ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮೊಳಕಾಲ್ಮುರಿನ ವಿದ್ಯಾರ್ಥಿಗಳು

1 Min Read

ವರದಿ ಮತ್ತು ಫೋಟೋ ಕೃಪೆ
ಹೆಚ್. ಮಹಾಂತೇಶ್, ರಾಯಾಪುರ, ಮೊಳಕಾಲ್ಮೂರು.
ಮೊ : 93806 27082

ಸುದ್ದಿಒನ್, ಮೊಳಕಾಲ್ಮುರು, ಅಕ್ಟೋಬರ್. 12 : ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರದ ಎಲ್ ಬಿ ಸ್ಟೇಡಿಯಂನಲ್ಲಿ ನಡೆದ ರಾಜ್ಯ ಮಟ್ಟದ 17 ವರ್ಷದ ಬಾಲಕಿಯರ ಹ್ಯಾಂಡ್ಬಾಲ್ ಪಂದ್ಯಾವಳಿಯಲ್ಲಿ ಬೆಂಗಳೂರು ವಿಭಾಗದ ತಂಡವು ಪ್ರಥಮ ಸ್ಥಾನ ಪಡೆದಿದ್ದಾರೆ.

ಮೊಳಕಾಲ್ಮುರು ತಾಲ್ಲೂಕಿನ ಯರ್ರೆನಹಳ್ಳಿ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ 05 ವಿದ್ಯಾರ್ಥಿಗಳು ಮಧುಶ್ರೀ, ಲಕ್ಷ್ಮಿ, ಪಲ್ಲವಿ,ಸುನೀತಾ, ಮತ್ತು ಚಿನ್ಮಯಿ ಭಾಗವಹಿಸಿದ್ದರು. ಅದರಲ್ಲಿ ಮೂವರು ವಿದ್ಯಾರ್ಥಿಗಳು ಚಿನ್ಮಯಿ ಎಸ್.ಕೆ. ಸುನೀತಾ ಡಿ ಎಂ.ಮತ್ತು ಲಕ್ಷ್ಮಿ ಪಿ.ಎನ್ ರವರು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.

ವಿದ್ಯಾರ್ಥಿನಿಯರ ಈ ಸಾಧನೆಗೆ ಜಿಲ್ಲಾ ಉಪ ವಿಭಾಗಾಧಿಕಾರಿಗಳಾದ ಮೆಹಬೂಬ್ ಜಿಲಾನಿ ಖುರೇಷಿ, ಶಾಲೆಯ ಪ್ರಭಾರ ಪ್ರಾಂಶುಪಾಲರಾದ ದಸ್ತಗಿರಿ ಸರ್. ದೈಹಿಕ ಶಿಕ್ಷಣ ಶಿಕ್ಷಕರಾದ ಡಾ.ಸಂಪತ್ ಕುಮಾರ್ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಚಿತ್ರಗಿ ಶ್ರೀ ವಿಜಯ ಮಾಂತೇಶ್ವರ ಶಾಖಾಮಠದ ಪೀಠಾಧಿಪತಿಗಳಾದ ಶ್ರೀ ಬಸವಲಿಂಗ ಮಹಾಸ್ವಾಮಿಜಿ ಹಾಗೂ ಶ್ರೀಮಠದ ಕಾರ್ಯದರ್ಶಿಯಾದ ಪಿಆರ್ ಕಾಂತರಾಜ್ ಅಭಿನಂದಿಸಿದ್ದಾರೆ.

Share This Article
Enable Notifications OK No thanks