Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬ್ಯಾರನ್‌ ದ್ವೀಪದ ಜ್ವಾಲಾಮುಖಿ ವಿಶೇಷತೆ : ನಿಮಗೆ ತಿಳಿದಿರದ ಆಸಕ್ತಿಕರ ಮಾಹಿತಿ…!

---Advertisement---

ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘ (ರಿ.), ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ಸುದ್ದಿಒನ್ :
ಭಾರತದ ಅಂಡಮಾನ್‌ನಲ್ಲಿರುವ ಬ್ಯಾರೆನ್‌ ಐಲೆಂಡ್‌ ಜ್ವಾಲಾಮುಖಿ ಭಾರತದ ಐಕೈಕ ಜ್ವಾಲಾಮುಖಿ. ಇದು ಕ್ರಿಯಾಶೀಲ ಜ್ವಾಲಮುಖಿ, ಬ್ಯಾರೆನ್‌ ಐಲೆಂಡ್‌ ಒಂದು ನಿರ್ಜನ ದ್ವೀಪ. ಇದು ಬಂಗಾಳಕೊಲ್ಲಿಗೆ ಸುಮಾರು 1,200 ಕಿ.ಮೀ. ದೂರದಲ್ಲಿರುವ ಈ ದ್ವೀಪದಲ್ಲಿ ಹಿಂದೆ ಜನ ವಾಸಿಸುತ್ತಿದ್ದ ಯಾವ ಕುರುಹುಗಳಿಲ್ಲ. ಈಗಲೂ ಅದು ನಿರ್ಜನ ದ್ವೀಪವೇ.
ಹಿಮಾಲಯ, ರಾಜಾಸ್ಥಾನ, ಗುಜರಾತ್‌, ಮಹರಾಷ್ಟ್ರಗಳಲ್ಲಿ ಆಗಾಗ ಭೂಕಂಪನಗಳಿಂದ ತತ್ತರಿಸಿಹೋಗಿದೆ. ಹಿಂದೆ ಸಹಸ್ರಾರು ಮಂದಿ ಈ ನೈಸರ್ಗಿಕ ವಿಕೋಪಕ್ಕೆ ತುತ್ತಾಗಿದ್ದಾರೆ. ಈ ಭೂಕಂಪನ ಕೇವಲ ಕೆಲವು ಪ್ರದೇಶಕ್ಕೆ ಸೀಮಿತವಾಗಿದೆ. ಅಂಥಹ ಪ್ರದೇಶಗಳ ಆಳದಲ್ಲಿ ಭೂಚಿಪ್ಪು ದುರ್ಬಲವಾಗಿರುತ್ತದೆ. ಸ್ವಲ್ಪ ಸರಿದರೂ ಸಾಕು ಭೀಕರ ಭೂಕಂಪನಗಳಾಗುತ್ತವೆ. ಪ್ರವಾಹ, ಚಂಡಮಾರುತ, ಬರ ಅತಿವೃಷ್ಟಿ, ಅನಾವೃಷ್ಟಿಗಳಿಂದ ಭಾರತದ ಉಪಖಂಡ ಸಂಪೂರ್ಣವಾಗಿ ಮುಕ್ತವಾಗಿಲ್ಲ.
