ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ಈಗ ಜೈಲು ಸೇರಿದ್ದಾರೆ. ಜಾಮೀನು ರದ್ದಾಗದಂತೆ ನೋಡಿಕೊಳ್ಳುವುದಕ್ಕೆ ನಾನಾ ಕಾರಣಗಳನ್ನ ಸುಪ್ರೀಂ ಕೋರ್ಟ್ ಗೆ ನೀಡಿದ್ದರು. ಆದರೂ ಅದ್ಯಾವುದನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ಇಟ್ಟುಕೊಳ್ಳದೆ ಜಾಮೀನು ರದ್ದು ಮಾಡಿತ್ತು. ಈಗ ಮತ್ತೆ ಜೈಲು ಸೇರಿರುವವರನ್ನ ಕರೆತರುವುದಕ್ಕೆ ಜಾಮೀನು ಸಿಗುವ ಸಾಧ್ಯತೆ ಇದೆಯಾ ಎಂಬುದು ಹಲವರ ಪ್ರಶ್ನೆ ಆ ಸಂಬಂಧ ಪವಿತ್ರಾ ಗೌಡ ಪರ ವಕೀಲರಾದ ಬಾಲನ್ ರಿಯಾಕ್ಷನ್ ಕೊಟ್ಟಿದ್ದಾರೆ.
ಚಾರ್ಜ್ ಶೀಟ್ ಹಾಕಿದ್ದಾರೆ. ಚಾರ್ಜ್ ಶೀಟ್ 173 CRPC ಕೆಳಗಡೆ ಹಾಕಿದ್ದಾರೆ. 9-2024 ನಲ್ಲಿ ಆಗಿರೋದು. ಅದಾದ ಮೇಲೆ ಕಾಪಿ ಕೊಟ್ಟಿದ್ದಾರೆ. ಅದು 207 CRPC ಮೇರೆಗೆ ಕಾಪಿ ಕೊಟ್ಟಿದ್ದಾರೆ. 209 CRPC ಕಮಿಟಿಯಲ್ ಮಾಡಿದ್ದಾರೆ. ಕಾನೂನು ಬದಲಾವಣೆಯಾಗಿದೆ. ಸೆಂಟ್ರಲ್ ನೋಟಿಫಿಕೇಷನ್ ಪ್ರಕಾರ 1.7.2024. ತದ ನಂತರ ಏನೇ ಪೆಟಿಶಿಷನ್ ಅಗ್ಲಿ, ಯಾವುದೆ ಮೊಕದ್ದಮೆ ರಿಜಿಸ್ಟರ್ ದಾಖಲು ಮಾಡಿಕೊಂಡರೆ ಅದು BNSS ನಲ್ಲಿಯೇ ಆಗಬೇಕು.
ಹೈಕೋರ್ಟ್ ನಲ್ಲಿ ಸಿಕ್ತು ಸುಪ್ರೀಂ ಕೋರ್ಟ್ ನಲ್ಲಿ ರದ್ದಾಯ್ತು. ಕಾನೂನು ಹೇಳುತ್ತೆ ಅದು ಮಾಡಬಾರದು, ಆಗಿದೆ. ಕೋರ್ಟ್ ಅಂದ್ರೆ ಕಾನೂನು. ಕಾನೂನು ಅಂದ್ರೆ ಪ್ರೊಸೆಸ್. ನಾನಕಿರುವುದು ಬೇಲ್ ನಾಟ್ ಜೈಲು. ಅವರು ವಾದ ಮಾಡಬೇಕು. ನನ್ನ ಕಡೆ ಕಾನೂನು ಇದೆ, ಜಡ್ಜ್ ಮೆಂಟ್ ಇದೆ. ಅವರ ಕಡೆ ಹಳೆ ಕಾನೂನು ಇದೆ. ಹಳೆ ಕಾನೂನು ಕೆಲಸಕ್ಕೆ ಬರುತ್ತಾ ಅಥವಾ ಹೊಸ ಕಾನೂನು ಬರುತ್ತಾ ನೋಡ್ಬೇಕು ಅಂತ ಡೈಲಾಗ್ ರೀತಿ ಹೊಡೆದಿದ್ದಾರೆ.






