ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಸೆ. 14 : ನಗರದಲ್ಲಿ ನಿನ್ನೆ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆದಿದ್ದು ಇದರಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮೆರವಣಿಗೆಯನ್ನು ನಡೆಸಿ ಹಿಂದೂ ಮಹಾ ಗಣಪತಿಯನ್ನು ಚಂದ್ರವಳ್ಳಿ ನಿರ್ಮಿಸಲಾದ ಭಾವಿಯಲ್ಲಿ ವಿಸರ್ಜನೆ ಮಾಡಲಾಯಿತು.
ಈ ಶೋಭಾಯಾತ್ರೆ ಸಂದರ್ಭದಲ್ಲಿ ಭಕ್ತಾಧಿಗಳು ಅಭಿಮಾನಿಗಳು ಆಗಮಿಸಿದ್ದರು. ನಗರದ ಮುಖ್ಯ ರಸ್ತೆಯಲ್ಲಿ ಭಕ್ತರಿಗೆ ಪ್ರಸಾದ, ಮಜ್ಜಿಗೆ ನೀರು ವಿತರಿಸಲಾಗಿತ್ತು. ಅಲ್ಲದೇ ಐಸ್ ಕ್ರೀಂ, ನೀರಿನ ಬಾಟಲಿಗಳು ಸೇರಿದಂತೆ ವಿವುಧ ಬಗೆಯ ತಿಂಡಿ ತಿನಿಸುಗಳು ಮಾರಾಟವಾಗಿದ್ದವು. ಇವೆಲ್ಲವುಗಳ ತ್ಯಾಜ್ಯದ ಜೊತೆಗೆ ಚಪ್ಪಲಿ, ಬೂಟುಗಳಂತಹ ಇತರೆ ತ್ಯಾಜ್ಯಗಳು ರಸ್ತೆ ತುಂಬಾ ಚಲ್ಲಾಪಿಲ್ಲಿಯಾಗಿದ್ದವು. ಅವರಿಂದ ಕಸದ ರಾಶಿ ನಗರದ ಬಿ.ಡಿ.ರಸ್ತೆಯಲ್ಲಿ ಹರಡಿತ್ತು. ಆ ಕಸವನ್ನು ನೋಡಿದರೆ. ಇಷ್ಟೊಂದು ಕಸವನ್ನು ಸ್ವಚ್ಚ ಮಾಡಲು ಎಷ್ಟು ದಿನ ಬೇಕಾಗುತ್ತದೋ ಎಂದು ಅನಿಸಿತ್ತು.
ಆದರೆ ಇಂದು ಬೆಳಗಿನ ಜಾವ ಸುಮಾರು 4 ಗಂಟೆಗೆ ರಸ್ತೆಗಿಳಿದ ನಗರಸಭೆಯ ಪೌರ ಕಾರ್ಮಿಕರು ನೌಕರರು ಸ್ವಚ್ಚ ಮಾಡುವ ಕಾರ್ಯವನ್ನು ಸುಮಾರು 5 ರಿಂದ 6 ಗಂಟೆಗಳ ಕಾಲ ಸ್ವಚ್ಚತಾ ಕಾರ್ಯವನ್ನು ಮಾಡಿ ಮುಗಿಸಿದರು.
ಇಂದು ನಡೆದ ಸ್ವಚ್ಚತಾ ಕಾರ್ಯದಲ್ಲಿ ನಗರಸಭೆಯ ಸಿಬ್ಬಂದಿಯ ಜೊತೆಗೆ ರಾಜ್ಯ ಬಿಜೆಪಿ ಎಸ್.ಸಿ. ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಉಮೇಶ್ ಕಾರಜೋಳ, ಆದರ್ಶ, ವಿಶ್ವನಾಥ್, ಲೋಹಿತ್ ಸಿದ್ದೇಶ್ ರವರು ಕೈ ಜೋಡಿಸುವುದರ ಮೂಲಕ ಕಸದ ರಾಶಿಯನ್ನು ವಿಲೇವಾರಿ ಮಾಡಲು ಸಹಾಯವನ್ನು ಮಾಡಿದ್ದಾರೆ. ಜಿಲ್ಲಾ ಸಚಿವರು ಈ ಕಸದ ರಾಶಿಯನ್ನು ತೆಗೆಯಲು ಸುಮಾರು 10 ರಿಂದ 15 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದರು. ಆದರೆ ನಮ್ಮ ಪೌರ ಕಾರ್ಮಿಕರು ಕೇವಲ 5 ರಿಂದ 6 ಗಂಟೆಯ ಒಳಗೆ ಪೂರ್ಣವಾಗಿ ಸ್ವಚ್ಚ ಮಾಡಿದ್ದಾರೆ ಎಂದರು.
















