Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮೂರು ನಮ್ಮ ಹೆಮ್ಮೆ : ಲೋಕದೊಳಲು ಶ್ರೀ ದೊಡ್ಡ ಹೊಟ್ಟೆಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದ ಪರಿಚಯ…!

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ಲೋಕದೊಳಲು ಗ್ರಾಮದ ಶ್ರೀದೊಡ್ಡಹೊಟ್ಟೆ ಶ್ರೀ ಲಕ್ಷ್ಮಿ ರಂಗನಾಥಸ್ವಾಮಿ ದೇವಾಲಯವು ಐತಿಹಾಸಿಕ ಪ್ರಮುಖವಾದ ದೇವಾಲಯವಾಗಿದ್ದು, ಸಾವಿರಾರು ಭಕ್ತರು ಈ ದೇವರಿಗೆ ನಡೆದುಕೊಳ್ಳುತ್ತಾರೆ. ಮಹಾವಿಷ್ಣು ವೈಕುಂಠದಿಂದ ಬಂದು ಹತ್ತಿರದ ಲೋಕದೊಳಲು ಬೆಟ್ಟದಲ್ಲಿ ನೆಲೆ ನಿಂತ ಕ್ಷೇತ್ರವೆಂದು ಭಕ್ತರು ನಂಬುತ್ತಾರೆ.

ಪ್ರತಿ ವರ್ಷ ಯುಗಾದಿಯ ನಂತರದ ಹುಣ್ಣಿಮೆಯ ದಿನದಂದು ವೈಭವದ ರಥೋತ್ಸವ ಜರುಗುತ್ತದೆ. ಏಳೂರ ಜಾತ್ರೆ ಎಂದೇ ಇದನ್ನು ಕರೆಯಲಾಗುತ್ತದೆ. ಲೋಕದೊಳಲು ಗ್ರಾಮದ ಪೂರ್ವಕ್ಕೆ ಇರುವ ಬೆಟ್ಟದ ತುದಿಯಲ್ಲಿ ಶ್ರೀ ದೊಡ್ಡ ಹೊಟ್ಟೆ ರಂಗನಾಥ ಸ್ವಾಮಿಯ ಉದ್ಭವ ಮೂರ್ತಿ ದೇವಾಲಯವಿದ್ದು, ಇದನ್ನು ತಲುಪಲು ಬೆಟ್ಟವನ್ನು ಹತ್ತಬೇಕು. ಸಮುದ್ರ ಮಟ್ಟದಿಂದ 3700 ಅಡಿ ಎತ್ತರವಿರುವ ಈ ಸ್ಥಳದಲ್ಲಿ ದೇವಾಲಯ ನಿರ್ಮಿಸಲಾಗಿದೆ.
ದೇವರಗುಡ್ಡ ಸಾಲುಗಳಲ್ಲಿ ಒಂದಾಗಿರುವ ಈ ಸ್ಥಳವು ಅತ್ಯಂತ ಸುಂದರ ಪ್ರದೇಶವಾಗಿದ್ದು ಬೆಟ್ಟದ ಮೇಲ್ಭಾಗದಿಂದ ಸುತ್ತಲಿನ ಹತ್ತಾರು ಕಿಲೋಮೀಟರ್ ದೂರದ ಸುಂದರ ಸ್ಥಳಗಳ ರಮಣೀಯತೆ ಸವಿಯಬಹುದು.
ಮುಂಗಾರು ಹಾಗೂ ಹಿಂಗಾರು ಮಳೆಯ ನಂತರ ಈ ಬೆಟ್ಟಸಾಲುಗಳು ಹಸಿರಿನಿಂದ ಮೈ ತುಂಬಿಕೊಂಡು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತವೆ.
ಮಲೆನಾಡಿನ ಯಾವುದೋ ಒಂದು ಊರಿನಂತೆ ಕಂಗೊಳಿಸುತ್ತದೆ.

ಬೆಟ್ಟದ ಕೆಳಭಾಗದಲ್ಲಿ ಪಾಳೆಗಾರರ ಕಾಲದಲ್ಲಿ ನಿರ್ಮಾಣ ಮಾಡಲಾದ ಆಂಜನೇಯ ಸ್ವಾಮಿಯ ದೇವಾಲಯವಿದೆ. ಅದರ ಹತ್ತಿರದಲ್ಲಿಯೇ ಭಕ್ತರು ದೊಡ್ಡಡೆ ಸೇವೆ ಹಾಗೂ ಪ್ರತಿ ಶನಿವಾರದಂದು ವಿಶೇಷ ಪೂಜೆ ಪ್ರಾರ್ಥನೆ ಅನ್ನದಾಸೋಹ ನಡೆಸುತ್ತಾರೆ. ಬೆಟ್ಟದ ಕೆಳಭಾಗದಲ್ಲಿ ವಿಶಾಲವಾದ ಜಾಗವಿದ್ದು ಹತ್ತಿರದಲ್ಲಿ ಪುಷ್ಕರಣಿ ಇದೆ. ಇದರ ಬಳಿಯಲ್ಲಿಯೇ ಭೂತಪ್ಪನ ಗುಡಿ ಸಾಲು ಮಂಟಪಗಳು ಕಾಣಬಹುದು.
ಲೋಕದೊಳಲು ಗ್ರಾಮದಲ್ಲಿ ಉತ್ಸವಮೂರ್ತಿಗಾಗಿಯೇ ದೇವಾಲಯವನ್ನು ನಿರ್ಮಿಸಲಾಗಿದೆ. ಬೆಟ್ಟವು ದೂರ ಇರುವ ಕಾರಣಕ್ಕೆ ಅದೇ ದೇವರ ಹೆಸರಿನಲ್ಲಿ ಗ್ರಾಮದಲ್ಲಿ ಉತ್ಸವ ಆಚರಣೆಗಳಿಗೆ ಅನುಕೂಲವಾಗಲೆಂದು ದೇವಾಲಯ ನಿರ್ಮಿಸಲಾಗಿದೆ. ದೇವಾಲಯದ ಸಭಾಮಂಟಪದಲ್ಲಿ ಭೂತಪ್ಪ ಮತ್ತು ಕಬ್ಬಿಣದ ಬಾಣಪ್ಪಗಳನ್ನು ಇಡಲಾಗಿದೆ.ಇದನ್ನು ಹಬ್ಬ ಆಚರಣೆಗಳಿಗೆ ಹೊರಡಿಸಲಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...