ರಾಯಚೂರು: ಮಂತ್ರಾಲಯದ ರಾಯರಿಗೆ ಕೋಟಿ ಕೋಟಿ ಭಕ್ತರು. ನೆನಪಾದಾಗೆಲ್ಲ ರಾಯರ ಸನ್ನಿಧಿಗೆ ಜನ ಹೋಗ್ತಾರೆ. ಸಮಸ್ಯೆಗಳಿಗೆ ರಾಯರಿದ್ದಾರೆ ಅಂತ ಹೇಳಿದ್ರೆ ಸಾಕು ಆ ಸಮಸ್ಯೆಗಳು ನಮ್ಮ ಬಳಿ ಸುಳಿಯುವುದೇ ಇಲ್ಲ ಎಂಬ ನಂಬಿಕೆ ಅಪಾರವಾದದ್ದಾಗಿದೆ. ಹೀಗಾಗಿ ಬಂದ ಭಕ್ತರು ಹರಕೆ ರೂಪದಲ್ಲಿ ಕಾಣಿಕೆಯನ್ನು ಅರ್ಪಿಸುತ್ತಾರೆ. ಕಾಣಿಕೆ ಹುಂಡಿಯಲ್ಲಿ ರಾಯರಿಗೆ ಅರ್ಪಿಸಿದ ಭಕ್ತರ ಕಾಣಿಕೆಯನ್ನು ಇಂದು ಏಣಿಕೆ ಮಾಡಿದ್ದಾರೆ.
ಕಳೆದ 22 ದಿನದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದೆ. ಈ 22 ದಿನದಲ್ಲಿ ಸುಮಾರು 3.35 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಹಣ, ಚಿನ್ನ, ಬೆಳ್ಳಿ ವಸ್ತುಗಳನ್ನು ಭಕ್ತರು ಕಾಣಿಕೆ ರೂಪದಲ್ಲಿ ನೀಡಿಲಾಗಿದೆ. ಈ ಮೂಲಕ ಕೋಟ್ಯಾಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ. ಆಗಸ್ಟ್ ತಿಂಗಳಲ್ಲಿಯೇ ಆರಾಧನಾ ಮಹೋತ್ಸವ ಕೂಡ ನಡೆದಿದೆ. ಮಾಮೂಲಿ ಹೋಗುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಹೋಗಿದ್ದಾರೆ. ಕಳೆದ 22 ದಿನಗಳಲ್ಲಿ ಸಂಗ್ರಹವಾದ ಕಾಣಿಕೆಯಲ್ಲಿ 3,24,52,256 ರೂಪಾಯಿ ನೋಟುಗಳು ಇದೆ.
10,79,,500 ರೂಒಅಯಿ ನಾಣ್ಯಗಳು ಸಂಗ್ರಹವಾಗಿದೆ. ಕಳೆದ 22 ದಿನದಲ್ಲಿ ಒಟ್ಟು 3,35,31,756 ರೂಪಾಯಿ ಕಾಣಿಕೆ ಸಂಗ್ರಹವಾಗಿದೆ. ಇನ್ನೂ 74 ಗ್ರಾಂ ಚಿನ್ನ, 1440 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಮಂತ್ರಾಲಯ ಮಠದಲ್ಲಿ ಪ್ರಾರಂಭವಾ್ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಕರಸೇವಕರು ಭಾಗಿಯಾಗುವ ಮೂಲಕ ಭಕ್ತರು ಕಾಣಿಕೆ ರೂಪದಲ್ಲಿ ನೀಡಿರುವ ಹುಂಡಿ ಏಣಿಕೆ ಮಾಡಿದರು. ರಾಯರ ಮಠಕ್ಕೆ ಇಂದಿಗೂ ಬರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.


