Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಧರ್ಮಸ್ಥಳದಲ್ಲಿ ಏನು ಸಿಕ್ಕಿಲ್ಲ ಅಂತ ಹೇಳಿದವರ್ಯಾರು : ಯೂಟ್ಯೂಬರ್ ಅಭಿಷೇಕ್ ಹೊಸ ಬಾಂಬ್

---Advertisement---

ಹಾಸನ: ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ವಿಡಿಯೋ ಮಾಡಿದವರನ್ನ ಎಸ್ಐಟಿ ವಿಚಾರಣೆ ನಡೆಸುತ್ತಿದೆ. ಚಿನ್ನಯ್ಯನ ಬಗ್ಗೆ, ಸುಜಾತ ಭಟ್ ಬಗ್ಗೆ, ಅಲ್ಲಿನ ಸ್ಥಳದ ಬಗ್ಗೆ ವಿಡಿಯೋ ಮಾಡಿದವರಲ್ಲಿ ಅಭಿಷೇಕ್ ಎಂಬಾತ ಕೂಡ ಒಬ್ಬ. ಇಂದು ಎಸ್ಐಟಿ ವಿಚಾರಣೆ ಬಗ್ಗೆ ಮಾತನಾಡಿದ ಅಭಿಷೇಕ್ ಮಾತನಾಡಿದ್ದಾರೆ. ಸುಜಾತ ಭಟ್ ಅವರನ್ನ ನಾನೇ ಕರೆದುಕೊಂಡು ಬಂದೇ ಎಂಬ ಆರೋಪಗಳಿವೆ. ಆದರೆ ಅದರ ಬಗ್ಗೆ ಹಿಂದಿನದ್ದನ್ನ ನೋಡಿದ್ರೆ ಗೊತ್ತಾಗುತ್ತೆ. ಎಸ್ಐಟಿಗೂ ಹೇಳಿದ್ದೀನಿ. ಅವರ ಮಾತನ್ನ ನಂಬಿ ಮೋಸ ಹೋದೆವು ಅಂತ ಹೇಳಿದ್ದೇನೆ.

ತಿಮರೋಡಿ ಬಗ್ಗೆ ಮಾತನಾಡಿದ ಅಭಿಷೇಕ್, ಮಹೇಶ್ ರೆಡ್ಡಿ ತಿಮರೋಡಿ ಅವರ ಮನೆಯಲ್ಲಿಯೇ ಇದ್ದೆ. ಇಷ್ಟೆಲ್ಲಾ ಮಾಡ್ತಾ ಇದ್ದೀವಿ ಅಂದಾಗ ಬೇರೆಲ್ಲೂ ಸೇಫ್ ಇರಲ್ಲ. ಗ್ರೌಂಡ್ ರಿಪೋರ್ಟ್ ಮಾಡಿದೆ, ಅವರ ಮನೆಯಲ್ಲಿ ಉಳಿದುಕೊಂಡಿದ್ದೆ. ಒಂದೆರಡು ಬಾರಿ ಅಲ್ಲಿ ಉಳಿದುಕೊಂಡಿದ್ದೇನೆ ಎಂದಿದ್ದಾರೆ.

 

ಯೂಟ್ಯೂಬ್ ನಿಂದ ನಾವೇನು ಎಫರ್ಟ್ ಹಾಕಿದೆವು ಅದರಿಂದ ಮಾತ್ರ ನಮಗೆ ಹಣ ಬಂದಿರೋದು. ಅದನ್ನ ಬಿಟ್ಟು ಬೇರೆ ಫಂಡಿಂಗ್ ಬಂದಿದೆ ಅನ್ನೋದಾದ್ರೆ, ಒಂದು ಪೈಸೆ ತಗೊಂಡಿದ್ದೀವಿ ಅನ್ನೋದನ್ನ ಪ್ರೂವ್ ಮಾಡಿಬಿಡಲಿ. ಧರ್ಮಸ್ಥಳದಲ್ಲಿ ಘಟನೆ ನಡೆದರೆ ಏನು ಹೇಳಬಾರದಾ..? ನಾನು ಹೇಳುತ್ತಿಲ್ಲ. ಅದನ್ನ ನೋಡಿದವರು ಬಂದು ಮುಂದೆ ಹೇಳ್ತಾ ಇದ್ದಾರೆ. ಅದನ್ನ ಬಿಟ್ಟು‌ ನಾನೇನು ಹೇಳಿಲ್ಲ. ಸಂಬಂಧ‌ಪಟ್ಟ ವಸ್ತುಗಳನ್ನ ಎಸ್ಐಟಿಗೆ ಕೊಟ್ಟಿದ್ದೀನಿ. ಯೂಟ್ಯೂಬರ್ಸ್ ಕೇಳಿದ ಕೂಡಲೇ ಎಸ್ಐಟಿ ಆಯ್ತಾ..? ಅಲ್ಲಿ ಸಿಗಲಿಲ್ಲ ಅಂತ ಯಾರೂ ಹೇಳಿದ್ರು. ಸಿಕ್ಕಿದ್ರು ಯಾರಾದ್ರೂ ಹೇಳಿದ್ರಾ..? ಇದುವರೆಗೂ ಎಸ್ಐಟಿ ಕಡೆಯಿಂದ ಅಧಿಕೃತವಾಗಿ ಏನು ಮಾಹಿತಿ ಬಂದಿಲ್ಲ. ಅದನ್ನು ಇನ್ನು ತೋರಿಸಿಲ್ಲ ಅಲ್ವಾ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...