ವಿಶೇಷ ಲೇಖನ
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821
ಪ್ರಪಂಚದಲ್ಲಿ 5ನೇ ದೊಡ್ಡದಾದ ಭೂಭಾಗವಾಗಿದೆ. ಇದರ ವಿಸ್ತೀರ್ಣ ಸುಮಾರು 14,200,000 km2 ಈ ಪ್ರದೇಶವು ಸಂಪೂರ್ಣವಾಗಿ ಹಿಮಗಡ್ಡೆಯ ಪಲಕದಿಂದ ಆವರಿಸಿದೆ. ಇದರ ದಪ್ಪ ಸುಮಾರು 1.9km ಎಂದು ವಿಜ್ಞಾನಿಗಳಿಂದ ಅಂದಾಜಿಸಲಾಗಿದೆ. ಈ ಪ್ರದೇಶವು ಒಣ ಭೂಮಿ, ಹೆಚ್ಚಿನ ಶೀತ ಮತ್ತು ಹಿಮದಿಂದ ಆವರಿಸಿದೆ. ಇಲ್ಲಿನ ಸರಾಸರಿ ಉಷ್ಣಾಂಶ -43.50 ಸೆಂಟಿಗ್ರೇಡ್ ಬೇಸಿಗೆ ಕಾಲದಲ್ಲಿ 6 ತಿಂಗಳು ಹಲಗು ಬೆಳಕು, ಚಳಿಗಾದಲ್ಲಿ 6 ತಿಂಗಳು ಕತ್ತಲೆಯಲ್ಲಿರುತ್ತದೆ. ಇದಕ್ಕೆ ಕಾರಣ ಭೂಮಿಯ ಅಕ್ಷ (Tilt) ವಾಲಿಕೆಯಿಂದ.
ದಕ್ಷಿಣ ಧೃವದಲ್ಲಿ ಯಾವ ದೇಶಗಳು ಇಲ್ಲವಾದರೂ ಇದು ಎಲ್ಲರಿಗೂ ಮುಖ್ಯವಾದ ಪ್ರದೇಶ. ಇದನ್ನು ಮನಗಂಡ ಕೆಲವು ದೇಶಗಳು ಒಟ್ಟುಗೂಡಿ ಒಂದು ಒಪ್ಪಂದವನ್ನು ಮಾಡಿಕೊಂಡವು. ಇದನ್ನು ಅಂಟಾರ್ಟಿಕಾ ಒಪ್ಪಂದವೆಂದು ಕರೆಯಲಾಗುತ್ತದೆ. ವಿಶ್ವದ 12 ಪ್ರಮುಖ ರಾಷ್ಟ್ರಗಳಾದ ಉತ್ತರ ಅಮೆರಿಕ, ಸಂಯುಕ್ತ ಸಂಸ್ಥಾನ, ಜಪಾನ್, ದಕ್ಷಿಣ ಆಫ್ರಿಕಾ, ಬೆಲ್ಜಿಯಂ, ನಾರ್ವೆ, ಫ್ರಾನ್ಸ್, ನ್ಯೂಜಿಲ್ಯಾಂಡ್, ಅಂದಿನ ರಷ್ಯಾ, ಚಲಿ, ಅರ್ಜೆಂಟೈನಾ ಮತ್ತು ಆಸ್ಟ್ರೇಲಿಯಾ ದೇಶಗಳ ಪ್ರತಿನಿಧಿಗಳು ಒಟ್ಟುಗೂಡಿ ಒಂದು ಒಪ್ಪಂದಕ್ಕೆ ಬಂದರು. ಈ ಒಪ್ಪಂದದ ಪ್ರಕಾರ ಅಂಟಾರ್ಟಿಕಾ ಪ್ರದೇಶವನ್ನು ಶಾಂತಿವಲಯವನ್ನಾಗಿ ಕಾಪಾಡಿಕೊಂಡು ಬರುವುದಲ್ಲದೇ ಇಲ್ಲಿ ವಿಜ್ಞಾನ ಬೆಳೆಯಲು ಸಂಶೋಧನೆ ನಡೆಸಲು ಎಲ್ಲ ಸೌಕರ್ಯ ಮಾಡಿಕೊಡಲು ನಿರ್ಧರಿಸಲಾಯಿತು. ಇಂದು ಇಲ್ಲಿ ವಿಜ್ಞಾನಿಗಳು ಮಾತ್ರ ಕಂಡುಬರುತ್ತಾರೆ. ಇಲ್ಲಿ ಅವರಿಗೆ ಸಂಶೋಧನೆ ನಡೆಸಲು ಎಲ್ಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಒಪ್ಪಂದದ ಕೆಲವು ಮುಖ್ಯ ಧ್ಯೇಯಗಳು.
• ಈ ಪ್ರದೇಶಕ್ಕೆ ವಿಜ್ಞಾನಿಗಳಿಗೆ ಮತ್ತು ಪ್ರವಾಸಿಗರಿಗೆ ಮಾತ್ರ ಪ್ರವೇಶ.
• ಅಂಟಾರ್ಟಿಕಾ ಜಾರಿಯಲ್ಲಿರುವಾಗ ಈ ಪ್ರದೇಶ ಯಾವ ದೇಶದ ಹಿಡಿತಕ್ಕೂ ಬರುವುದಿಲ್ಲ. ಎಲ್ಲ ದೇಶಗಳ ಜನರಿಗೆ ಮುಕ್ತ ಪ್ರವೇಶ ಕಲ್ಪಸಲಾಗಿದೆ.
• ಇಲ್ಲಿ ಸಂಶೋಧನೆ ನಡೆಸಲು ಎಲ್ಲ ಸೌಕರ್ಯಗಳನ್ನು ಮಾಡಿಕೊಡಲಾಗುವುದು. ವಿಜ್ಞಾನಿಗಳು ಬಂದು ಇಲ್ಲಿ ನೆಲಸಬಹುದು.
• ಇಲ್ಲ ಅಣುಸ್ಫೋಟ ನಡೆಸಬಾರದು. ಅಣು ತ್ಯಾಜ್ಯ(ಕಸ)ವನ್ನು ಇಲ್ಲಿ ವಿನಿಯೋಗಿಸಬಾರದು.
ಇಂಡಿಯಾ ದೇಶವೂ ಸೇರಿದಂತೆ 45 ರಾಷ್ಟ್ರಗಳು 1959ರಲ್ಲಿ ಈ ಒಪ್ಪಂದಕ್ಕೆ ಸಹಿ ಮಾಡಿವೆ.
ವಿಶೇಷ ಲೇಖನ
ಜೆ. ಪರಶುರಾಮ
ನಿವೃತ್ತ ಹಿರಿಯ ಭೂವಿಜ್ಞಾನಿ
ಗೌರವಾಧ್ಯಕ್ಷರು, ವಿ.ಕೆ.ಎಸ್., ಚಿತ್ರದುರ್ಗ
ಸದಸ್ಯರು, ಬೆಂಗಳೂರು ಸೌತ್ ಸೆಂಟರ್ (ಒ.)
ಮೊ : 94483 38821



