ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 18 : ಇದೇ ಸೆಪ್ಟೆಂಬರ್ 13 ರಂದು ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಗೆ 6 ಲಕ್ಷ ಜನ ಸೇರಿ ಬಹಳ ಅದ್ಭುತವಾಗಿ ಯಶಸ್ವಿಯಾಗಿದೆ. ಆದರೆ ಶೋಭಾಯಾತ್ರೆ ವೇಳೆ ಡಿಜೆ ಬಳಕೆ ಮಾಡಿದ ಡಿಜೆ ಮಾಲೀಕರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿರುವುದು ಎಷ್ಟು ಸರಿ ? ಎಂದು
ಶ್ರೀರಾಮ ಸೇನೆಯ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.

ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇದಕ್ಕೆ ಕಾರಣವನ್ನು ಕೇಳಿದರೆ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ಡಿಜೆ ಬಳಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ ಮುಸ್ಲಿಂರು ದಿನಕ್ಕೆ 5 ಬಾರಿ ನಮಾಜ್ ಮಾಡುವಾಗ ಅವರು ಬಳಸುವ ಧ್ವನಿವರ್ಧಕದ ಡೆಸಿಬೆಲ್ ಎಷ್ಟು ಅಂತ ಗೊತ್ತಾ ? ಅವರ ಮೇಲೆ ಯಾಕೆ ಕೇಸ್ ಹಾಕಿಲ್ಲ ? ಅವರುಗಳು ಅನುಮತಿ ತೆಗೆದುಕೊಂಡಿದ್ದಾರ ? ಎಂದು ಪ್ರಶ್ನಿಸಿದ ಅವರು, ಸುಪ್ರೀಂ ಕೋರ್ಟ್ ಕೇವಲ ಹಿಂದೂಗಳಿಗೆ ಮಾತ್ರ ಆದೇಶ ಮಾಡಿದೆಯಾ ? ಹಿಂದೂಗಳು ಮಾತ್ರ ಆದೇಶವನ್ನು ಉಲ್ಲಂಘನೆ ಮಾಡುತ್ತಿದ್ದೇವಾ ಹೇಳಿ ಎಂದು ಕಿಡಿಕಾರಿ, ಡಿಜೆ ವಿಚಾರವಾಗಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣವನ್ನು ಕೂಡಲೇ ಕೈಬಿಡಬೇಕು ಇಲ್ಲದೆ ಹೋದರೆ ಇದೇ ವಿಚಾರವಾಗಿ ಇಡೀ ಹಿಂದೂ ಸಮಾಜದಿಂದ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.









