Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧರ್ಮಸ್ಥಳ ಬುರುಡೆ ಪ್ರಕರಣ : ಎಸ್ಐಟಿಗೆ ಸಾಕ್ಷಿಗಳದ್ದೇ ದೊಡ್ಡ ತಲೆನೋವು..?

---Advertisement---

ದಕ್ಷಿಣ ಕನ್ನಡ: ಧರ್ಮಸ್ಥಳದ ತಲೆಬುರುಡೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ತನಿಖೆ ನಡೆಯುತ್ತಿದೆ. ಬುರುಡೆ ತಂದಿದ್ದೀನಿ, ಹೆಣಗಳನ್ನ ಹೂತಾಕಿದ್ದೀನಿ ಅಂತ ಬಂದ ವ್ಯಕ್ತಿಯ ಹಿಂದೆ ಬಿದ್ದಿತ್ತು ಎಸ್ಐಟಿ. ತೋರಿಸಿದ ಕಡೆಯಲ್ಲೆಲ್ಲಾ ಅಗೆದು ಸಾಕಾದ ಎಸ್ಐಟಿ ಕಡೆಗೆ ಚಿನ್ನಯ್ಯನನ್ನ ಅರೆಸ್ಟ್ ಮಾಡಿದೆ. ಆತನ ಹಿಂದೆ ಇರುವ ಕೈವಾಡ ಯಾವುದು ಅಂತ ಹುಡುಕಾಟ ಶುರು ಮಾಡಿರುವ ಎಸ್ಐಟಿ ಗೆ ಸಾಕ್ಷಿಯ ಕೊರತೆಯಾಗುತ್ತಿದೆ ಎನ್ನಲಾಗಿದೆ.

ಸದ್ಯ ಬುರುಡೆ ಕೇಸಲ್ಲಿ ಚಿನ್ನಯ್ಯ ಲಾಕ್ ಆಗಿದ್ದಾರೆ. ಇದಕ್ಕೆ‌ ಸಂಬಂಧಿಸಿದಂತೆ ಗಿರೀಶ್ ಮಟ್ಟಣ್ಣನವರ್, ಜಯಂತ್, ಯೂಟ್ಯೂಬರ್ಸ್ ಗಳನ್ನೆಲ್ಲಾ ತನಿಖೆ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಪ್ರಬಲ ಸಾಕ್ಷ್ಯಾಧಾರದ ಕೊರತೆ ಇಲ್ಲಿ ಕಾಡುತ್ತಿರುವ ಕಾರಣ, ಇಲ್ಲಿ ಚಿನ್ನಯ್ಯನನ್ನು ಬಿಟ್ಟರೆ ಬೇರೆ ಯಾರನ್ನು ಅರೆಸ್ಟ್ ಮಾಡಲು ಆಗುತ್ತಿಲ್ಲ.

ಮೊಬೈಲ್ ಡೇಟಾ ಮಾತ್ರ ಸದ್ಯಕ್ಕೆ ಸಿಕ್ಕಿರುವ ಸಾಕ್ಷುಯಾಗಿದೆ. ಅನುಮಾನಗೊಂಡವರ ಮೊಬೈಲ್ ಗಳನ್ನ ಎಸ್ಐಟಿ ಅಧಿಕಾರಿಗಳು ರಿಟ್ರೀವ್ ಮಾಡಿದ್ದಾರೆ. ಅದರಲ್ಲೂ ಗಿರೀಶ್ ಮಟ್ಟಣ್ಣನವರ್ ಕಾಲ್ ಲೀಸ್ಟ್ ನೋಡಿದಾಗ ಚಿನ್ನಯ್ಯನೇ ಕಾಲ್ ಮಾಡಿರುವುದು ಬೆಳಕಿಗೆ ಬಂದಿದೆ. ಇಂದು ವಿಚಾರಣೆಗೆ ಕೇರಳದ ಯೂಟ್ಯೂಬರ್ ಮನಾಫ್, ಅಭಿಷೇಕ್, ಜಯಂತ್ ಟಿ, ಗಿರೀಶ್ ಮಟ್ಟಣ್ಣನವರ್, ವಿಠಲ್ ಗೌಡ ಹಾಜರಾಗಿದ್ದರು. ಬಳಿಕ ಮಾತನಾಡಿದ್ದ ಮನಾಫ್, ಎಸ್ಐಟಿ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸತ್ಯ ಹೊರಗಡೆ ಬರುತ್ತೆ. ಸತ್ಯದ ಹೋರಾಟದಲ್ಲಿ ಸುಳ್ಳು ಹಾದಿ ಹಿಡಿಯೋದು ತಪ್ಪು ಎಂದು ಮನಾಫ್ ಹೇಳಿದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸದ್ಯ ಧರ್ಮಸ್ಥಳದ ಬುರುಡೆ ಗ್ಯಾಂಗ್ ವಿರುದ್ಧ ಸಾಕ್ಷಿ ಸಿಗುವುದೇ ಕಷ್ಟಕರವಾಗಿದೆ. ಈಗಲೂ ತನಿಖೆ ನಡೆಯುತ್ತಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now