Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಡಿಯೂರಪ್ಪ ಲಿಂಗಾಯತ ಅಲ್ಲ.. ಬಳಗಾರ : ಯತ್ನಾಳ್ ಆಕ್ರೋಶ

---Advertisement---

ಹುಬ್ಬಳ್ಳಿ: ನಗರದಲ್ಲಿಂದು ವೀರಶೈವ ಲಿಂಗಾಯತ ಏಕತಾ ಸಮಾವೇಶ ನಡೆದಿದೆ. ಈ ಸಭೆಯಲ್ಲಿ ಭಾಗಿಯಾಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೆ ಯಡಿಯೂರಪ್ಪ ಅವರ ಬಗ್ಗೆ ಮತ್ತೆ ಕಿಡಿಕಾರಿದ್ದಾರೆ. ಇವತ್ತಿನ ಸಭೆಯಲ್ಲಿ ಹಿಂದೂ ಅಂತ ಬರೆಸುವುದಕ್ಕೆ ಒಪ್ಪಿಕೊಂಡರೆ ತಮ್ಮ ನಿರ್ಧಾರ ಏನಿರುತ್ತೆ ಎಂದು ಕೇಳಿದಾಗ, ನಾವೂ ಸ್ವಾಗತ ಮಾಡ್ತೇವೆ. ಹಿಂದೂ ಅಂತ ಬರೆಸಲೇಬೇಕು. ಎಲ್ಲಿ ಹಿಂದೂ ಧರ್ಮವನ್ನು ಅಪಮಾನ ಮಾಡುತ್ತಾರೆ ಅಲ್ಲಿಗೆ ನಾನು ಹೋಗುವುದಿಲ್ಲ ಎಂದಿದ್ದಾರೆ.

ಕೇಸರಿ ಸನಾತನ ಧರ್ಮದ ಸಂಕೇತವಿದೆ. ಇಸ್ಲಾಂ ಮತ್ತು ಲಿಂಗಾಯತರಲ್ಲಿ ಬಹಳಷ್ಟು ಸಾಮ್ಯತೆ ಇದೆ ಅಂತ ಒಬ್ಬ ಬೂಟ್ ಹೇಳ್ತಾನೆ. ಇಲ್ಲೊಬ್ಬ ಇದಾನಲ್ಲ ನಿಜಗುಣನಾನಂದ ಅವ ಹೇಳ್ತಾನೆ. ಹಿಂದೂ ಧರ್ಮ ಅಲ್ಲ ಲಿಂಗಾಯತ. ಲಕ್ಷ್ಮೀ ಪೂಜೆ ಯಾಕೆ ಮಾಡ್ತೀರಿ..? ನೀ ಯಾಕ್ ವಿಭೂತಿ ಹಚ್ಕೊಳ್ತೀಯಪ್ಪ ಸ್ವಾಮೀಜಿ. ಆಕಳ ಸಗಣಿಯಿಂದಾನೇ ಯಾಕೆ ವಿಭೂತಿ ತಯಾರು ಮಾಡ್ಬೇಕು ಅಂತ ಕೇಳ್ತಾನೆ. ಹಾಗಾದ್ರೆ ನಾಯಿ, ಹಂದಿಯದ್ದು ಮಾಡ್ಕೊಂಡು ನೀ ಹಚ್ಕೊ ಅಂತ ಆಕ್ರೋಶ ಹೊರ ಹಾಕಿದ್ದಾರೆ.

ಇದೆ ವೇಳೆ ಯಡಿಯೂರಪ್ಪ ಅವರ ಬಗ್ಗೆ ಮಾತನಾಡಿ, ಯಡಿಯೂರಪ್ಪ ಲಿಂಗಾಯತನೇ ಅಲ್ಲ. ಅದು ವಿಶೇಷ. ಬಳಗಾರರು ಅವರು. ಯಡಿಯೂರಪ್ಪ ಹೇಳಪ್ಪ. ಮಂಡ್ಯ ಸುತ್ತ ಮುತ್ತ ಇದಾರಾ. ಅವ್ರು ಬಂದು ಇಲ್ಲಿ ಲೀಡರ್ ಆಗವ್ರೆ ಪುಕ್ಸಟ್ಟೆ. ಒಮ್ಮೆಯಾದ್ರೂ ಲಿಂಗಾಯತ ಅಲ್ಲ ಅಂದಿದ್ದಕ್ಕೆ ಪ್ರತಿಕ್ರಿಯೆ ಕೊಟ್ಟವ್ರ ಯಡಿಯೂರಪ್ಪ ಆಗ್ಲಿ, ಮಕ್ಕಳಾಗಲಿ. ಲಿಂಗಾಯತರ ಬೀಗತನ ಮಾಡಿಕೊಂಡು ನಾವೂ ಲಿಂಗಾಯತರು ಅಂತ ಹೇಳಿಕೊಳ್ತಾರೆ ಅಷ್ಟೆ ಅಂತ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಯತ್ನಾಳ್ ಹರಿಹಾಯ್ದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...