Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

🔴 ಅಡ್ಮಿಷನ್ ಓಪನ್

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ

2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)

ಸಂಪೂರ್ಣ ಮಾಹಿತಿ & ದಾಖಲಾತಿಗಾಗಿ ಕ್ಲಿಕ್ ಮಾಡಿ ➔
---Advertisement---

ಸೆ. 28 ರಂದು ಶ್ರೀ ಶಕ್ತಿ ಗಣಪತಿ ವಿಸರ್ಜನೆಗೆ ಹಿರಿಯೂರು ಸಜ್ಜು

---Advertisement---

ಸುದ್ದಿಒನ್, ಹಿರಿಯೂರು, ಸೆಪ್ಟೆಂಬರ್. 26 : ನಗರದ ನೆಹರೂ ಮೈದಾನದಲ್ಲಿ ಒಂದು ತಿಂಗಳ ಕಾಲ ಶ್ರೀ ಶಕ್ತಿ ಗಣಪತಿ ಪೂಜಾ ಸಮಿತಿ ಹಾಗೂ ನಗರಸಭೆ ವತಿಯಿಂದ ಪ್ರತಿಷ್ಠಾಪಿಸಿದ್ದ 54ನೇ ವರ್ಷದ ಶ್ರೀ ಶಕ್ತಿ ಗಣಪತಿಯ ಬೃಹತ್ ವಿಸರ್ಜನಾ ಮೆರವಣಿಗೆ ನಾಳೆ ಸೆ. 28 ಭಾನುವಾರ ನಡೆಯಲಿ ಎಂದು ಶ್ರೀ ಶಕ್ತಿ ಗಣಪತಿ ಪೂಜಾ ಸಮಿತಿ ಅಧ್ಯಕ್ಷ ಖಾದಿ ಜೆ ರಮೇಶ್ ತಿಳಿಸಿದರು.

ಶಕ್ತಿ ಗಣಪತಿ ಪೂಜಾ ಸಮಿತಿ ಆವರಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾಹಿತಿ ನೀಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಈ ಬಾರಿ 54ನೇ ವರ್ಷದ ಶಕ್ತಿ ಗಣಪತಿ ವಿಜೃಂಭಣೆಯಿಂದ ನಡೆಯುತ್ತಿದೆ. ಮೆರವಣಿಗೆ ದಿನ ಬೆಳಿಗ್ಗೆ 11.30 ಕ್ಕೆ ಶ್ರೀ ವಿಘ್ನೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅಲಂಕರಿಸಿದ ಟ್ರಾಕ್ಟರ್ ನಲ್ಲಿ ವಿನಾಯಕನ ವಿಗ್ರಹ ಕೂರಿಸಿ ಮೆರವಣಿಗೆ ಆರಂಭವಾಗೊಳ್ಳಲಿದೆ. ಪ್ರತಿಷ್ಠಾಪನಾ ಸ್ಥಳದಿಂದ ಆರಂಭವಾದ ಮೆರವಣಿಗೆಯು ಗಾಂಧಿ ಸರ್ಕಲ್ ಪ್ರವೇಶಿಸಿ ಮತ್ತೆ ಪುನಃ ಹಿಂದುರುಗಿ ಬಿಇಒ ಕಚೇರಿ, ಆಸ್ಪತ್ರೆ ಸರ್ಕಲ್, ಖಾಸಗಿ ಬಸ್ ನಿಲ್ದಾಣ, ರಂಜಿತ್ ಹೋಟೆಲ್ ತಲುಪಿ ಅಲ್ಲಿಂದ ಪುನಃ ಆಸ್ಪತ್ರೆ ವೃತ್ತ, ಚರ್ಚ್ ರಸ್ತೆ, ಹುಳಿಯಾರು ರಸ್ತೆ ಮೂಲಕ ಗಾಂಧಿ ಸರ್ಕಲ್ ತಲುಪಿದ ಬಳಿಕ ನಂತರ ಸಿಡಿಮದ್ದು ಪ್ರದರ್ಶನ ನಡೆಯಲಿದೆ ಇದಾದ ನಂತರ ನಗರದ ರಾತ್ರಿ 9 ಗಂಟೆಗೆ ನಗರದ ಹೊರವಲಯದಲ್ಲಿರುವ ಬಸವರಾಜ್ ಕಾಲೇಜು ಹಿಂಭಾಗದ ಮರಡಿ ರಂಗಜ್ಜನ ತೋಟದ ಬಾವಿಯಲ್ಲಿ ವಿಸರ್ಜನೆ ಮಾಡಲಾಗುವುದು.

