Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹಾಸನಕ್ಕೆ ದೇವೇಗೌಡ್ರ ಭೇಟಿ : ಗೋಕುಲ್ ತಂಗಿಯನ್ನು ಓದಿಸುವ ಭರವಸೆ

---Advertisement---

ಹಾಸನ : ಗಣೇಶೋತ್ಸವದ ಸಂಭ್ರಮದಲ್ಲಿ ಟ್ರಕ್ ಚಕ್ರ ಹರಿದು ಸಾವನ್ನಪ್ಪಿದವರಲ್ಲಿ ಹಾಸನದ ಗೋಕುಲ್ ಕೂಡ ಒಬ್ಬರು. ಮನೆಯಲ್ಲಿ ಕೂಲಿ ನಾಲಿ ಮಾಡಿ ಮಕ್ಕಳನ್ನ ಓದಿಸುತ್ತಿದ್ದರು. ಆದರೆ ಈಗ ಮಗನೇ ಇಲ್ಲದಂತಾಗಿದ್ದಾನೆ. ಇಂದು ದೇವೇಗೌಡ ಅವರು ತಮ್ಮ ಈ ಇಳಿವಯಸ್ಸಿನಲ್ಲೂ ಹಾಸನಕ್ಕೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಈ ವೇಳೆ ಗೋಕುಲ್ ತಾಯಿ ಕಣ್ಣೀರು ಹಾಕಿದ್ದಾರೆ.

ಗೋಕುಲ್ ತಾಯಿಗೆ ದೇವೇಗೌಡರು ಸಮಾಧಾನ ಹೇಳಿದ್ದು, ಅವರ ಮಗಳು ಅಂದ್ರೆ ಗೋಕುಲ್ ತಂಗಿಯನ್ನು ಓದಿಸುವ ಸಂಪೂರ್ಣ ಜವಾಬ್ದಾರಿ ನಮಗೆ ಬಿಡಿ. ಅವಳು ಎಷ್ಟು ಓದುತ್ತಾಳೋ ಅದರ ಆರ್ಥಿಕ ಜವಾಬ್ದಾರಿ ನಮ್ಮದು. ಕೇವಲ 10 ಗುಂಟೆ ಜಾಗದಲ್ಲಿ ಏನು ಮಾಡುವುದಕ್ಕೆ ಆಗುತ್ತೆ. ಪರಿಹಾರದ ಹಣವನ್ನ ಡೆಪಾಸಿಟ್ ಇಟ್ಟುಕೊಳ್ಳಿ ಎಂದು ಧೈರ್ಯ ಹೇಳಿದ್ದಾರೆ.

ಕುಟುಂಬಕ್ಕೆ ಸಾಂತ್ವಾನ ಹೇಳಿದ ಬಳಿಕ ಮಾತನಾಡಿದ ದೇವೇಗೌಡ ಅವರು, ಪಕ್ಷದ ವತಿಯಿಂದ ಮೃತರ ಕುಟುಂಬಸ್ಥರಿಗೆ ಒಂದು ಲಕ್ಷ ಪರಿಹಾರ ನೀಡ್ತೀನಿ. ದೊಡ್ಡ ಗಾಯಾಳುಗಳಿಗೆ 25 ಸಾವಿರ, ಮಧ್ಯಮ ಗಾಯಾಳುಗಳಿಗೆ 20 ಸಾವಿರ ಹಾಗೂ ಸಣ್ಣಪುಟ್ಟ ಗಾಯಾಳುಗಳಿಗೆ 15 ಸಾವಿರ ಕೊಡುವುದಾಗಿ ತಿಳಿಸಿದ್ದಾರಡ.

ಈಗಾಗಲೇ ಸರ್ಕಾರಕ್ಕೂ ಪರಿಹಾರದ ಮೊತ್ತ ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ. ದೇವೇಗೌಡರ ಮುಂದೆ ತನ್ನ ನೋವು ಹೇಳಿಕೊಂಡು ಗೋಕುಲ್ ತಾಯಿ ಗಾಯತ್ರಿ, ನನ್ನ ಮಗನನ್ನ ಕೂಲಿ ಮಾಡಿ ಓಡಿಸುತ್ತಿದ್ದೆ. ಮೃತ ಈಶ್ವರ ಹಾಗೂ ನನ್ನ ಮಗ ಗೋಕುಲ್ ಯಾವಾಗಲೂ ಜೊತೆಯಾಗಿಯೇ ಇರ್ತಾ ಇದ್ರು. ಈಗ ಸಾವಿನಲ್ಲೂ ಜೊತೆಯಾಗಿದ್ದಾರೆ. ಮಗನನ್ನ ಕಳೆದುಕೊಂಡ ನನಗೆ ಇನ್ಯಾರು ಗತಿ ಎಂದು ನೋವು ಪಟ್ಟಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now