Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಚಿವ ಮಧು ಬಂಗಾರಪ್ಪ-ಚಿಂತಕ ದೇವನೂರು ಮಹಾದೇವ ಭೇಟಿ: ಪಠ್ಯಕ್ರಮ, ನೈತಿಕ ಶಿಕ್ಷಣದ ಕುರಿತು ಮಹತ್ವದ ಚರ್ಚೆ

---Advertisement---

ಸುದ್ದಿಒನ್, ಚಿತ್ರದುರ್ಗ, ಮೇ. 24 : ರಾಜ್ಯದ ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಚಿಂತಕರು, ಹೋರಾಟಗಾರರು, ಸಾಹಿತಿಗಳು ಆದ ದೇವನೂರು ಮಹಾದೇವ ಅವರನ್ನ ಮೈಸೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ತಮ್ಮ ಖಾತೆಗೆ ಸಂಬಂಧಿಸಿದ ಬಗೆಗೆ ಚರ್ಚೆ ಮಾಡಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ರುದ್ರಮೂರ್ತಿ ಎಂ.ಜೆ. ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮಹಾದೇವ ಅವರು ಸಹ ಈಗಿನ ವಿದ್ಯಾರ್ಥಿಗಳಿಗೆ ಯಾವ ಯಾವ ವಿಷಯ ಪಠ್ಯದಲ್ಲಿರಬೇಕು ಯಾವುದನ್ನ ಬೋಧಿಸಬೇಕೆಂಬುದು ಸೇರಿದಂತೆ ವಿದ್ಯಾರ್ಥಿಗಳಲ್ಲಿ ನೈತಿಕ ಶಿಕ್ಷಣ ಯಾವ ರೀತಿಯಾಗಿ ನೀಡಬೇಕೆಂದನ್ನು ಹೇಳಿದ್ದಾರೆ. ಇದೊಂದು ರೀತಿಯಲ್ಲಿ ಸಚಿವರ ಖಾತೆಗೆ ಸಂಬಂಧಿಸಿದಂತೆ ಒಳ್ಳೆಯ ಬೆಳವಣಿಗೆಯಾಗಿದೆ.

ಹಿರಿಯರ, ಪರಿಣತರ, ತಜ್ಞರ, ಪ್ರತಿಭಾನ್ವಿತರ ಮಾರ್ಗದರ್ಶನ ಆಯಾ ಇಲಾಖೆ ಮತ್ತು ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ಬೆಳವಣಿಗೆಗೆ ಪೂರಕ ಎನ್ನಬಹುದಾಗಿದೆ. ಅದರಂತೆ ಬೇರೆಯವರು ತಮ್ಮ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಆಯಾ ಕ್ಷೇತ್ರಗಳ ತಜ್ಞರು ಮತ್ತು ಪರಿಣಿತರನ್ನ ಭೇಟಿ ಮಾಡಿ ಸಲಹೆ ಪಡೆಯುವುದು ಆಡಳಿತ ಸುಧಾರಣೆಗೆ ಸಹಕಾರಿಯಾಗಬಹುದು.

ಸಾರ್ವಜನಿಕ ಸೇವೆಯಲ್ಲಿರುವ ಯಾರೇ ಆಗಲಿ ಜನಸಾಮಾನ್ಯರ ಬಳಿಗೆ ಬಂದರೆ ಅದು ಅಭಿವೃದ್ಧಿಗೆ ಪುಷ್ಠಿ ನೀಡುತ್ತದೆ. ಜತೆಗೆ ಸರಳತೆಗೆ ಒತ್ತು ಕೊಟ್ಟಂತಾಗುತ್ತದೆ. ಗಾಂಧೀಜಿಯವರ ಮಹಾಮಂತ್ರ “ಉನ್ನತ ಆಲೋಚನೆ – ಸರಳ ಜೀವನ” (ಹೈ ಥಿಂಕಿಂಗ್; ಸಿಂಪಲ್ ಲಿವಿಂಗ್) ಇದನ್ನ ಅನುಸರಿಸಬೇಕಿದೆ. ಅದರಂತೆ ಬರುವ ಜೂನ್ 5 ರಂದು ನಾವು ವಿಶ್ವ ಪರಿಸರ ದಿನವನ್ನು ನೆಪ ಮಾತ್ರಕ್ಕೆ, ಕೇವಲ ಸಂಕೇತವಾಗಿ ಆಚರಿಸದೆ ಪರಿಸರದ ಮೇಲಾಗುತ್ತಿರುವ ಅನಾಹುತಗಳಿಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಕಾರಣ ಹಿಂದಿಗಿಂತ ಇಂದು ಪರಿಸರದ ವರ ಎನ್ನಬಹುದಾದ ಭೂಮಿ, ನೀರು, ಗಾಳಿ ಒಟ್ಟಿನಲ್ಲಿ ಪಂಚಭೂತ ಎನ್ನುವ ನಿಸರ್ಗದ ಕೊಡುಗೆಗಳನ್ನು ಇನ್ನಿಲ್ಲದಂತೆ ಹಾಳು ಮಾಡುತ್ತಿದ್ದೇವೆ. ಇವು ನಮ್ಮಿಂದ ನಿರ್ಲಕ್ಷಕ್ಕೆ ಒಳಗಾಗಿ ತಿನ್ನುವ ಆಹಾರ ಸೇರಿದಂತೆ ಇತರೆಯವು ಕಲುಷಿತಗೊಳ್ಳುತ್ತಿದ್ದು, ಜೀವರಾಶಿಗೆ ತೊಂದರೆಯಾಗಿದೆ. ಆದ್ದರಿಂದ ಎಲ್ಲರ ಕರ್ತವ್ಯವೂ ಅವರವರ ಪರಿಧಿಯಲ್ಲಿ ಪರಿಸರ ಮಾಲಿನ್ಯವನ್ನು ತಡೆಗಟ್ಟಬೇಕಾದ ಜವಾಬ್ದಾರಿಯಾಗಿದೆ

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now