ಆಸ್ತಿ ವಿಚಾರ ಅಂತ ಬಂದ್ರೆ ಅಣ್ಣ ತಂಗಿ, ಅಕ್ಕ ತಮ್ಮ ಯಾವ ಸಂಬಂಧವೂ ಕೂಲ್ ಆಗಿ ಇರುವುದಿಲ್ಲ. ಕೋರ್ಟ್, ಪೊಲೀಸ್ ಸ್ಟೇಷನ್ ಅಲ್ಲಿವರೆಗೂ ಜನ ಹೋಗ್ತಾರೆ. ಇದೀಗ ಬಿಗ್ ಬಾಸ್ ನ ಮಾಜಿ ಸ್ಪರ್ಧಿ ರಂಜಿತ್ ಆಸ್ತಿ ವಿಚಾರಕ್ಕೇನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ತಂದೆಯ ಪ್ಲ್ಯಾಟ್ ನಲ್ಲಿ ನನಗೂ ಭಾಗ ಬರಬೇಕೆಂದು ರಂಜಿತ್ ಹಾಗೂ ಅಕ್ಕ ಇಬ್ಬರು ಪರಸ್ಪರವಾಗಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ಲ್ಯಾಟ್ ವಿಚಾರ ಬಂದು ಸಿವಿಲ್ ವ್ಯಾಜ್ಯವಾಗಿದೆ. ಹೀಗಾಗಿ ಈ ಸಮಸ್ಯೆಯನ್ನು ಕೋರ್ಟ್ ಮೂಲಕವೇ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದೆ. ದೂರಿನ ಆಧಾರದ ಮೇಲೆ ಎನ್ ಸಿ ಆರ್ ದಾಖಲು ಮಾಡಿಕೊಂಡು ಕಳುಹಿಸಿದೆ.
ಇನ್ನು ಈ ಹಿಂದೆಲ್ಲ ಇಡೀ ಕುಟುಂಬ ಒಂದೇ ಪ್ಲ್ಯಾಟ್ ನಲ್ಲಿ ವಾಸ ಮಾಡ್ತಾ ಇತ್ತು. ಆದ್ರೆ ಈಗ ಅಕ್ಕ ಬೇರೆ ಹೋಗಿದ್ದಾರೆ. ಆದ್ರೆ ನನಗೂ ಅದರಲ್ಲಿ ಭಾಗ ಬೇಕು ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪೊಲೀಸರು ಇಬ್ಬರಿಗೂ ಬುದ್ಧಿ ಹೇಳಿ ಕಳುಹಿಸಿದ್ದಾರೆ. ಇದರ ನಡುವೆ ರಂಜಿತ್ ಬಾವ ನೀಡಿರುವ ದೂರಿನಲ್ಲಿ, 2018ರಿಂದಲೂ ನಾನು ನನ್ನ ಹೆಂಡತಿ ಮತ್ತು ಮಗಳೊಂದಿಗೆ ಆ ಪ್ಲ್ಯಾಟ್ ನಲ್ಲಿಯೇ ವಾಸಿಸುತ್ತಿರುತ್ತೇನೆ. ನಂತರ 2025ರ ಜುಲೈ ತಿಂಗಳಿನಿಂದ ನನ್ನ ಬಾಮೈದನಾದ ರಂಜಿತ್ ನಮ್ಮ ಜೊತೆ ವಾಸಿಸುತ್ತಿದ್ದು, ಈಗ ಆತ ಮನೆ ನನಗೆ ಸೇರಿದೆ ಅಂತಿದ್ದಾರೆ. ಅಷ್ಟೇ ಅಲ್ಲ ನನ್ನ ಕುಟುಂಬದವರುಗೆ ಅವಾಚ್ಯ ಶಬ್ಧಗಳಿಂದ ಬೈದು ನಿಂದಿಸಿದ್ದಾನೆ. ಅಲ್ಲದೇ ಮನೆ ಬಿಡಲಿಲ್ಲ ಅಂದ್ರೆ ನಿಮ್ಮನ್ನ ಸುಮ್ಮನೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










