ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನ ಹೂತು ಹಾಕಿದ್ದೀನಿ ಎಂದಿದ್ದ ಚಿನ್ನಯ್ಯನ ಮಾತಿನಂತೆ ಎಸ್ಐಟಿ ಕೂಡ ಹುಡುಕಾಟ ನಡೆಸಿತ್ತು. ಒಂದಷ್ಟು ತಲೆಬುರುಡೆ, ಅಸ್ಥಿಪಂಜರಗಳು ಸಹ ಸಿಕ್ಕಿದ್ದವು. ಆ ಬುರುಡೆಗಳನ್ನ ಎಫ್ಎಸ್ಎಲ್ ವರದಿಗೆ ಕಳುಹಿಸಿತ್ತು. ಇದೀಗ ತಲೆ ಬುರುಡೆ ವರದಿ ಬಂದಿದೆ. ಆ ವರದಿಯಲ್ಲಿ ತಲೆ ಬುರುಡೆ ಯಾರದ್ದು ಎಂಬ ವಿಷಯವು ಬಹಿರಂಗವಾಗಿದೆ.
ಎಫ್ಎಸ್ಎಲ್ ವರದಿಯಲ್ಲಿ, ಬಂಗ್ಲೆಗುಡ್ಡದಲ್ಲಿ ಸಿಕ್ಕಂತ ತಲೆಬುರುಡೆ ಹಾಗೂ ಅಸ್ಥಿಪಂಜರ ಮಹಿಳೆಯರದ್ದಲ್ಲ ಪುರುಷರದ್ದು ಎಂಬುದು ಗೊತ್ತಾಗಿದೆ. ಈ ವರದಿಯನ್ನು ನೋಡಿದ ಬಳಿಕ ಚಿನ್ನಯ್ಯ ಹೇಳಿದ ಮಾತು ಸುಳ್ಳು ಎಂಬಂತೆ ಆಗಿದೆ. ಚಿನ್ನಯ್ಯ ಕೋರ್ಟ್ ಗೆ ಹಿಡಿದುಕೊಂಡು ಬಂದಿದ್ದ ತಲೆ ಬುರುಡೆ ಕೂಡ ಪುರುಷರದ್ದೇ ಎಂದು ವರದಿಯಲ್ಲಿ ಬಹಿರಂಗವಾಗಿದೆ.
ಧರ್ಮಸ್ಥಳದಲ್ಲಿ ಸಾಕಷ್ಟು ಅತ್ಯಾಚಾರ ನಡೆದಿದೆ. ಆ ಮಹಿಳೆಯರನ್ನ ಕೊಲೆ ಮಾಡಲಾಗಿತ್ತು. ಬಳಿಕ ಆ ಶವಗಳನ್ನೆಲ್ಲ ನಾನೇ ಹೂತು ಹಾಕಿದ್ದೇನೆ ಎಂಬ ಹೇಳಿಕೆಯನ್ನ ನೀಡಲಾಗಿತ್ತು. ಇದೀಗ ಚಿನ್ನಯ್ಯ ಕೋರ್ಟ್ ಗೆ ತಂದುಕೊಟ್ಟ ಬುರುಡೆಯೇ 40 ವರ್ಷದ ಆಸುಪಾಸಿನ ಪುರುಷನದ್ದು ಎಂಬ ವರದಿ ಬಂದಿದೆ. ಇನ್ನು ಉತ್ಖನನ ನಡೆಯುವಾಗ 6ನೇ ಸ್ಪಾಟ್ ನಲ್ಲಿ ಸಿಕ್ಕ ಮೂಳೆಗಳು 25 ವರ್ಷಗಳ ಆಸುಪಾಸಿನ ಯುವಕನದ್ದಾಗಿದೆ. 15ನೇ ಸ್ಪಾಟ್ ನಲ್ಲಿ ಸಿಕ್ಕ ಮೂಳೆ ಕೂಡ ಪುರಿಷನದ್ದೇ ಆಗಿದೆ. ಅದು 30-39 ವರ್ಷ ಆಸುಪಾಸಿನ ಪರ ಷನ ದೇಹದ್ದಾಗಿದೆ. ದೇಹದ ಮೇಲೆ ಹಲ್ಲೆಯಾಗಿರುವ ಯಾವ ಕುರುಹುಗಳು ಕೂಡ ಪತ್ತೆಯಾಗಿಲ್ಲ. ವಿಷ ಏನಾದ್ರೂ ಸೇವಿಸಿದ್ದಾರಾ ಎಂಬ ಪರೀಕ್ಷೆಯನ್ನು ಮುಂದುವರೆಸಿದ್ದಾರೆ. ಆದ್ರೆ ಚಿನ್ನಯ್ಯ ಹೇಳಿದ ಮಾಹಿತಿ ಸುಳ್ಳು ಎಂಬುದು ಈ ವರದಿಯಿಂದ ಗೊತ್ತಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














