Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಮ್ಮೂರು ನಮ್ಮ ಹೆಮ್ಮೆ | ಚಿತ್ರದುರ್ಗ : ಚಿಕ್ಕಬೆನ್ನೂರು ಗ್ರಾಮದ ಪರಿಚಯ

---Advertisement---

ವಿಶೇಷ ಲೇಖನ
ಡಾ. ಸಂತೋಷ್ ಕೆ. ವಿ.
ಹೊಳಲ್ಕೆರೆ, ಚಿತ್ರದುರ್ಗ
ಮೊ : 9342466936

ಸುದ್ದಿಒನ್

ಚಿಕ್ಕಬೆನ್ನೂರು ಗ್ರಾಮವು ಪಂಚಾಯಿತಿ ಮುಖ್ಯ ಕೇಂದ್ರವಾಗಿದ್ದು, ಚಿತ್ರದುರ್ಗದಿಂದ 21 ಕಿಲೋಮೀಟರ್ ದೂರ ವಾಯುವ್ಯಕ್ಕೆ , ಚಿತ್ರದುರ್ಗ- ದಾವಣಗೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಗ್ರಾಮಕ್ಕೆ ಹಳೆಗ್ರಾಮ ನಿವೇಶನ ಇರುವ ಬಗ್ಗೆ ಸ್ಥಳೀಯರಿಗೆ ಮಾಹಿತಿ ಇರುವುದಿಲ್ಲ.

ಹೆಸರಿನ ಮೂಲ : ಹಿರಿಯ ಸಂಶೋಧಕರ ಪ್ರಕಾರ ಬೆನ್ನೂರು ಎಂದರೆ ಎತ್ತರದ ಪ್ರದೇಶದಿಂದ ಇಳಿಜಾರಿನ ನಂತರ ಬರುವ ಸಮತಟ್ಟು ಭೂಪ್ರದೇಶಕ್ಕೆ ಬೆನ್ನೂರು ಎಂಬ ಅರ್ಥವಿದೆ. ಇದಕ್ಕೆ ಅನ್ವರ್ಥಕವಾಗುವಂತೆ ಈ ಗ್ರಾಮದ ಉತ್ತರಕ್ಕೆ ಇರುವ ಪ್ರದೇಶದಿಂದ ಈ ಗ್ರಾಮದ ಕಡೆಗೆ ಇಳಿಜಾರು ಪ್ರದೇಶ ಹಾಗೂ ಭೌಗೋಳಿಕ ಲಕ್ಷಣ ಕಂಡುಬರುತ್ತದೆ. ಈ ಗ್ರಾಮದ ಹೆಸರು ಭೂವಾಚಕವಾಗಿದೆ. ಇದರ ಪಕ್ಕದಲ್ಲಿ ಇರುವ ಹಿರೇಬೆನ್ನೂರು ಗ್ರಾಮದಿಂದ ಇದನ್ನು ಪ್ರತ್ಯೇಕವಾಗಿ ಗುರುತಿಸಲು ಚಿಕ್ಕಬೆನ್ನೂರು ಎಂದು ಈ ಗ್ರಾಮಕ್ಕೆ ಹೆಸರು ಬಂದಿದೆ.

 

ಭೌಗೋಳಿಕವಾಗಿ ಗಮನಿಸಬಹುದಾದರೆ ಗ್ರಾಮವು ಸಂಪೂರ್ಣ ಬಯಲು ಸೀಮೆಯ ವಾತಾವರಣ ಹೊಂದಿದ್ದು,
ಸುತ್ತಲೂ ಸಮತಟ್ಟು ಭೂ ಪ್ರದೇಶ ಗ್ರಾಮದ ಸುತ್ತಲೂ ಹರಡಿದೆ. ಮಳೆಯಾಶ್ರಿತ ಬೆಳೆಗಳ ಜೊತೆಗೆ ಅಡಿಕೆ ಮಂತಾದ ವಾಣಿಜ್ಯ ಬೆಳೆಗಳತ್ತಲೂ ರೈತರು ಇತ್ತೀಚಿನ ದಿನಗಳಲ್ಲಿ ಗಮನಹರಿಸಿದ್ದಾರೆ.

ವೀರಗಲ್ಲು :
ಗ್ರಾಮದಲ್ಲಿ ಹಿಂದೆ 10 ಕ್ಕೂ ಅಧಿಕ ವೀರಗಲ್ಲುಗಳಿದ್ದು, ಅದರ ಮಹತ್ವ ತಿಳಿಯದೆ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸಮಯದಲ್ಲಿ ವೀರಗಲ್ಲುಗಳನ್ನು ಬೇರೆ ಕಡೆ ಸ್ಥಳಾಂತರ ಮಾಡಲಾಗಿದೆ ಎನ್ನಲಾಗುತ್ತದೆ. ಗ್ರಾಮದಲ್ಲಿ ಎಲ್ಲಿಯೂ ಕೂಡ ಈಗ ವೀರಗಲ್ಲುಗಳು,ಅದರ ಕುರುಹುಗಳು ಕಂಡು ಬರುವುದಿಲ್ಲ.

