ವಿಜಯ್ ಕಾರ್ಯಕ್ರಮದಲ್ಲಿ 40 ಜನರ ಸಾವು : ಕಾಲ್ತುಳಿತಕ್ಕೆ ಕಾರಣವೇನು ಗೊತ್ತಾ..?

1 Min Read

ಸುದ್ದಿಒನ್

ನಟ ಹಾಗೂ ಕೆವಿಕೆ ಸಂಸ್ಥಾಪಕ ವಿಜಯ್ ರ್ಯಾಲಿ ನಡೆಸಿದ್ದರು. ಈ ರ‌್ಯಾಲಿ ವೇಳೆ ಕಾಲ್ತುಳಿತ ಉಂಟಾಗಿ 40 ಜನರು ಜೀವ ಕಳೆದುಕೊಂಡಿದ್ದಾರೆ. ಈ ದುರಂತ ಈಗ ರಾಜಕೀಯ ಕೆಸೆರೆಚಾಟಕ್ಕೆ ಕಾರಣವಾಗಿದೆ. ಆಡಳಿತ ಪಕ್ಷ ಡಿಎಂಕೆ ನಾಯಕರು ಈ ದುರ್ಘಟನೆಗೆ ಆಯೋಜಕರೆ ಕಾರಣ ಎಂದು ಹೇಳುತ್ತಿದ್ದರೆ, ವಿಜಯ್ ಅಭಿಮಾನಿಗಳು ಅದೇ ಡಿಎಂಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎನ್ನುತ್ತಿದ್ದಾರೆ.

ಈ ನಡುವೆ ವಿಜಯ್ ಬಂಧನಕ್ಕೂ ಆಗ್ರಹ ಕೇಳಿ ಬರುತ್ತಿದೆ. ಕಾರ್ಯಕ್ರಮದಲ್ಲಿ ಕೇವಲ 10 ಸಾವಿರ ಜನರಿಗೆ ಮಾತ್ರ ಅವಕಾಶವಿತ್ತು. ಆದರೆ ವಿಜಯ್ ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಸೀಮಿತ ಪ್ರದೇಶ ಕಿರಿದಾಗಿರುವ ಕಾರಣ ಉಸಿರುಗಟ್ಟಿದ ವಾತಾವರಣ ನಿರ್ಮಾಣವಾಗಿತ್ತು. ಹೀಗಾಗಿಯೇ ಉಸಿರುಗಟ್ಟಿಯೇ ಹಲವರು ಸಾವನ್ನಪ್ಪಿದ್ದಾರೆ.

ಬೆಳಗ್ಗೆಯೇ ರ‌್ಯಾಲಿ ನಡೆಸುವುದಕ್ಕೆ ಸಮಯ ನಿಗದಿಯಾಗಿತ್ತು. ಸುಮಾರು ಆರು ಗಂಟೆ ತಡವಾಗಿ ರ‌್ಯಾಲಿಗೆ ವಿಜಯ್ ಆಗಮಿಸಿದ್ದರು. ಹೆಚ್ಚಿನ ಜನ ಸೇರಿದ್ದರಿಂದ ಪೊಲೀಸರಿಗೂ ಅದನ್ನು ನಿಭಾಯಿಸಲು ಕಷ್ಟಕರವಾಗಿತ್ತು. ಜನದಟ್ಟಣೆಯಿಂದ ಉಸಿರಾಟದ ಸಮಸ್ಯೆಯಾಗಿ ಹಲವರು ಅಲ್ಲಿಯೆ ಮೂರ್ಚೆ ಹೋಗಿದ್ದರು. ಪುಟ್ಟ ಪುಟ್ಟ ಮಕ್ಕಳು ಕೂಡ ರ‌್ಯಾಲಿಗೆ ಬಂದಿದ್ದರು. ಅವರ ಕುಟುಂಬಸ್ಥರಿಂದ ದೂರ ಸರಿದಿದ್ದರು. ಅಲ್ಲಿನ ಪರಿಸ್ಥಿತಿ ಕಂಡಾಗ ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ ಎಂಬುದು ಕಾಣಿಸುತ್ತಿದೆ. ಅಭಿಮಾನದ ಹುಚ್ಚಿಗೆ ಜನ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಜನ ದಟ್ಟಣೆಯಿಂದ ಉಸಿರಾಟದ ಸಮಸ್ಯೆಯಿಂದ ಸಾವಿನ ಸಂಖ್ಯೆ 40 ಆಗಿದೆ. ಗಾಯಾಳುಗಳನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆಯನ್ನು ನೀಡಲಾಗುತ್ತಿದೆ.

Share This Article
Enable Notifications OK No thanks