ಅಂಡಮಾನ್‌ ನಿಕೋಬಾರ್‌ ದ್ವೀಪದ ಸುತ್ತಮುತ್ತಲು ಹತ್ತಾರು ಸಣ್ಣಪುಟ್ಟ ದ್ವೀಪಗಳಿವೆ. ಬ್ಯಾರೆನ್‌ ಐಲೆಂಡ್‌ ಸುಮಾರು ಹತ್ತು ಕಿ.ಮೀ. ಸುತ್ತಳತೆ ಹೊಂದಿದೆ ಮತ್ತು ಇದು ವೃತ್ತಾಕಾರವಾಗಿದೆ. ಸುಮಾರು ಒಂದು ಲಕ್ಷ ವರ್ಷಗಳ ಹಿಂದೆ ಸಮುದ್ರದ ತಳಭಾಗದಲ್ಲಿ ಜ್ವಾಲಾಮುಖಿ ಶಿಲಾರಸವನ್ನು ಹೊರಸೂಸಿ, ಈ ಸಣ್ಣ ದ್ವೀಪ ಜನಿಸಲು ಕಾರಣವಾಯಿತು. ಅಂಡಮಾನ್‌ ದ್ವೀಪದ ಬಹು ಜನರಿಗೆ ಅಲ್ಲೊಂದು ಜ್ವಾಲಾಮುಖಿ ಇತ್ತೆಂಬ ಸುಳಿವು ಇರಲಿಲ್ಲ. 1991ರಲ್ಲಿ ಜ್ವಾಲಾಮುಖಿ ಕೆರಳಿದಾಗ ತನ್ನ ಬಾಯಿಯನ್ನೇ ಬದಲಿಸಿತ್ತು. ಬೆಂಕಿಯ ಜ್ವಾಲೆ ಸುಮಾರು 40 ಮೀಟರ್‌ ಎತ್ತರಕ್ಕೆ ಚಿಮ್ಮಿತ್ತಿತ್ತು. 800 ಮೀ. ಎತ್ತರಕ್ಕೆ ಹೊಗೆಯ ಕಾರ್ಮೋಡವನ್ನು ಏಳಿಸಿತ್ತು. ಇದು ಮಂದವಾದ ಶಿಲಾರಸವನ್ನು ಭೂಚಿಪ್ಪಿನ ಹೊರಕ್ಕೆ ಹೊಮ್ಮಿಸಿತ್ತು. ಅದರ ಮಂದ ಸುಮಾರು 8 ಮೀಟರ್‌ ತಾಪಮಾನ 900 ಡಿಗ್ರಿ ಸೆ.ಗೂ ಅಧಿಕವಿತ್ತು. ಲಾವಾರಸ ನಿಧಾನವಾಗಿ ಹರಿದು ಸಮುದ್ರ ಸೇರುತ್ತಿತ್ತು. 1852ರಲ್ಲಿ ಇದು ಸ್ಫೋಟಿಸಿ ಸ್ತಬ್ಧವಾಗಿತ್ತು. ಈ ಜ್ವಾಲಾಮುಖಿಯ ಅಧ್ಯಯನವನ್ನು ಕೇಂದ್ರ ಸರ್ಕಾರ ಕಲ್ಕತ್ತಾದಲ್ಲಿರುವ ಭಾರತೀಯ ಭೂವೈಜ್ಞಾನಿಕ ಸರ್ವೇ ಸಂಸ್ಥೆಯಿಂದ ನಿರಂತರವಾಗಿ ಕಾರ್ಯ ಮುಂದುವರಿಸಿದೆ.
ಈ ಜ್ವಾಲಮುಖಿಯು ಸುತ್ತಮುತ್ತ ಮತ್ತು ಮಯಮ್ನಾರ್‌ ಜ್ವಾಲಾಮುಖಿಗಳ ಪಟ್ಟಿಯಲ್ಲಿ  ಇದೂ ಒಂದು. ಮಯಮ್ಯಾರ್‌ನ ಮೌಂಟ್‌ ಫೋಪ್‌ದಿಂದ ಇಡಿದು ಇಂಡೋನೇಷ್ಯದ ಕ್ರಕಟೋವ್‌ ಮತ್ತು ಮೌಂಟ್‌ ತೋಬವರಿಗೆ ಗಮನಿಸಿದರೆ ಬ್ಯಾರೆನ್‌ ಐಲೆಂಡ್‌ ಸೇರಿದಂತೆ ಸುಮಾರು 60 ಜ್ವಾಲಾಮುಖಿಗಳಿವೆ ಎಂದು ಭೂವೈಜ್ಞಾನಿಕ ಸಮೀಕ್ಷೆಯಿಂದ ದೃಢಪಟ್ಟಿದೆ.
