Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಜಯಪುರದಲ್ಲಿ ಜಡ್ಜ್ ಮನೆಯಲ್ಲಿಯೇ ಕಳ್ಳತನ : ಒಂದೆರೆಡು ರೂಪಾಯಿ ಅಲ್ಲ ಲಕ್ಷಾಂತರ ರೂಪಾಯಿ ಚಿನ್ನ, ವಜ್ರ, ನಗದು ಕಳ್ಳತನ..!

---Advertisement---

ವಿಜಯಪುರ: ಕಳ್ಳತನ ಮಾಡೋನಿಗೆ ಪೊಲೀಸರ ಮನೆಯಾದರೇನು, ನ್ಯಾಯಾಧೀಶರ ಮನೆಯಾದರೇನು. ಕಳ್ಳತನಕ್ಕೆ ಬಂದಾಗ ಕೈತುಂಬಾ ಸಿಕ್ಕಿದರೆ ಸಾಕು. ವಿಜಯಪುರದಲ್ಲಿ ಜಡ್ಜ್ ಮನೆಯಲ್ಲಿಯೇ ಖದೀಮನೊಬ್ಬ ಕನ್ನ ಹಾಕಿದ್ದಾನೆ. ಅದು ಒಂದೆರಡು ಸಾವಿರ ಅಲ್ಲ ಲಕ್ಷಾಂತರ ರೂಪಾಯಿ ಬೆಲರ ಬಾಳುವ ಚಿನ್ನ, ವಜ್ರ, ನಗದನ್ನು ಕದ್ದಿದ್ದಾರೆ. ಹಾಗಾದ್ರೆ ಆ ಜಡ್ಜ್ ಯಾರು..? ಏನೆಲ್ಲಾ ಕಳ್ಳತನವಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಜಿಲ್ಲಾ ನ್ಯಾಯಾಲಯದ 5ನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಧೀಶ ಸಚಿನ್ ಕೌಶಿಕ್ ಅವರ ಬಾಡಿಗೆ ಮನೆಯಲ್ಲಿ 29 ಲಕ್ಷ ಮೌಲ್ಯದ ಚಿನ್ನಾಭರಣ, ಡೈಮಂಡ್ ಆಭರಣ ಹಾಗೂ 50 ಸಾವಿರ ನಗದನ್ನು ಕಳ್ಳತನ ಮಾಡಲಾಗಿದೆ. ಮುದ್ದೆಬಿಹಾಳ್ 14ನೇ ಕ್ರಾಸ್ ನಲ್ಲಿರುವ ಕೆ.ಹೆಚ್.ಬಿ‌ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಅದೇ ಮನೆಯಲ್ಲಿಯೇ ಇದ್ದ ಒಡವೆ, ಹಣ, ಡೈಮೆಂಡ್ ಆಭರಣವನ್ನೆಲ್ಲ ದೋಚಿ ಕಳ್ಳ ಪರಾರಿಯಾಗಿದ್ದಾನೆ.

ಈ ಕಳ್ಳತನ ಮಾಡುವವರು ತುಂಬಾನೇ ಗಮನ ಹರಿಸುತ್ತಾರೆ. ಪೊಕೀಸರು ಕೂಡ ಜನರಿಗೆ ಸಾಕಷ್ಟು ಬಾರಿ ಎಚ್ಚರಿಕೆ ಕೊಡುತ್ತಾ ಇರುತ್ತಾರೆ. ಎಲ್ಲಾದರೂ ಹೋಗುವಾಗ ಮನೆಯಲ್ಲಿ ವಸ್ತುಗಳ ಕಡೆಗರ ಗಮನವಿರಲಿ ಅಂತ. ಇಲ್ಲಿಯೂ ನ್ಯಾಯಾಧೀಶರ ಕುಟುಂಬವೇ ಯಾಮಾರಿದೆ. ಮನೆಯಲ್ಲಿ ಎಲ್ಲರು ಬಾಗಿಲು ಹಾಕಿಕೊಂಡು ಶಿರಸಿಗೆ ಹೋಗಿದ್ದಾರೆ. ಇದನ್ನ ಗಮನಿಸಿದ ಕಳ್ಳರು ಮನೆಯ ಬೀಗ ಹೊಡೆದು ಕಳ್ಳತನ ಮಾಡಿದ್ದಾರೆ.

ಕಳ್ಳರು ಮುಂಭಾಗದ ಬಾಗಿಲಿನಲ್ಲಿಯೇ ಮನೆಯ ಪ್ರವೇಶ ಮಾಡಿದ್ದಾರೆ. ದೇವರ ಮನೆ ಸೇರಿದಂತೆ ಎಲ್ಲವನ್ನು ಜಾಲಾಡಿದ್ದಾರೆ. ಸಿಕ್ಕಿದ್ದೆಲ್ಲವನ್ನು ದೋಚಿಕೊಂಡು ಹೋಗಿದ್ದಾರೆ. ಸದ್ಯ ವಿಜಯಪುರ ಪೊಲೀಸರು ಸ್ಥಳಕ್ಕೆ ಬಂದು ಶ್ವಾನದಳದೊಂದಿಗೆ ಪರಿಶೀಲನೆ ನಡೆಸುತ್ತಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment