Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಕೆಶಿ ಮನೆಯಲ್ಲಿ ಸರ್ವೇ : ವಾರ್ಷಿಕ ಆದಾಯದ ಬಗ್ಗೆಯೂ ಪ್ರಶ್ನೆ..!

ಡಿಕೆ ಶಿವಕುಮಾರ್
---Advertisement---

ರಾಜ್ಯ ಸರ್ಕಾರ ಆರ್ಥಿಕ ಮತ್ತು ಶೈಕ್ಷಣಿಕ ಸರ್ವೇ ಮಾಡಿಸುತ್ತಿದೆ. ಇಂದು ಸಮೀಕ್ಷಕರು ಡಿಕೆ ಶಿವಕುಮಾರ್ ಮನೆಗೂ ಭೇಟಿ ನೀಡಿ, ಸರ್ವೆ ಮಾಡಿದ್ದಾರೆ. ಈ ವೇಳೆ ಜನಸಾಮಾನ್ಯರಿಗೆ ಇದ್ದಂತ ಪ್ರಶ್ನೆಗಳನ್ನೆಲ್ಲವೂ ಕೇಳಿದ್ದಾರೆ. ಯಾವ್ಯಾವ ಬ್ಯಾಂಕ್ ಗಳಲ್ಲಿ ಆದಾಯ ಹೊಂದಿದ್ದಾರೆ ಎಂಬ ಪ್ರಶ್ನೆಯು ಎದುರಾಗಿದೆ. ವಾರ್ಷಿಕ ಆದಾಯದ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಡಿಕೆಶಿ ಯಾವೆಲ್ಲಾ ಹುದ್ದೆಗಳಲ್ಲಿ ಸ್ಥಾನ ಪಡೆದಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. ಬ್ಯಾಂಕ್ ಗಳಲ್ಲಿ ಮೆಂಬರ್ ಮಾತ್ರ ಇದ್ದೀವಿ, ಶೇರ್ ಹೋಲ್ಡರ್ ಅಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

ಅಧಿಕಾರಿಗಳಿಗೆ ಪತ್ನಿ ಉಷಾ ಅವರ ಜೊತೆಗೆ ಕೂತು ಉತ್ತರವನ್ನ ನೀಡಿದ್ದಾರೆ. ಗಣತಿದಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. 60 ಪ್ರಶ್ನೆಗಳಿಗೆ ಉತ್ತರಿಸಬೇಕಾದ ತಾಳ್ಮೆ ಬೇಕಾಗಿದೆ. ಈ ವೇಳೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾ ಸಾಗಿದ ಅಧಿಕಾರಿಗಳ ಮೇಲೆ ಕೊಂಚ ಗರಂ ಆದ ಪ್ರಸಂಗವು ನಡೆದಿದೆ. ಸದಾಶಿವನಗರದ ನಿವಾಸದಲ್ಲಿ ಈ ಸಮೀಕ್ಷೆ ನಡೆದಿದೆ.

ಸೆಪ್ಟೆಂಬರ್ 22ರಿಂದಾನೇ ರಾಜ್ಯದಲ್ಲಿ ಸಮೀಕ್ಷೆ ಆರಂಭವಾಗಿದೆ. ಆದರೆ ಬೆಂಗಳೂರಿನಲ್ಲಿ ಈ ಸಮೀಕ್ಷೆ ನಡೆದಿರಲಿಲ್ಲ. ಇಂದಿನಿಂದ ಬೆಂಗಳೂರಿನಲ್ಲಿ ಆರಂಭವಾಗಿದೆ. ಅದರಲ್ಲೂ ಡಿಕೆ ಶಿವಕುಮಾರ್ ಮನೆಯಿಂದಾನೇ ಇದಕ್ಕೆ ಚಾಲನೆ ಸಿಕ್ಕಿದೆ. ಇಂದಿನಿಂದ ಬೆಂಗಳೂರಿನಾದ್ಯಂತ ಜಾತಿಗಣತಿ ಸಮೀಕ್ಷೆ ನಡೆಯಲಿದೆ. ಅಕ್ಟೋಬರ್ 8 ಡೆಡ್‌ಲೈನ್ ನೀಡಲಾಗಿದೆ. ಅಷ್ಟರಲ್ಲಿ ಸರ್ವೇ ಮುಗಿಯುವುದು ಕಷ್ಟ ಎಂದೇ ಶಿಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಂದೊಂದು ಮನೆಯ ಸರ್ವೇಯನ್ನು ಮಾಡುವುದಕ್ಕೇನೆ ಒಂದರಿಂದ ಒಂದೂವರೆ ಗಂಟೆ ಸಮಯ ಬೇಕಾಗುತ್ತದೆ. ಹೀಗಿರುವಾಗ ಕೊಟ್ಟಿರುವ ಕಡಿಮೆ ಸಮಯದಲ್ಲಿ ಗಣತಿ ಸಂಪೂರ್ಣ ಮಾಡುವುದು ಹೇಗೆ ಎಂಬ ಪ್ರಶ್ನೆ ಶಿಕ್ಷಕರನ್ನು ಕಾಡುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now