Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯೂಟ್ಯೂಬರ್ ಮುಕಳೆಪ್ಪ ಮದುವೆ ಕೇಸ್: ಮೊದಲು ಆ ಹುಡುಗಿಯನ್ನ ರಕ್ಷಣೆ ಮಾಡಬೇಕು : ಕಮಿಷನರ್ ಶಶಿ ಕುಮಾರ್

---Advertisement---

ಹುಬ್ಬಳ್ಳಿ: ಯೂಟ್ಯೂಬರ್ ಮುಕಳೆಪ್ಪ ಮದುವೆಯಾದಾಗಿನಿಂದ ಆತನ ವಿರುದ್ಧ ಪೋಷಕರು ಸೇರಿದಂತೆ ಹಿಂದೂಪರ ಸಂಘಟನೆಯವರು ಆಕ್ರೋಶ ಹೊರ ಹಾಕಿದ್ದಾರೆ. ಹಿಂದೂ ಹುಡುಗಿಗೆ ನಕಲಿ ದಾಖಲೆ ತೋರಿಸಿ, ಮದುವೆಯಾಗಿದ್ದಾನೆ. ಲವ್ ಜಿಹಾದ್ ಮಾಡಿದ್ದಾನೆ ಎಂದು. ಇದೀಗ ಪೊಲೀಸ್ ಕಮಿಷನರ್ ಶಶಿಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಹಿಂದೂ ಪರ ಸಂಘಟನೆಯವರು ಏನು ಆರೋಪ ಮಾಡ್ತಾರೆ ಎಂಬುದಕ್ಕೆ ನಾನು ಪ್ರತಿಕ್ರಿಯೆ ನೀಡುವುದಕ್ಕೆ ಆಗಲ್ಲ. ಆ ಘಟನೆ ಕಾನೂನಾತ್ಮಕವಾಗಿ ಅಪರಾಧವಾಗುತ್ತಾ ಇಲ್ವಾ ಅನ್ನೋದು ನನ್ನ ಪ್ರಶ್ನೆ ಅಷ್ಟೆ. ಕಾನೂ‌ನಾತ್ಮಕವಾಗಿ ಏನು ಕ್ರಮ ಕೈಗೊಳ್ಳಬೇಕು ಎಂಬುದು ನಮಗೆ ಸ್ಪಷ್ಟತೆ ಇದೆ. ಪ್ರಕರಣ ದಾಖಲು ಮಾಡಿಕೊಳ್ಳುವುದಕ್ಕೂ ಮುಂಚೆ ವಿಡಿಯೋ, ಆಡಿಯೋ ನಮ್ಮ ಕಡೆ ತಲುಪಿತ್ತು. ಅಂದ್ರೆ ನಾನು ಯಾರ ಒತ್ತಡ ಇಲ್ಲದೆ ನಾನೇ ಹೋಗಿದ್ದೀನಿ ಎಂಬುದು.

ಅಷ್ಟಾಗಿಯೂ ಪೋಷಕರ ಕಡೆಯಿಂದ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ. ಪ್ರಕರಣದ ತನಿಖೆ ಮಾಡ್ತಾ ಇದ್ದೇವೆ. ಆದಷ್ಟು ಬೇಗ ಈ ಪ್ರಕರಣದ ಆರೋಪಿಯನ್ನ ವಶಕ್ಕೆ ಪಡೆಯುವಮನತದ್ದು, ಹುಡುಗಿಯನ್ನ ರಕ್ಷಣೆ ಮಾಡುವಂತದ್ದನ್ನ ಮಾಡ್ತೇವೆ. ಬಳಿಕ ತನಿಖೆಯಲ್ಲಿ ಹೊರ ಬಂದ ಅಂಶದ ಮೇಲೆ ಕ್ರಮ ಕೈಗೊಳ್ಳುತ್ತೇವೆ.

ಈ ರೀತಿಯ ಘಟನೆ ನಡೆದಾಗ ಸಹಜವಾಗಿಯೇ ಎಲ್ಲರಿಗೂ ಆತಂಕವಿರುತ್ತದೆ. ಆ ಹುಡುಗಿ ನಿಜವಾಗಲೂ ಇಷ್ಟಪಟ್ಟು ಹೋಗಿರುವುದಾ..? ಬೇರೆ ಯಾರದ್ದಾದರೂ ಒತ್ತಡದಿಂದ ಹೋಗಿದ್ದಾಳಾ ಅಂತ. ಪ್ರತಿಯೊಂದು ಅಂಶಗಳನ್ನು ಕೂಲಂಕುಶವಾಗಿ ತನಿಖೆಯನ್ನ ಮಾಡುತ್ತೇವೆ. ತನಿಖೆಯ ನಂತರವಷ್ಟೇ ವಿಚಾರಗಳು ತಿಳಿಯುತ್ತವೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ತಿಳಿಸಿದ್ದಾರೆ. ಮುಕಳೆಪ್ಪ ಮದುವೆಯಾದ ಹುಡುಗಿ, ನಾನು ಇಷ್ಟಪಟ್ಟಿಯೇ ಈ ಮದುವೆ ಆಗಿರೋದು. ಇದಕ್ಕೆ ನಮ್ ಅವ್ವನದ್ದು ಸಪೋರ್ಟ್ ಇದೆ. ಆದ್ರೆ ಈಗ ಯಾಜೆ ಆ ರೀತಿ ಮಾತಾಡ್ತಾ ಇದ್ದಾರೆ ಗೊತ್ತಿಲ್ಲ ಎಂಬ ವಿಡಿಯೋ ಹರಿಬಿಟ್ಟಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...