ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.10 : ಧ್ವನಿ, ಮಾತು,ಗಂಟಲಿನ ಉಸಿರಾಟದ ವಾಯುಮಾರ್ಗ (ವಾತಾಯನ) ಮತ್ತು ನುಂಗುವಿಕೆಯ ಅಸ್ವಸ್ಥತೆ ಇರುವ ರೋಗಿಗಳಿಗೆ ಸೆಪ್ಟೆಂಬರ್ 14 ರಂದು ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.
ನಗರದ ಖ್ಯಾತ ವೈದ್ಯರಾದ ಡಾ. ಪ್ರಹ್ಲಾದ ಎನ್. ಬಿ., ಇವರ ನೇತೃತ್ವದಲ್ಲಿ ಅನುಭವಿ ತಜ್ಞರ ತಂಡದ ನೆರವಿನೊಂದಿಗೆ
ಕರ್ನಾಟಕ ಕಿವಿ, ಮೂಗು ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ (ರಿ) (KENT & RC) ಮತ್ತು ಕರ್ನಾಟಕ ಪ್ರಗತಿಶೀಲ ವಾಕ್ ಮತ್ತು ಶ್ರವಣ ಸಂಸ್ಥೆ (KASHI) ಇವರ ಸಹಯೋಗದೊಂದಿಗೆ ಸೆಪ್ಟೆಂಬರ್ 14 ರ ಭಾನುವಾರದಂದು
ಧ್ವನಿ, ಮಾತು, ವಾಯುಮಾರ್ಗ(ವಾತಾಯನ) ಮತ್ತು ನುಂಗುವಿಕೆಯ ಸಮಸ್ಯೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಶಿಬಿರವನ್ನು ಸಂಸ್ಥೆಯ ಕಾರ್ಯಕ್ರಮವು 25 ನೇ ವಾರ್ಷಿಕೋತ್ಸದ ಅಂಗವಾಗಿ ಆಯೋಜಿಸಲಾಗಿದೆ.
ಸಮಯ:ಬೆಳಿಗ್ಗೆ 10:00 ಗಂಟೆಯಿಂದ ಮಧಾಹ್ನ 02:00 ಗಂಟೆಯ ವರೆಗೆ ಈ ಶಿಬಿರ ನಡೆಯಲಿದ್ದು, ಶಿಬಿರದಲ್ಲಿ ತಜ್ಞರ ತಪಾಸಣೆ, ಚಿಕಿತ್ಸಾ ಸಲಹೆ ಮತ್ತು ಶಸ್ತ್ರಕ್ರಿಯೆಗಳನ್ನು ಒಂದೇ ಸೂರಿನಡಿ ಒದಗಿಸುವ ಗುರಿಯನ್ನು ಹೊಂದಿದೆ.
ಕೆಳಗಿನ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳು:
· ಧ್ವನಿಯ ಕರ್ಕಶತೆ ಅಥವಾ ಧ್ವನಿಯಲ್ಲಾಗುವ ಬದಲಾವಣೆ
· ಮಾತು ತಡವಾಗುವುದು, ತೊದಲುವಿಕೆ, ಉಗ್ಗುವಿಕೆ, ಅಥವಾ ಉಚ್ಚಾರಣಾ ತೊಂದರೆಗಳು
· ಗಂಟಲಿನ ಉಸಿರಾಟ ಅಥವಾ ವಾಯುಮಾರ್ಗ(ವಾತಾಯನ) ದ ತೊಂದರೆಗಳು
· ನುಂಗಲು ತೊಂದರೆ ಅಥವಾ ನೋವು (Dysphagia)
ಶಿಬಿರದ ಪ್ರಯೋಜನವನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಹಾಗೂ ಹೆಸರನ್ನು ಮುಂಗಡವಾಗಿ ನೊಂದಾಯಿಸಲು ಮೊಬೈಲ್ ಸಂಖ್ಯೆ: 9483519988 ಗೆ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಳಾಸ : ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ರಿ)
ನಂ 29, ಬಸವ ಭವನ, ಧವಳಗಿರಿ ಬಡಾವಣೆ ಭೀಮಸಮುದ್ರ ರಸ್ತೆ, ಚಿತ್ರದುರ್ಗ 577501
ಮೊ : 9483519988
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.




