ಸಮುದ್ರದಲ್ಲಿ ನೀರಿರುವುದರಿಂದ ಒಳಗಗೇನಿದೆ ಎಂಬುದು ಆಗಿನ ಸಂದರ್ಭದಲ್ಲಿ ತಿಳಿದಿರಲಿಲ್ಲ. ಈ ಭಾಗದ ಸಾಗರ ತಳವನ್ನು ಅಧ್ಯಯನ ಮಾಡಿದ ಅಂದಿನ ತಜ್ಞರ ಮಾಹಿತಿಯಂತೆ ನೂರಾರು ಕಿ.ಮೀ. ಹಾಯುವ ಛಿದ್ರ ವಲಯವಿದೆ. ಅದು ಪೂವಕ್ಕೆ 45 ಡಿಗ್ರಿಗಳಷ್ಟುವಾಲಿದೆ. ನಮ್ಮ ಭಾರತದ ಉಪಖಂಡವನ್ನು ಹೊತ್ತಿರುವ ಶಿಲಾಫಲಕ ಬರ್ಮದ ಶಿಲಾ ಫಲಕದಡಿ ನುಗ್ಗಲು ಯತ್ನಿಸಿದೆ. ಇದನ್ನು ಕಣ್ಣಿನಿಂದ ನೋಡಲು ಅಸಾಧ್ಯ. ಹಲವಾರು ಲಕ್ಷ ವರ್ಷಗಳಿಂದ ಸದ್ದಿಲ್ಲದೆ ಈ ಕಾರ್ಯ ನಡೆಯುತ್ತಿದೆ. 2006ರ ಮೇ 6ರಂದು ಮತ್ತೊಮ್ಮೆ ಈ ವಿಚಾರ ಗೋಚರವಾಯಿತು. ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದ ಧಗಧಗ ಉರಿಯುತ್ತಿದ್ದ ಬೂದಿಗಲ್ಲಿನ ಮೋಡವನ್ನು ಆಕಾಶದತ್ತ ಚಿಮ್ಮಿಸಿತ್ತು. ಇದು ಬಸಾಲ್ಟ್‌ ಮತ್ತು ಆಂಡಿಸೈಟ್‌ ಎಂಬ ಅಂಶದ ಲಾವಾರಸವನ್ನು ಚಿಮ್ಮುತ್ತ ಬಂದಿದೆ. ಈ ಜ್ವಾಲಾಮುಖಿ ಪಿಲೀಯನ್‌ ಶೈಲಿಯಲ್ಲಿ ಸ್ಪೋಟಿಸಿತ್ತಿತ್ತು. ಇದು ಹಲವಾರು ರಂಧ್ರಗಳನ್ನು ತೆರೆದುಕೊಂಡಿದೆ. ಇದರ ಸುತ್ತಲೂ ಬರೀ ಹೊಗೆ ಸೂಸುವ ರಚನೆ ಹೊಂದಿದೆ. ಇದರ ಮುಖಾಂತರ ಗಂಧಕದ ಅನಿಲವನ್ನು ಹೊರಹಾಕುತ್ತಿದೆ. ಈ ದ್ವೀಪವನ್ನು ಪ್ರವಾಸ ತಾಣ ಮಾಡಲು ಭಾರತ ಸರ್ಕಾರ ಯೋಜನೆಗಳು ರೂಪಿಸುತ್ತಿದೆ.
