ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 15 : ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳನ್ನು ನೆನಪಿಸಿಕೊಳ್ಳುವಂತಹ ಸುಸಂದರ್ಭ, ಸ್ವತಂತ್ರಕ್ಕಾಗಿ ಹೋರಾಡಿದಂತಹ ಮಹನೀಯರ ತ್ಯಾಗ ಬಲಿದಾನಗಳ ಬಗ್ಗೆ ಯುವ ಪೀಳಿಗೆಗೆ ಅರ್ಥೈಸಿಕೊಂಡು ಅವರ ತತ್ವ ಆದರ್ಶಗಳನ್ನ ಮೈಗೂಡಿಸಿಕೊಳ್ಳಿ ಎಂದು ಶಾಸಕ ಕೆ.ಸಿ ವೀರೇಂದ್ರ ಪಪ್ಪಿ ಅವರು ತಿಳಿಸಿದರು.
ತಾಲೂಕಿನ ದಂಡಿಕುರುಬರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಪಪ್ಪಿಸ್ ಸ್ಟೂಡೆಂಟ್ ವಿಂಗ್ ವತಿಯಿಂದ ಮಕ್ಕಳಿಗೆ ಪುಸ್ತಕಗಳನ್ನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು, ಭಾರತ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಸಾಕಷ್ಟು ಮಹನೀಯರ ತ್ಯಾಗ ಬಲಿದಾನ ಕಾರಣವಾಗಿದೆ, ಇತಿಹಾಸ ಪುಟಗಳನ್ನ ಓದಿದಾಗ ಮಾತ್ರ ನಮಗೆ ಸ್ವಾತಂತ್ರ್ಯದ ಹೋರಾಟದ ಹಾದಿ ಎಷ್ಟೊಂದು ಕಠೋರವಾಗಿತ್ತು ಎನ್ನುವುದು ತಿಳಿಯುತ್ತದೆ, ಸ್ವಾತಂತ್ರೋತ್ಸವದ ಕಥೆಗಳನ್ನು ಪ್ರತಿಯೊಬ್ಬ ಭಾರತೀಯ ನಾಗರಿಕರು ತಿಳಿದುಕೊಳ್ಳಬೇಕೆಂದು ತಿಳಿಸಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವುದರಲ್ಲಿ ಮಹಾತ್ಮ ಗಾಂಧೀಜಿಯವರ ಪಾತ್ರ ಸಾಕಷ್ಟು ಇದೆ ಇವರ ಜೊತೆಗೆ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್, ಲಾಲ್ ಬಹುದ್ದೂರ್ ಶಾಸ್ತ್ರಿ, ರಾಣಿ ಲಕ್ಷ್ಮೀಬಾಯಿ, ಭಗತ್ ಸಿಂಗ್, ಚಂದ್ರಶೇಖರ್ ಆಜಾದ್, ಸರೋಜಿನಿ ನಾಯ್ಡು, ಬಾಲಗಂಗಾಧರ ತಿಲಕ್, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಹಾಗೂ ಇತರೆ ಮಹನೀಯರ ತ್ಯಾಗದ ಸಂಕೇತವೇ ಭಾರತದ ಕ್ಕೆ ಸ್ವಾತಂತ್ರ್ಯದಕ್ಕಿದೆ, ಇಂತಹ ಸ್ವಾತಂತ್ರ ಹೋರಾಟಗಾರನ್ನ ಪ್ರತಿದಿನ ನೆನೆಯುವುದು ಅತ್ಯಂತ ಅವಶ್ಯಕ ಎಂದು ತಿಳಿಸಿದರು.
ಭಾರತ ದೇಶ ವೈವಿಧ್ಯತೆಯಿಂದ ಕೂಡಿರುವಂತಹ ದೇಶವಾಗಿದ್ದು ದೇಶ ಶೇಕಡ 50ರಷ್ಟು ಯುವ ಸಮುದಾಯದಿಂದ ತುಂಬಿದೆ, ಇದರಲ್ಲಿ ಅನೇಕ ಯುವ ಸಮುದಾಯ ದುಚ್ಛಟಗಳಿಗೆ ಬರಿಯಾಗಿ ತಮ್ಮ ಜೀವವನ್ನು ಕಳೆದುಕೊಳ್ಳುತ್ತಿದ್ದಾರೆ, ದುಶ್ಚಟಗಳಿಗೆ ಬಲಿಯಾಗದೆ ದೇಶದಲ್ಲಿ ಉತ್ತಮ ಪ್ರಜೆಯಾಗಿ ಹಾಗೂ ಮನೆಗೆ ಉತ್ತಮ ಮಕ್ಕಳಾಗಿ ಬದುಕು ಕಟ್ಟಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು.
ಪಪ್ಪಿಸ್ ಸ್ಟೂಡೆಂಟ್ ವಿಂಗ್ ಅಧ್ಯಕ್ಷ ರವೀಂದ್ರ ಚಿನ್ನು ಅವರು ಮಾತನಾಡಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕರು ಸಾಮಾಜಿಕ ಕಳಕಳೆ ಉಳ್ಳಂತಹ ವ್ಯಕ್ತಿ, ಸರ್ಕಾರಿ ಅಭಿವೃದ್ಧಿಗಳ ಕೆಲಸದಲ್ಲಿ ವಿಚಾರದಲ್ಲಿ ಮೊದಲು ದಾಪುಗಾಲು ಹಾಕುತ್ತಿರುವಂತಹ ರಾಜಕಾರಣಿ, ಜೊತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುವುದರ ಮೂಲಕ ಯುವ ಸಮುದಾಯಕ್ಕೆ ಆಸರೆಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಪ್ಪಿಸ್ ಸ್ಟೂಡೆಂಟ್ ವಿಂಗ್ ವತಿಯಿಂದ ದಂಡಿ ಕುರುಬರಹಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣಾಧಿಕಾರಿ ನಾಗಭೂಷಣ್, ಚಿತ್ರದುರ್ಗ ತಹಶೀಲ್ದಾರ್ ಗೋವಿಂದರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್, ದಂಡಿನ ಕುರುಬರಟ್ಟಿ ಪಿಡಿಒ ಶಿಲ್ಪ, ಮುಖ್ಯ ಶಿಕ್ಷಕಿ ಲೋಲಾಕ್ಷಮ್ಮ, ರಾಜ್ಯ ಎಸ್ಡಿಎಂಸಿ ಉಪಾಧ್ಯಕ್ಷ ಗಂಗಾಧರ್, ದಂಡಿನ ಕುರುಬರಹಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆ ಎಸ್ ಡಿಎಂಸಿ ಅಧ್ಯಕ್ಷ ಶಿವಮೂರ್ತಿ, ಕಾಟೆಶ್, ಡಾ. ದೀಕ್ಷಿತ್, ಪಪ್ಪಿಸ್ ಸ್ಟೂಡೆಂಟ್ ವಿಂಗ್ ಸದಸ್ಯರುಗಳಾದ ಸಂದೀಪ್, ಸಲೀಂ, ಜಾಫರ್, ಉದಯ್ ಕುಮಾರ್, ರಫೀಕ್, ರಾಕೇಶ್, ನಿಜಾಂ, ಅಜಯ್ ಮನೋಹರ್, ರುದ್ರೇಶ್, ವರುಣ್ ಕುಮಾರ್, ಮಲ್ಲಿಕ್, ರವಿಕುಮಾರ್, ವಿಜಯ್, ರಾಘವೇಂದ್ರ, ಹಾಗೂ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಇದ್ದರು.


