ಬೆಂಗಳೂರು: ಮೆಡಿಕಲ್ ವಿದ್ಯಾರ್ಥಿಗಳಿಗೆ, ಪೋಷಕರಿಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ ಅವರು ಗುಡ್ ನ್ಯೂಸ್ ನೀಡಿದ್ದಾರೆ. ಮೆಡಿಕಲ್ ಸೀಟುಗಳನ್ನ ಏರಿಕೆ ಮಾಡಿದ್ದಾರೆ. ಕರ್ನಾಟಕದ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ 400 ಸೀಟುಗಳನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ರಾಜ್ಯದ ಕಲಬುರಗಿ, ಬೆಳಗಾವಿ, ಮೈಸೂರು, ಬೆಂಗಳೂರಿ ಹಾಗೂ ವಿಜಯನಗರದ ಮೆಡಿಕಲ್ ಕಾಲೇಜುಗಳಲ್ಲಿ ತಲಾ 50 ಮೆಡಿಕಲ್ ಸೀಟುಗಳನ್ನು ಹೆಚ್ಚುವರಿಯಾಗಿ ಮಾಡಲಾಗಿದೆ. ಈ ಸಂಬಂಧ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.
400 ಹೆಚ್ಚುವರಿ ಸೀಟುಗಳ ಮಾಹಿತಿ ನೀಡಿದ್ದು, ನಾವು 15% ಕೋಟಾ ಕೇಂದ್ರಕ್ಕೆ ಬಿಡಿತ್ತೇವೆ. ಗುಹರಾತ್, ರಾಜಸ್ಥಾನ ಸೇರಿದಂತೆ ಹಕವಾರು ರಾಜ್ಯಗಳಲ್ಲಿ ಶೇಕಡ 15 ಎನ್ಆರ್ಐ ಕೋಟಾ ನೀಡಲಾಗುತ್ತಿದೆ. ಈ 400 ಸೀಟುಗಳಲ್ಲಿ 15% ಎನ್ಆರ್ಐ ಕೋಟಾ ನೀಡುತ್ತೇವೆ. ಇದಕ್ಕೆ 25 ಲಕ್ಷ ಶುಲ್ಕ ಇರುತ್ತದೆ. ಹುಬ್ಬಳ್ಳಿಯ ಕೆಎಲ್ಇ ಸೊಸೈಟಿ ಕಾಲೇಜಿಗೆ 50 ಸೀಟು ಸಹ ಸಿಕ್ಕಿದೆ. 800 ಸೀಟು ಹೆಚ್ಚಳಕ್ಕೆ ನಾವೂ ಮನವಿ ಮಾಡಿದ್ದೇವೆ. ಇದು ಸಹ ಪರಿಶೀಲನೆಯಲ್ಲಿ ಇದೆ. ಹುಬ್ಬಳ್ಳಿಯ ಮೂರು ಸಾವಿರ ಮಠದ ಮೆಡಿಕಲ್ ಕಾಲೇಜಿಗೆ 50 ಸೀಟು ಬಂದಿದೆ. ಒಟ್ಟು 450 ಸೀಟುಗಳು ಕಾಲೇಜಿಗೆ ರಾಜ್ಯಕ್ಕೆ ಬಂದಿರುವುದು ಸಂತಸದ ವಿಚಾರ ಎಂದು ಸಚಿವರು ತಿಳಿಸಿದ್ದಾರೆ.
ಉದ್ಯೋಗ ಮೇಳದ ಬಗ್ಗೆಯೂ ಮಾಹಿತಿ ನೀಡಿದ್ದು, ಮೈಸೂರಿನಲ್ಲಿ ಉದ್ಯೋಗ ಮೇಳ ಮಾಡುತ್ತಿದ್ದೇವೆ. ಉದ್ಯೋಗ ಮೇಳ ವಿಶೇಷವಾಗಿ ಮಾಡುತ್ತಿದ್ದೇವೆ. ದಸರಾ ಬಳಿಕ ಉದ್ಯೋಗ ಮೇಳ ಮಾಡುತ್ತಿದ್ದು, ನೋಂದಣಿ ಕಾರ್ಯ ಆರಂಭ ಆಗುತ್ತದೆ. ನರ್ಸಿಂಗ್ ಕಾನ್ಕ್ಲೇವ್ ಮಾಡುತ್ತಿದ್ದೇವೆ. ಇದು ಅಕ್ಟೋಬರ್ ತಿಂಗಳಲ್ಲಿ ನಡೆಯುತ್ತದೆ ಎಂದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