ಗ್ರಾಮದಲ್ಲಿರುವ ದೇವಾಲಯಗಳು :

1.ಆಂಜನೇಯ ಸ್ವಾಮಿ ದೇವಸ್ಥಾನ*
ಗ್ರಾಮದ ಮಧ್ಯಭಾಗದಲ್ಲಿ ದಕ್ಷಿಣಾಭಿಮುಖವಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ಗರ್ಭಗೃಹದಲ್ಲಿ  ಆಂಜನೇಯನ ಶಿಲ್ಪವಿದ್ದು, ಪೂಜಿಸಲಾಗುತ್ತದೆ. ಗರ್ಭಗೃಹ ಹಾಗೂ ಸಭಾಮಂಟಪಗಳು ಇರುವ ದೇವಾಲಯ ಇದಾಗಿದ್ದು. ರಾಮನವಮಿಯ ಸಮಯದಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ. ಈ ದೇವಾಲಯದ ಬಳಿಯಲ್ಲಿ ಕರಿಗಲ್ಲು ಇದ್ದು , ಇದು ಗ್ರಾಮದ ಹುಗಿ ಹೊಯ್ದ ಸ್ಥಳವಾಗಿದೆ. ಇದರ ಬಡಿಯಲ್ಲಿ ಬರಹಗಲ್ಲು ಇದ್ದು ಮಳೆ ಬಾರದ ವರ್ಷಗಳಲ್ಲಿ ಇದಕ್ಕೆ ನೂರಾ ಒಂದು ಬಿಂದಿಗೆ ನೀರನ್ನು ಅಭಿಷೇಕ ಮಾಡುವ ಆಚರಣೆ ಇದೆ. ಇದು ದೇವಾಲಯಗಳಿಗೆ ಹಿಂದೆ ದಾನ ಕೊಟ್ಟ ಜಮೀನು, ಭೂಮಿಯ ಮೇರೆಗಲ್ಲಾಗಿರುತ್ತದೆ ಎಂದು ಸಂಶೋಧಕರು ಅಭಿಪ್ರಾಯ ಪಡುತ್ತಾರೆ. ಸ್ಥಳೀಯರು ಇದಕ್ಕೆ ನಿಪ್ಪೇಗಲ್ಲು ಎನ್ನುತ್ತಾರೆ.

2.ಮಾರಮ್ಮ ದೇವಿ ದೇವಸ್ಥಾನ :
ಗ್ರಾಮದ ಮಧ್ಯಭಾಗದಲ್ಲಿ ಪೂರ್ವಾಭಿಮುಖವಾಗಿ ಸ್ಥಳೀಯ ಶೈಲಿಯಲ್ಲಿ ಈ ದೇವಾಲಯವಿದೆ.

3.ದುರ್ಗಾಂಬಿಕಾ ದೇವಿ ದೇವಾಲಯ :
ಗ್ರಾಮದ ಮಧ್ಯಭಾಗದಲ್ಲಿ ಸ್ಥಳೀಯ ಶೈಲಿಯಲ್ಲಿ ಈ ದೇವಸ್ಥಾನ ನಿರ್ಮಾಣ ಮಾಡಲಾಗಿದೆ.

4.ಬಸವೇಶ್ವರ (ಈಶ್ವರ) ದೇವಸ್ಥಾನ:
ಗ್ರಾಮದ ಮಧ್ಯ ಭಾಗದಲ್ಲಿರುವ ಈ ದೇವಾಲಯವು ಉತ್ತರಾಭಿಮುಖವಾಗಿ ನಿರ್ಮಾಣ ಮಾಡಲಾಗಿದೆ. ಗರ್ಭಗೃಹ ಹಾಗೂ ಸಭಾ ಮಂಟಪಗಳಿರುವ ಈ ದೇವಾಲಯದ ಗರ್ಭಗೃಹದಲ್ಲಿ ಈಶ್ವರಲಿಂಗ ಹಾಗೂ ಬಸವಣ್ಣ ದೇವರನ್ನು ಪೂಜಿಸಲಾಗುತ್ತದೆ. ಅದರ ಹಿಂಭಾಗದಲ್ಲಿ ಪಾರ್ವತಿ ಪರಮೇಶ್ವರ ಶಿಲ್ಪಗಳಿವೆ. ಪ್ರತಿ ವರ್ಷ ಈ ದೇವರ ಕೆಂಡೋತ್ಸವ ವಿಶೇಷವಾಗಿ ನಡೆಸಲಾಗುತ್ತದೆ. ಇದರ ಜೊತೆಗೆ ಗ್ರಾಮದ ಮಧ್ಯಭಾಗದಲ್ಲಿ ಈಶ್ವರ , ಗೌರಸಂದ್ರ ಮಾರಮ್ಮ ದೇವಸ್ಥಾನವಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...