Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ನಾಳೆಯಿಂದ ಕಬೀರಾನಂದ ಆಶ್ರಮದಲ್ಲಿ ಶರನ್ನವರಾತ್ರಿ ಮಹೋತ್ಸವ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ಸೆ. 21 : ನಗರದ ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಆಶ್ರಮದವತಿಯಿಂದ ನಾಳೆಯಿಂದ (ಸೆ. 22 ರಿಂದ ಅ. 2ರವರೆಗೆ) ಆಶ್ರಮದಲ್ಲಿನ ಶ್ರೀ ಭಗವತಿ ಬಗಳಾಂಬಿಕಾದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಕಾರ್ಯಕ್ರಮವನ್ನು ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.

ಸೆ. 22 ರಿಂದ ಅ.2ರ ವಿಜಯದಶಮಿಯವರೆಗೂ ಪ್ರತಿ ದಿನ ಸಂಜೆ 7 ರಿಂದ 9ರವರೆಗೆ ದೇವಿ ಚರಿತೆಯ ಪಾರಾಯಣ ನೆಡೆಯಲಿದೆ. ದೇವಿ ಚರಿತೆಯನ್ನು ಮಲ್ಲಾಪುರ ಗೊಲ್ಲರಹಟ್ಟಿಯ ಸಿ.ಈರಣ್ಣ ಪಠಿಸಿದರೆ ಸಾಹಿತಿಗಳು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿಗಳಾದ ಹುರಳಿ ಬಸವರಾಜು ಚರೊತೆಯನ್ನು ಪ್ರವಾಚಿಸಲಿದ್ದಾರೆ. ಇವರೊಂದಿಗೆ ಆಯಿತೋಳಿನ ಜಾನಪದ ಕಲಾವಿದರಾದ ಜಿ.ಎನ್.ವಿರೂಪಾಕ್ಷಪ್ಪರವರಿಂದ ಹಾರ್ಮೋನಿಯಂ ಹಾಗೂ ಯಶವಂತಕುಮಾರ್ ತಬಲವನ್ನು ನುಡಿಸಲಿದ್ದಾರೆ.

 

ಸೆ. 26ರ ಶುಕ್ರವಾರ ಬೆಳ್ಳಿಗೆ 8 ರಿಂದ ಮಧ್ಯಾಹ್ನ 12ರವರೆಗೆ ಸುಭ್ರಾಯ ತಿಮ್ಮಣ್ಣ ಭಟ್ಟರ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಲಿದೆ. ಅ.2ರಂದು ಸಂಜೆ 4 ಗಂಟೆಗೆ ಶ್ರೀ ಮಠದ ಕತೃಗಳಾದ ಶ್ರೀ ಸದ್ಗುರು ಕಬೀರಾನಂದ ಶ್ರೀಗಳ 119ನೇ ವರ್ಷದ ಜಯಂತ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು, ಸಂಜೆ ಬನ್ನಿಯನ್ನು ಮುಡಿಯಲಿದ್ದು, ಸಂಜೆ 7 ಗಂಟಗೆ ಶ್ರೀದೇವಿ ಪುರಾಣ ಮುಕ್ತಾಯವಾಗಲಿದೆ. ಈ ಶರನ್ನವರಾತ್ರಿ ಸಮಯದಲ್ಲಿ ಶ್ರೀ ಭಗವತಿ ಬಗಳಾಂಬಿಕಾದೇವಿಗೆ ನಿತ್ಯವೂ ಪಂಚಾಮೃತ ಅಭೀಷೇಕ ನಡೆಯಲಿದೆ. ಇದ್ದಲ್ಲದೆ ಪ್ರತಿ ನಿತ್ಯ 5.30 ರಿಂದ 6.30ರವರೆಗೆ ಮಾತೆಯರಿಂದ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರ ಪಠಣವಾಗಲಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...