ಮಂಗಳೂರು: ಧರ್ಮಸ್ಥಳಕ್ಕೆ ಬಂದು ನೂರಾರು ಶವಗಳನ್ನ ಹೂತಾಕಿದ್ದೀನಿ ಅಂತ ಹೇಳಿದ ಚಿನ್ನಯ್ಯ ಈಗ ಆರೋಪಿ ಸ್ಥಾನದಲ್ಲಿ ನಿಂತಿದ್ದಾರೆ. ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬೆಳವಣಿಗೆಯ ನಡುವೆಯೇ ಇನ್ನೊಂದು ಬೆಳವಣಿಗೆ ನಡೆದಿದೆ. ಅದೇನಂದ್ರೆ ಸೌಜನ್ಯ ತಾಯಿ ಕುಸುಮಾವತಿ, ಎಸ್ಐಟಿ ತಂಡವನ್ನ ಭೇಟಿಯಾಗಲು ಹೋಗಿದ್ದಾರೆ. ಆದರೆ ಆ ಭೇಟಿ ಅಷ್ಟು ಸುಲಭವಾಗಿ ಸಿಕ್ಕಿಲ್ಲ.
ಹೌದು, ಇಂದು ಸೌಜನ್ಯ ತಾಯಿ ಕುಸುಮಾವತಿ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದಾರೆ. ಬುರುಡೆ ದೂರುದಾರ ಚಿನ್ನಯ್ಯನ ವಿರುದ್ಧ ದೂರು ನೀಡಲು ಬಂದಿದ್ದರಂತೆ. ಈ ಸಂಬಂಧ ಎಸ್ಐಟಿ ಭೇಟಿಯಾಗಲು ಯತ್ನಿಸಿದ್ದು, ಪೊಲೀಸರು ಆ ಭೇಟಿಯನ್ನ ನಿರಾಕರಣೆ ಮಾಡಿದ್ದಾರೆ. ಬೆಳ್ತಂಗಡಿ ಠಾಣೆಗೆ ಬಂದಂತ ಕುಸುಮಾವತಿಯನ್ನ, ಪೊಲೀಸರು ನಿಲ್ಲಿಸಿದ್ದಾರೆ. ಕಾರಣ ಕೇಳಿದ್ದಕ್ಕೆ ಎಸ್ಐಟಿ ಅಧಿಕಾರಿಗಳನ್ನ ಭೇಟಿ ಮಾಡಬೇಕು ಎಂದಿದ್ದಾರೆ. ಆಗ ಪೊಲೀಸರು ಸುಲಭವಾಗಿ ಅನುಮತಿ ಕೊಟ್ಟಿಲ್ಲ. ಅನುಮತಿ ಪತ್ರವನ್ನ ಕೇಳಿದ್ದಾರೆ. ಅನುಮತಿ ಪತ್ರ ಇಲ್ಲದೆ ಇರುವ ಕಾರಣ ಭೇಟಿಗೆ ಬಿಟ್ಟಿಲ್ಲ.
ನಾನು ಯಾವುದೇ ಅನುಮತಿ ಪತ್ರವನ್ನು ತಂದಿಲ್ಲ ಎಂದು ಕುಸುಮಾವತಿ ಹೇಳಿದ್ದಾರೆ. ಅನುಮತಿ ಪತ್ರ ಇಲ್ಲದೆ ಹೋದರೆ ಭೇಟಿಗೆ ಅವಕಾಶ ನೀಡುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಬಳಿಕ ಅಲ್ಲಿಂದ ಅವರನ್ನು ವಾಪಾಸ್ ಕಳುಹಿಸಿದ್ದಾರೆ. ಕುಸುಮಾವತಿ ಎಸ್ಐಟಿ ಅವರನ್ನು ಭೇಟಿಯಾಗದೆ ಹಾಗೇ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಾಸ್ ಆಗಿದ್ದಾರೆ. ಪೊಲೀಸರು ಅವಕಾಶ ಕೊಡದೆ ಇರುವ ಕಾರಣ, ಮಾಧ್ಯಮದವರ ಪ್ರಶ್ನೆಗಳಿಗೂ ಪ್ರತಿಕ್ರಿಯೆ ನೀಡಿಲ್ಲ.
ಕುಸುಮಾವತಿ ಯಾವ ಕಾರಣಕ್ಕೆ ಎಸ್ಐಟಿ ಅಧಿಕಾರಿಗಳನ್ನ ಭೇಟಿಯಾಗಬೇಕೆಂದು ಬಂದಿದ್ದರು ಎಂಬುದು ನಿಖರವಾಗಿ ತಿಳಿದು ಬಂದಿಲ್ಲ. ಆದರೆ ಚಿನ್ನಯ್ಯನ ವಿರುದ್ಧ ದೂರು ನೀಡಲು ಬಂದಿದ್ದರು ಎನ್ನಲಾಗಿದೆ. ಯೂಟ್ಯೂಬ್ ನಲ್ಲಿ ಸೌಜನ್ಯ ಹತ್ಯೆ ಕೇಸ್ ಗೆ ಸಂಬಂಧಿಸಿದಂತೆ ಕೆಲ ಸ್ಪೋಟಕ ವಿಚಾರಗಳನ್ನು ತಿಳಿದು ಚಿನ್ನಯ್ಯನನ್ನು ಸಾಕ್ಷಿಯಾಗಿ ಪರಿಗಣಿಸುವಂತೆಲ ದೂರು ನೀಡಲು ಬಂದಿದ್ದರು ಎನ್ನಲಾಗಿದೆ.
