ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣವೊಂದೇ ಹೆದ್ದಾರಿ : ಎಂ.ರವಿಕುಮಾರ್

2 Min Read

ವರದಿ ಮತ್ತು ಫೋಟೋ ಕೃಪೆ
ಹೆಚ್. ಮಹಾಂತೇಶ್, ರಾಯಾಪುರ, ಮೊಳಕಾಲ್ಮೂರು.
ಮೊ : 93806 27082

ಸುದ್ದಿಒನ್, ಮೊಳಕಾಲ್ಮುರು, ಸೆಪ್ಟೆಂಬರ್. 15 : ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶಿಕ್ಷಣವೊಂದೇ ಹೆದ್ದಾರಿ, ಶಿಕ್ಷಣದಿಂದ ಎಲ್ಲವನ್ನೂ ಪಡೆಯಬಹುದಾಗಿದ್ದು, ಶಿಕ್ಷಣ ಕ್ಷೇತ್ರವನ್ನು ಗಟ್ಟಿಗೊಳಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎಂ.ರವಿಕುಮಾರ್ ತಿಳಿಸಿದರು.

ಪಟ್ಟಣದ ಬಿಇಒ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆಗಳ ಆಶ್ರಯದಲ್ಲಿ ಸಂಸದರು, ಸ್ಥಳೀಯ ಶಾಸಕರು, ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಏರ್ಪಡಿಸಿದ್ದ ಬಾಲಕಿಯರ ಸರಕಾರಿ ಪ್ರೌಢಶಾಲಾ ಹೆಚ್ಚುವರಿ ಕೊಠಡಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ಪರ್ಧಾತ್ಮಕದ ಈ ಕಾಲದಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ. ಗಡಿಭಾಗದ ಶಾಲೆಗಳ ಆಧುನೀಕರಣ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಶಾಸಕರನ್ನೂ ಒಳಗೊಂಡಂತೆ ಐದು ಜನ ವಿಧಾನಪರಿಷತ್ ಸದಸ್ಯರ ಅನುದಾನವನ್ನು ಒಗ್ಗೂಡಿಸಿ 1.50 ಕೋಟಿ ರೂ. ವೆಚ್ಚದಲ್ಲಿ ಮಾದರಿ ಶಾಲಾ ಕಟ್ಟಡ ನಿರ್ಮಿಸಲಾಗುವುದು ಎಂದರು.

ಶಿಕ್ಷಣ ಇಲಾಖೆಯ ಜೊತೆಯಲ್ಲಿ ಸಮುದಾಯದವರು ಸಹಕಾರ ನೀಡಿದಲ್ಲಿ ಮತ್ತಷ್ಟು ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವಿದೆ. ಈ ಸಂಬಂಧ ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಮಕ್ಕಳ ಶೈಕ್ಷಣಿಕಾಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಎಂಎಲ್‌ಸಿ ಕೆ.ಎಸ್.ನವೀನ್ ಮಾತನಾಡಿ, ಖಾಸಗಿ ಶಾಲೆಗಳಿಗೆ ಸ್ಪರ್ಧೆ ನೀಡುವ ಮಟ್ಟದಲ್ಲಿ ಸರಕಾರಿ ಶಾಲೆಗಳಲ್ಲಿ ಸೌಲಭ್ಯ, ಬೋಧನೆ ಒದಗಿಸಲು ಶ್ರಮಿಸಲಾಗುತ್ತಿದೆ. ಹಿಂದುಳಿದ ಪ್ರದೇಶಗಳಲ್ಲಿನ ಮಕ್ಕಳ ಶೈಕ್ಷಣಿಕಾಭಿವೃದ್ಧಿಗೆ ಹೆಚ್ಚು ಆಧ್ಯತೆ ನೀಡಲಾಗುತ್ತಿದ್ದು, ಇದನ್ನು ಪೋಷಕರು, ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಸಭೆಯಲ್ಲಿ ಎಂಎಲ್‌ಸಿ ಡಿ.ಟಿ.ಶ್ರೀನಿವಾಸ್, ಕೇಶವ್ ಪ್ರಸಾದ್,ರಾಜ್ಯ ದಾಕ್ಷಿರಸ ಮಂಡಳಿ ಹಾಗೂ ವೈನ್ ಬೋರ್ಡ್ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು ಮಾತನಾಡಿದರು.

ಸಭೆಯಲ್ಲಿ ಪ.ಪಂ ಅಧ್ಯಕ್ಷೆ ಲೀಲಾವತಿ,ಉಪಾಧ್ಯಕ್ಷ ತಿಪ್ಪೇಸ್ವಾಮಿ,ಬಿಇಒ ಇ.ನಿರ್ಮಲಾದೇವಿ, ಪಪಂ ಉಪಾಧ್ಯಕ್ಷ ಕೆ.ತಿಪ್ಪೇಸ್ವಾಮಿ, ಬಿಜೆಪಿ ಮಂಡಲಾಧ್ಯಕ್ಷರಾದ ಕೆ.ಟಿ.ಶ್ರೀರಾಮರೆಡ್ಡಿ, ಮಲ್ಲೇಶ್, ಮಾಜಿ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ್, ಪ.ಪಂ ಸದಸ್ಯರಾದ ಪಿ. ಲಕ್ಷ್ಮಣ್, ಎನ್ ಮಂಜಣ್ಣ, ರೂಪ ವಿನಯ್,ಶುಭ ಪೃತ್ವಿರಾಜ್, ಸವಿತಾ ಅರ್ಜುನ್,ಎಸ್ ಡಿಎಂಸಿ ಅಧ್ಯಕ್ಷ ಕೆಳಗಳಹಟ್ಟಿ ಸಿದ್ದು,ಮುಖಂಡರಾದ ಡಿಎಂ ಈಶ್ವರಪ್ಪ, ವೆಂಕಟೇಶ್, ಮೊಹಮ್ಮದ್ ಖಾಸಿಂ ಟಿ.ಕೆ, ವಿನಯ್, ಪೃಥ್ವಿರಾಜ್, ಆರ್.ರಾಮರೆಡ್ಡಿ, ಕಿರಣ್ ಗಾಯಕ್ವಾಡ್, ಪ್ರಭಾಕರ್,ಎಂಎಸ್ ನಾಗರಾಜ್,ಹೇಮಂತ್, ಇದ್ದರು.

Share This Article
Enable Notifications OK No thanks