ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 03 : ಚಿತ್ರದುರ್ಗ ಸೈನ್ಸ್ ಫೌಂಡೇಶನ್ ವತಿಯಿಂದ ಜಿಲ್ಲೆಯ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅತ್ಯುತ್ತಮ 6 ಜನ ಪ್ರೌಢಶಾಲಾ ಶಿಕ್ಷಕರ ಸಾಧನೆಯನ್ನು ಗುರುತಿಸಿ, ವಿಜ್ಞಾನ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಪ್ರಶಸ್ತಿ ಪುರಸ್ಕೃತರ ಮಾಹಿತಿ ಈ ಕೆಳಕಂಡಂತಿದೆ :
1. ಸಿ.ಹೆಚ್. ಎಂ. ಆಶಾ
ವಿಜ್ಞಾನ ಶಿಕ್ಷಕರು, ಎಸ್.ಸರ್.ಎಸ್.ಹೆರಿಟೇಜ್ ಇಂಗ್ಲೀಷ್ ಮಾಧ್ಯಮ ಶಾಲೆ, ಚಿತ್ರದುರ್ಗ.ತಾ
2.ಸಿ. ವೀರಣ್ಣ, ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಕಲಮರಹಳ್ಳಿ, ಚಳ್ಳಕೆರೆ ತಾ.
3. ಸಿ. ಮುತ್ತುರಾಜ್, ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಆಲೂರು, ಹಿರಿಯೂರು ತಾ.
4.ಬಿ.ಜೆ. ರಂಗನಾಥ, ವಿಜ್ಞಾನ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ನಾಗಸಮುದ್ರ, ಮೊಳಕಾಲ್ಮೂರು ತಾ.
5. ಎಸ್.ಆರ್.ವಸಂತಕುಮಾರ, ವಿಜ್ಞಾನ ಶಿಕ್ಷಕರು, ಶ್ರೀ ರಾಜ ರಾಜೇಶ್ವರಿ ಪ್ರೌಢಶಾಲೆ, ಹಾಗಲಕೆರೆ, ಹೊಸದುರ್ಗ.ತಾ
6. ಎಂ. ಹೆಚ್. ಕುಮಾರಸ್ವಾಮಿ, ವಿಜ್ಞಾನ ಶಿಕ್ಷಕರು, ಸರ್ಕಾರಿ ಪ.ಪೂ.ಕಾಲೇಜು ಪ್ರೌಢಶಾಲಾ ವಿಭಾಗ, ಎನ್.ಜಿ. ಹಳ್ಳಿ, ಹೊಸದುರ್ಗ ತಾ.
ಸೆಪ್ಟೆಂಬರ್ 08 ರಂದು ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ನಡೆಯಲಿರುವ “ಶಿಕ್ಷಕರ ದಿನಾಚರಣೆ” ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಚಿತ್ರದುರ್ಗ ಸೈನ್ಸ್ ಫೌಂಡೇಶನ್ ಕಾರ್ಯದರ್ಶಿ ಶ್ರೀ ಎಚ್.ಎಸ್.ಟಿ.ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















