ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 23 : ಚಿತ್ರದುರ್ಗ ಬೆಂಗಳೂರು ಸೇರಿದಂತೆ 30 ಕಡೆ ಇಡಿ ಅಧಿಕಾರಿಗಳು ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಹಾಗೂ ಅವರ ಸಹೋದರರು ಮತ್ತು ವ್ಯವಹಾರ ಪಾಲುದಾರರ ಮನೆಗಳ ಮೇಲೆ ದಾಳಿ ನಡೆಸಿರುವುದರಿಂದ ದೃತಿಗೆಡುವ ಅಗತ್ಯವಿಲ್ಲ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆಂದು ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್ ಮತ್ತು ಅವರ ಬೆಂಬಲಿಗರು ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಶನಿವಾರ ತಮ್ಮ ನೈತಿಕ ಶಕ್ತಿ ಪ್ರದರ್ಶಿಸಿದರು.
ಕಳೆದ ಇಪ್ಪತ್ತು ವರ್ಷಗಳಿಂದ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಶಾಸಕರಿರಲಿಲ್ಲ. 2023 ರ ಚುನಾವಣೆಯಲ್ಲಿ ಕೆ.ಸಿ.ವೀರೆಂದ್ರಪಪ್ಪಿರವರನ್ನು 53 ಸಾವಿರ ಮತಗಳ ಅಂತರದಿಂದ ಗೆಲ್ಲಿಸಿಕೊಂಡಿದ್ದೇವೆ. ಅಭಿವೃದ್ದಿಯನ್ನೇ ಕಾಣದ ಐತಿಹಾಸಿಕ ಚಿತ್ರದುರ್ಗ ಇನ್ನೇನು ಅಭಿವೃದ್ದಿ ಕಡೆ ಸಾಗಬೇಕೆನ್ನುಷ್ಟರಲ್ಲಿ ಇಡಿ ಅಧಿಕಾರಿಗಳು ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರ ಮೇಲೆ ದಾಳಿ ನಡೆಸಿರುವುದು ರಾಜಕೀಯ ದುರುದ್ದೇಶದಿಂದ ಕೂಡಿರಬಹುದೇನೋ ಎನ್ನುವ ಸಂಶಯ ಕಾಡುತ್ತಿದೆ. ದಾಳಿ ನಡೆಸುವ ಅಧಿಕಾರ ಇಡಿ ಅಧಿಕಾರಿಗಳಿಗಿದೆ. ಹಾಗಂತ ಮಾನಸಿಕವಾಗಿ ನೋವು ಕೊಡುವುದು ಸರಿಯಲ್ಲ. ಆನ್ಲೈನ್ ಬೆಟ್ಟಿಂಗ್ ದಂಧೆ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪ ಸಾಬೀತಾದರೆ ಶಿಕ್ಷೆ ವಿಧಿಸಲು ಕಾನೂನಿದೆ. 2016 ರಲ್ಲಿಯೂ ದಾಳಿ ನಡೆದಿದ್ದನ್ನು ಆರ್.ಕೆ.ಸರ್ದಾರ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಮೆಹಬೂಬ್ಖಾನ್, ರಿಯಾಜ್, ಆರ್.ಕೆ.ನಯಾಜ್, ವಸೀಂ, ವಲಿ, ರಫಿ, ಸೈಯದ್ ಮೊಹಿದ್ದೀನ್(ಚೋಟು) ಅಬ್ದುಲ್ಖಯ್ಯೂಂ ಇನ್ನು ಅನೇಕರು ಈ ಸಂದರ್ಭದಲ್ಲಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