13 ಕಲಾ ತಂಡಗಳು ಭಾಗಿ :
ಮೂರು ಡಿಜೆ ವ್ಯವಸ್ಥೆ ಮೆರವಣಿಗೆ ರಂಗು ನೀಡಲಿದೆ ಉರುಮೆ, ತಮಟೆ ವಾದ್ಯ, ಗೊಂಬೆ ಕುಣಿತ, ವೀರಗಾಸೆ, ದೊಳ್ಳುಕುಣಿತ ಸೇರಿದಂತೆ ಸುಮಾರು 13 ಕಲಾ ತಂಡಗಳು ಭಾಗವಹಿಸಲಿವೆ. ಮೆರವಣಿಗೆಯಲ್ಲಿ ಸುಮಾರು 5 ರಿಂದ 10 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿದೆ. ಭಕ್ತರಿಗೆ 5 ಸಾವಿರ ಎಳನೀರು, ಸೇಬು, ಬಾಳೆಹಣ್ಣು, ಸೌತೆಕಾಯಿ, ಪಾನಿಪುರಿ, ಗೊಲ್ಗುಪ್ಪಾ, ಮಜ್ಜಿಗೆ ಪ್ಯಾಕೆಟ್, ಐಸ್ ಕ್ರೀಮ್, ನೀರು ಸೇರಿದಂತೆ ಬೆಳಿಗ್ಗೆ ತಿಂಡಿ ವ್ಯವಸ್ಥೆ ಹಾಗೂ ಗಿರೀಶ ಶಾಲೆ ಆವರಣದಲ್ಲಿ ಮಧ್ಯಾಹ್ನ ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ವಿಸರ್ಜನಾ ಸ್ಥಳದಲ್ಲೂ ಕೂಡ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಗಣೇಶನ ಉತ್ಸಾಹವೂ ಜಾತ್ಯತೀತ ಮತ್ತು ಪಕ್ಷತಿತವಾಗಿ ಒಳಗೊಂಡಿದ್ದು ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮದವರು ಭಾಗವಹಿಸಿದ್ದು, ಮೆರವಣಿಗೆಯಲ್ಲೂ ಪಾಲ್ಗೊಳ್ಳುವರು. ಹಿರಿಯೂರು ಅಷ್ಟೇ ಅಲ್ಲ ಶಿವಮೊಗ್ಗ, ಬಳ್ಳಾರಿಯಿಂದಲೂ ಸಹ ಭಕ್ತರು ಸಹ ಈ ಉತ್ಸವದಲ್ಲಿ ಭಾಗಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದುವರೆಗೂ ಸುಮಾರು 8 ರಿಂದ 10 ಲಕ್ಷ ಭಕ್ತರು ದರ್ಶನ ಪಡೆದಿದ್ದಾರೆ. ಮೆರವಣಿಗೆ ತಾಲ್ಲೂಕಿನ ಜನತೆ ಸಹಕಾರ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಆರ್ ಬಾಲಕೃಷ್ಣ, ಸಮಿತಿಯ ಗೌರವಾಧ್ಯಕ್ಷ ಈ. ಮಂಜುನಾಥ್, ಸಮಿತಿಯ ಪದಾಧಿಕಾರಿಗಳಾದ ಹೆಚ್‌ಪಿ. ಮಹಾಂತೇಶ್, ಜಗದೀಶ್, ಕಬ್ಬಡಿ ರವಿ,ವಿಠ್ಠಲ್, ಶಿವಕುಮಾರ್, ‌ಶಿವಣ್ಣ, ಸುರೇಶ್, ರಮೇಶ್ ಬಾಬು, ಜ್ಣಾನೇಶ್, ಅಣ್ಣಪ್ಪ, ನಗರಸಭೆ
ಉಪಾಧ್ಯಕ್ಷರು, ಸಾಯಿ ಸಮಿತಿ ಅಧ್ಯಕ್ಷರುಗಳು ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...