ಡ್ ನಂ.10ರಲ್ಲಿ ಹೊಸೂರಮ್ಮ ದೇವಸ್ಥಾನ ರಸ್ತೆ ಹಾಗೂ ತೇರುಮಲ್ಲೇಶ್ವರ ದೇವಸ್ಥಾನ ಹಿಂಭಾಗ ಸೂರ್ಯೋದಯ ಸ್ಟುಡಿಯೋ ಅಜೀಜ್ ಮನೆ ಹತ್ತಿರ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.11ರಲ್ಲಿ ಜಾಮೀಯಾ ಮಸೀದಿ ಹತ್ತಿರ ಕಾಂಕ್ರೀಟ್ ಹಾಕುವ ಕಾಮಗಾರಿ, ವಾರ್ಡ್ ನಂ.11ರಲ್ಲಿ ತೇರು ಬೀದಿ ಶೋಲ್ಡರ್ ಅಭಿವೃದ್ಧಿ ಕಾಮಗಾರಿ ಶಂಕು, ವಾರ್ಡ್ ನಂ.12ರಲ್ಲಿ ಬಟ್ಟೂರು ರಸ್ತೆ ಅಂಗಡಿ ಮಂಜಣ್ಣ ಮನೆಯಿಂದ ರುದ್ರೇಶ್ ಮನೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.13ರಲ್ಲಿ ಕುಂಬಾರ ಬೀದಿ ಅಡ್ಡ ರಸ್ತೆಗಳಲ್ಲಿ ಲತೀಫ್ ಮನೆ ರಸ್ತೆ, ಅಂಗಡಿ ನಾಗಮ್ಮ ಮನೆ ಹಿಂಭಾಗದಿಂದ ಸಾಣಿಕೆರೆ ತಿಪ್ಪೇಸ್ವಾಮಿ ಮನೆವರೆಗೆ, ಖಾಲಿ ಚೀಲ ಕಣುಮಣ್ಣ ಮನೆಯಿಂದ ದಾದು ಮನೆವರೆಗೆ ರಸ್ತೆ ಅಭಿವೃದ್ದಿ ಕಾಮಗಾರಿ, ವಾರ್ಡ್ ನಂ.14ರ ಆಸ್ಪತ್ರೆ 2ನೇ ಕ್ರಾಸ್ ಕಣಿವೆ ಮಾರಮ್ಮ ದೇವಸ್ಥಾನದಿಂದ ಕಂಡಕ್ಟ‌ರ್ ರಾಘವೇಂದ್ರ ಮನೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.15ರಲ್ಲಿ ಯರಬಳ್ಳಿ ಮಾರಮ್ಮ ದೇವಸ್ಥಾನ ರಸ್ತೆಯಿಂದ ಮೇದಾರರ ರವಿ ಮನೆಯವರೆಗೆ ಮುಂದುವರೆದು ಸುಬ್ರಮಣಿ ಪ್ಲೋರ್ ಮಿಲ್‌ವರೆಗೆ ಸಿ.ಸಿ.ಚರಂಡಿ ಮತ್ತು ಕವರಿಂಗ್ ಸ್ಟ್ಯಾಬ್ ನಿರ್ಮಾಣ, ಆಸ್ಪತ್ರೆ ಹಿಂಭಾಗ ಏಜೆಂಟ್ ರವಿ ಮನೆ ಮುಂಭಾಗ ಇಂಟರ್ ಲಾಕ್ ಪೇವರ್ಸ್ ಆಸ್ಪತ್ರೆ ಹಿಂಭಾಗ ಕುರುಬರ ಭಾಗ್ಯಕ್ಕೆ ಮನೆಯಿಂದ ಗೋಪಾಲಪುರ ಶಾಲೆ ಹಿಂಭಾಗದವರೆಗೆ ಚರಂಡಿ ಮತ್ತು ರಸ್ತೆ ನಿರ್ಮಾಣ ಕಾಮಗಾರಿ, ವಾರ್ಡ್ ನಂ.16ರಲ್ಲಿ ಕಟುಕರ ಹಳ್ಳ ರಸ್ತೆ ಮಾರಣ್ಣ ಮನೆಯಿಂದ ಕಟುಕರಹಳ್ಳದವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.17ರಲ್ಲಿ ಎಲ್.ಐ.ಸಿ ಆಫೀಸ್ ಹಿಂಭಾಗ ಶಿವಣ್ಣ ರೆಡ್ಡಿ (ನಂದಿ ಆಸ್ಪತ್ರೆ) ಹಿಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.19ರಲ್ಲಿ ಎ.ಕೆ.ಕಾಲೋನಿ ಚರ್ಚ್ ರಸ್ತೆ ಜಬೀ ಸಾಬ್ ಮನೆಯಿಂದ ಪಾಂಡು ಮನೆವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.20ರಲ್ಲಿ ವಿ.ಬಿ.ಟಿ ರಸ್ತೆಯಲ್ಲಿರುವ ಸಂಜೆವಾಣಿ ಪತ್ರರ್ಕರು ರವಿ ಮನೆ ಹಿಂಭಾಗದ ಕನ್ನರ್ವೆನ್ಸಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಂಕು ಸ್ಥಾಪನೆ ನೇರವೇರಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಆರ್ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಸದಸ್ಯರಾದ ಈ ಮಂಜುನಾಥ್, ಕವಿತಾ ಲೋಕೇಶ್, ಶಮಿಉಲ್ಲಾ, ಜಗದೀಶ್, ಅನೀಲ್ ಕುಮಾರ್, ಈರಲಿಂಗೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಮಾಜಿ ನಗರಸಭೆ ಅಧ್ಯಕ್ಷ ಚಂದ್ರಶೇಖರ್, ಅಣ್ಣಪ್ಪ, ಶಿವಣ್ಣ, ಕಬಡಿ ರವಿ, ಜ್ಞಾನೇಶ್, ಸಾದಾತ್, ಅಜೀಜ್, ಸುಜಾತಾ, ಗುರುಪ್ರಸಾದ್ ಸೇರಿದಂತೆ ಮತ್ತಿತರರು ಇದ್ದರು.

Share This Article
Enable Notifications OK No thanks