ಬೆಂಗಳೂರು: ಇವತ್ತು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಕಂಠೀರವ ಸ್ಟೇಡಿಯಂನಿಂದ ವಿಧಾನಸೌಧದವರೆಗೆ ನಡೆದ ಬೈಕ್ ಜಾಥಾ ಹಲವಾರು ಕಾರಣಗಳಿಂದಾಗಿ ಎಲ್ಲರ ಗಮನ ಸೆಳೆದಿದೆ.
ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ತಾವು ಕಾಲೇಜು ದಿನಗಳಲ್ಲಿ ಓಡಿಸುತ್ತಿದ್ದ ಯಜ್ಡಿ ಬೈಕ್ ಓಡಿಸಿ ಮತ್ತೊಮ್ಮೆ ಇಡೀ ರಾಜ್ಯಾದ್ಯಂತ ಸುದ್ದಿಯಾಗಿದ್ದಾರೆ. ಅದೇ ರೀತಿ ಇವತ್ತು ಶಾಂತಿನಗರ ಶಾಸಕರು, ಬಿಡಿಎ ಅಧ್ಯಕ್ಷರಾದ ಎನ್.ಎ. ಹ್ಯಾರಿಸ್ ಅವರು ಓಡಿಸಿದ ಬೈಕ್ ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.
ಹ್ಯಾರಿಸ್ ಅವರು ಓಡಿಸಿದ ಬೈಕ್ ನೋಡಿದ ಮೇಲೆ ನೆಟ್ಟಿಗರು ಅದರ ಬೆಲೆ ಎಷ್ಟು ಎಂದು ಅಂತರ್ಜಾಲದಲ್ಲಿ ಹುಡುಕುತ್ತಿದ್ದಾರೆ. ಅಂದಹಾಗೆ ಇವತ್ತು ರ್ಯಾಲಿಯಲ್ಲಿ ಓಡಿಸಿದ ಎಲ್ಲಾ ಬೈಕ್‌ಗಳಿಗಿಂತ ಹ್ಯಾರಿಸ್ ಅವರು ಓಡಿಸಿದ ಬೈಕ್, ತುಂಬಾನೆ ಎಕ್ಸ್‌ಪೆನ್ಸಿವ್ ಅಂತೆ.
ಅಂತರ್ಜಾಲದಲ್ಲಿ ನಮಗೆ ಸಿಕ್ಕ ಮಾಹಿತಿಯ ಪ್ರಕಾರ ಹ್ಯಾರಿಸ್ ಅವರು ಓಡಿಸಿದ ಹಾರ್ಲೆ ಡೇವಿಡ್‌ಸನ್ ಫ್ಯಾಟ್ ಬಾಯ್ ಬೈಕ್‌ನ ಮಾರುಕಟ್ಟೆ ಬೆಲೆ 31 ಲಕ್ಷ ರೂಪಾಯಿಗೂ ಹೆಚ್ಚಿದೆ. ಬೈಕ್ ಓಡಿಸಿದ ಫೋಟೊವನ್ನು ಹ್ಯಾರಿಸ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಸಾಕಷ್ಟು ಜನ ತುಂಬಾನೇ ಹ್ಯಾಂಡ್‌ಸಮ್ ಆಗಿ ಕಾಣ್ತಿದ್ದೀರಾ ಎಂದು ಕಮೆಂಟ್ ಮಡ್ತಿದ್ದಾರೆ.
https://www.facebook.com/share/p/1aXjwZmGK7/






