Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಶ್ವಕರ್ಮರು ಎಲ್ಲಾ ಸಮುದಾಯಗಳಿಗೆ ಮಾದರಿ : ಶಾಸಕ ಟಿ.ರಘುಮೂರ್ತಿ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 17 : ವಿಶ್ವಕರ್ಮರು ಪುರಾತನ ಹಿಂದೂ ಧರ್ಮದ ಸಂಸ್ಕೃತಿ ಅಡಿಯಲ್ಲಿ ಬಂದಂತಹ ಸಮುದಾಯ ವಾಗಿದ್ದು, ಈ ಸಮುದಾಯವು ತಮ್ಮ ಕಾಯಕದ ಪಂಚ ಕಸುಬುಗಳಾದ ಚಿನ್ನ- ಬೆಳ್ಳಿ- ಮರ ಕೆಲಸ, ಹಿತ್ತಾಳೆ -ಕಂಚು -ಕಬ್ಬಿಣ ಸೇರಿದಂತೆ ಅಸ್ತ್ರಗಳು ಸಹ ಮಾಡಿ ಎಲ್ಲ ಸಮುದಾಯಗಳಿಗೆ ಮಾದರಿಯಾಗಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

ಚಳ್ಳಕೆರೆ ನಗರದ ತಾಲೂಕು ಕಚೇರಿ ಹಾಗೂ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ 48ನೇ ವರ್ಷದ ಶ್ರೀ ಭಗವಾನ್ ವಿಶ್ವಕರ್ಮ ಜಯಂತೋತ್ಸದಲ್ಲಿ ಮಹನೀಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ವಿಶ್ವಕರ್ಮ ಸಮುದಾಯ ವಾಸ್ತು ಶಿಲ್ಪದಲ್ಲಿ ತಮ್ಮದೇ ಆದ ಚಾಕಚಕ್ಯತೆ ಮೂಡಿಸಿದ್ದಾರೆ. ಈ ಹಿನ್ನಲೆ ಇಂತಹ ಸಮುದಾಯಗಳಿಗೆ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಬಲವರ್ಧನೆ ಗೊಂಡಿಲ್ಲ. ತಮ್ಮ ನೆಲಗಟ್ಟಿನ ಜೀವನ ಸಂಸ್ಕೃತಿಯನ್ನು ಕಲೆಗಾಗಿ ಮೀಸಲಿಟ್ಟ ಸಮುದಾಯವಾಗಿದ್ದು ಇಂತಹ ಸಮುದಾಯಕ್ಕೆ ಸರ್ಕಾರದಿಂದ ಹೆಚ್ಚಿನ ರೀತಿಯ ಸೌಲಭ್ಯ ಸಿಗಬೇಕು. ಈ ಸಮುದಾಯದ ಪೋಷಕರು ಹೆಚ್ಚು ಹೆಚ್ಚು ವಿದ್ಯಾಭ್ಯಾಸವನ್ನು ಕಲಿಸಬೇಕು ಶಿಕ್ಷಣ ಒಂದೇ ಗುರಿ ಸಾಧನೆಗೆ ದಾರಿಯಾಗಿದೆ. ಇಂತಹ ಪ್ರತಿಭಾ ಪುರಸ್ಕಾರಗಳನ್ನು ಮಾಡುವುದರ ಮೂಲಕ ಮಕ್ಕಳಿಗೆ ಸ್ಪೂರ್ತಿ ತುಂಬಬೇಕಿದೆ ಎಂದರು.

ನಗರಸಭೆ ಅಧ್ಯಕ್ಷ ಶಿಲ್ಪ ಮುರಳಿ ಮಾತನಾಡಿ. ಸಮುದಾಯದ ಪೋಷಕರು ತನ್ನ ಕಸುವಿನ ಜೊತೆಗೆ ಮಕ್ಕಳಿಗೆ ಹೆಚ್ಚು ಹೆಚ್ಚು ಶಿಕ್ಷಣ ನೀಡಬೇಕು, ಹೆಚ್ಚು ಶಿಕ್ಷಣವಂತರಾಗಿ ಕಸುವಿನ ಕೆಲಸದ ಜೊತೆಗೆ ಸರ್ಕಾರಿ ಕೆಲಸಗಳನ್ನು ಕೂಡ ಮಾಡಿ ಉತ್ತಮ ಜೀವನಮಟ್ಟ ಕಂಡುಕೊಳ್ಳಬಹುದು ಎಂದರು. ಜೆಡಿಎಸ್ ಮುಖಂಡ ಎಂ.ರವೀಶ್ ಮಾತನಾಡಿ ವಿಶ್ವಕರ್ಮ ಸಮುದಾಯಕ್ಕೆ ರಾಜಕೀಯದಲ್ಲಿ ಪ್ರಾತಿನಿತ್ಯ ನೀಡಬೇಕು. ಸಮುದಾಯದಿಂದ ಶಾಸಕರು ಸಚಿವರು ಆದರೆ ಸಮುದಾಯವನ್ನ ಮುಖ್ಯ ಭೂಮಿಗೆ ತರಲು ಸಹಕಾರಿಯಾಗುತ್ತದೆ ಎಂದರು.

ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕೆ ಟಿ ಕುಮಾರಸ್ವಾಮಿ ಮಾತನಾಡಿ. ಇತ್ತೀಚಿನ ದಿನಗಳಲ್ಲಿ ಬಂಗಾರದ ಬೆಲೆ ಹೆಚ್ಚಳವಾಗಿದ್ದು ಬಂಗಾರದ ಒಡವೆಗಳನ್ನು ತಯಾರು ಮಾಡುವಂತಹ ಸಮುದಾಯ ತುಂಬಾ ಸಂಕಷ್ಟಕ್ಕೆ ಸಿಲುಕಿದೆ ಇಂತಹ ಸಮಯದಲ್ಲಿ ಸರ್ಕಾರ ಇಂಥವರ ನೆರವಿಗೆ ಬರಬೇಕಿದೆ ಎಂದರು.. ಕಾರ್ಯಕ್ರಮದಲ್ಲಿ ಭರತನಾಟ್ಯ ಕಲಾವಿದೆ ಯಶಶ್ವಿನಿ ಕೆ ವಿ ಆಚಾರ್, ತಮ್ಮ ಭರತನಾಟ್ಯದಿಂದ ಸಭೆಯ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಕವಿತಾ ಸದಸ್ಯರಾದ ಸುಮ ಭರಮಯ್ಯ, ಕವಿತಾ ಬೋರಯ್ಯ, ತಹಶೀಲ್ದಾರ್ ರೇಹಾನ್ ಪಾಷ. ನಗರಸಭೆ ಪೌರಾಯುಕ್ತ ಜಗ್ಗಾರೆಡ್ಡಿ, ಪ್ರಸನ್ನ ಕುಮಾರ್. ಜಯ ವೀರಾಚಾರ್, ಯುವಕ ಸಂಘದ ಅಧ್ಯಕ್ಷ ವೆಂಕಟೇಶ್, ಮಹಿಳೆಯರಾದ ಶಿಕ್ಷಣ ಸಂಸ್ಥೆಯ ಶ್ರೀನಿವಾಸ್ ಸರಸ್ವತಮ್ಮ.ಶಿಕ್ಷಕಿಯೋಗೇಶ್ವರಿ. ಸುಜಾತ, ಜಯ ವೀರಾಚಾರ್ ಸೇರಿದಂತೆ ವಿಶ್ವಕರ್ಮ ಭಾಂದವರು ಇದ್ದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now