ಭಾರತದ ಏಕೈಕ ಜ್ವಾಲಾಮುಖಿ ಮೊದಲು ಅದರೆ ಹಿಂದೆ ಮಧ್ಯ ಭಾರತವು ಜ್ವಾಲಾಮುಖಿಗಳ ಲಾವಾ ಪ್ರವಾಹಕ್ಕೆ ತೆರೆದುಕೊಂಡಿತು. ಭೂ ಚಿಪ್ಪಿನ ತಳದಲ್ಲಿ ಬಿಸಿದಾಣಗಳು ಇವೆ. ಭಾರತ ಹೊತ್ತ ಶಿಲಾಫಲಕ ನಿಧಾನವಾಗಿ ಅದರ ಮೇಲೆ ಉತ್ತರಕ್ಕೆ ಸರಿದಾಗ ನೂರಾರು ಕಿ.ಮೀ. ಛಿದ್ರ ನೆಲದಿಂದ ಸಾಗರೋಪಾದಿಯಲ್ಲಿ ಲಾವಾರಸ ಉಕ್ಕಿ ಬಂತು. ಗುಜರಾತಿನಿಂದ ಪ್ರಾರಂಭಿಸಿ ಪೂರ್ವ ಭಾಗದ ಆಂಧ್ರದವರೆಗೆ ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದ ಬಹು ಭಾಗ ಮತ್ತು ಕರ್ನಾಟಕದ ಗುಲ್ಬಾರ್ಗದ ವರೆಗೆ ಲಾವಾರಸ ಸ್ತರ ರೂಪದಲ್ಲಿ ಪೇರಿಕೆಯಾಯಿತು. ಇಂತಹ ಪ್ರದೇಶ ಸುಮಾರು 50 ಲಕ್ಷ ಚದರ ಸ್ತರಗಳನ್ನು ಒಂದರೆ ಮೇಲೊಂದಿ ಪೇರಿಸಿದರೆ ಸುಮಾರು 1.5 ಕಿ.ಮೀ. ಎತ್ತರದ ಚಪ್ಪಟೆ ಭೂಮಿಯಾದಿತು.  ಇಂದಿನ ದಿನಗಳಲ್ಲಿ ಬಹುಭಾಗ ಸವೆದು ಹೋಗಿದೆ. ಬಹುತೇಕ ಬಸಾಲ್ಟ್‌ ಬಗೆಯ ಶಿಲಾರಸ ಬಿರುಕಿನಿಂದ ಹೊರಹೊಮ್ಮಿದ ಸಲ್ಪಾರ್‌ ಡೈಆಕ್ಸೈಡ್‌ ಇಡೀ ಜಗತ್ತಿನ ವಾಯುಗೋಳದ ಉಷ್ಣತೆಯನ್ನು ಆಗ ಎರಡು ಡಿಗ್ರಿ ಸೆಂ.ಗಳಷ್ಟು ಕಡಿಮೆ ಮಾಡಿತ್ತು ಎಂದು ಸಂಶೋಧನೆಯಿಂದ ದೃಢಪಟ್ಟಿದೆ.
ಉತ್ತರ ಕರ್ನಾಟಕದ ಎರೆ ಮಣ್ಣು ಉಂಟಾಗಿರುವುದು ಬಸಾಲ್ಟ್‌ ಶಿಲೆಯ ಶಿಥಿಲೀಕರಣದಿಂದ. ಮಧ್ಯ ಭಾರತ ಇಂತಹ ಜ್ವಾಲಾಮುಖಿಯ ಪ್ರವಾಹಕ್ಕೆ ತುತ್ತಾಗಿದ್ದು, ಸುಮಾರು 66 ಮಿಲಿಯನ್ನು ವರ್ಷಗಳ ಹಿಂದೆ ಎಂದು ಹೇಳಲು ಸಾಕಷ್ಟು ಭೂವೈಜ್ಞಾನಿಕ ಸಂಶೋಧನೆಗಳು ನಡೆದಿದೆ.

 

ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಕಾರ್ಯದರ್ಶಿ, ಚಿತ್ರದುರ್ಗ ಜಿಲ್ಲಾ ರೆಡ್ಡಿ ಜನ ಸಂಘ (ರಿ.), ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now